ಸಿಡಿಲಿನ ಹೊಡೆತಕ್ಕೆ ಗುಜರಾತಿನಲ್ಲಿ 7 ಹಾಗೂ ಬಿಹಾರದಲ್ಲಿ 11 ಜನರ ಸಾವು

ಗುಡುಗು ಸಿಡಿಲು ಸಹಿತ  ಭಾರಿ ಮಳೆಯಿಂದಾಗಿ ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ ಕನಿಷ್ಠ ಏಳು ಜನರು ಪ್ರಾಣ ಕಳೆದುಕೊಂಡರೆ,  11 ಜನರು ಮಂಗಳವಾರ (ಜೂನ್ 30) ಬಿಹಾರದಲ್ಲಿ ಸಾವನ್ನಪ್ಪಿದ್ದಾರೆ.

Last Updated : Jun 30, 2020, 09:45 PM IST
ಸಿಡಿಲಿನ ಹೊಡೆತಕ್ಕೆ ಗುಜರಾತಿನಲ್ಲಿ 7 ಹಾಗೂ ಬಿಹಾರದಲ್ಲಿ 11 ಜನರ ಸಾವು

ನವದೆಹಲಿ: ಗುಡುಗು ಸಿಡಿಲು ಸಹಿತ  ಭಾರಿ ಮಳೆಯಿಂದಾಗಿ ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ ಕನಿಷ್ಠ ಏಳು ಜನರು ಪ್ರಾಣ ಕಳೆದುಕೊಂಡರೆ,  11 ಜನರು ಮಂಗಳವಾರ (ಜೂನ್ 30) ಬಿಹಾರದಲ್ಲಿ ಸಾವನ್ನಪ್ಪಿದ್ದಾರೆ.

ಸೌರಾಷ್ಟ್ರ ಪ್ರದೇಶದಲ್ಲಿ, ರಾಜ್‌ಕೋಟ್, ಜಮ್ನಗರ್, ಗಿರ್ ಸೋಮನಾಥ್, ಜುನಾಗಡ  ಮತ್ತು ಭಾವನಗರ ಜಿಲ್ಲೆಗಳು ಹೆಚ್ಚು ಪೀಡಿತ ಸ್ಥಳಗಳಾಗಿದ್ದರೆ, ಬಿಹಾರದಲ್ಲಿ ಭಾರೀ ಮಳೆಯು ಸರನ್, ಪಾಟ್ನಾ, ನವಾಡಾ, ಲಖಿಸರೈ ಮತ್ತು ಜಮುಯಿ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದೆ.

'ಜಾಮನಗರ ಜಿಲ್ಲೆಯ ಲಾಲ್ಪುರದ ರಕ್ಕಾ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ 35 ವರ್ಷದ ಮಹಿಳೆ ಮತ್ತು ಆಕೆಯ 12 ವರ್ಷದ ಮಗ ಮಿಂಚಿನ ಹೊಡೆತಕ್ಕೆ ಸಿಲುಕಿದ್ದು, ದೇವಭೂಮಿ ದ್ವಾರಕಾ ಜಿಲ್ಲೆಯ ವಿರಾಮದಾಡ್ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಪಿಟಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿದೆ.

ಹವಾಮಾನ ಇಲಾಖೆಯ ಪ್ರಕಾರ, ಜಮ್ನಗರದ ಕಲವಾಡ್‌ನಲ್ಲಿ ಮಂಗಳವಾರ ಮಧ್ಯಾಹ್ನ ಕೇವಲ ಎರಡು ಗಂಟೆಗಳಲ್ಲಿ ಗರಿಷ್ಠ 73 ಮಿ.ಮೀ ಮಳೆಯಾಗಿದೆ, ಆದರೆ ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ಮತ್ತು ಜಮ್ನಗರ ಜಿಲ್ಲೆಯ ಧ್ರೋಲ್ ಸಂಜೆ 4 ಗಂಟೆಯವರೆಗೆ 48 ಮಿ.ಮೀ ಮಳೆಯಾಗಿದೆ.ಬಿಹಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ - ಸರನ್‌ನಲ್ಲಿ 5 ಜನರು, ಪಾಟ್ನಾ, ನವಾಡಾದಲ್ಲಿ ತಲಾ 2, ಲಖಿಸರೈ ಮತ್ತು ಜಮುಯಿಗಳಲ್ಲಿ ತಲಾ 1 ಜನರು.

ಏತನ್ಮಧ್ಯೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆ ಸೂಚಿಸಿದರು. ಪ್ರಾಣ ಕಳೆದುಕೊಂಡ 11 ಜನರ ಸಂಬಂಧಿಕರಿಗೆ ಸಿಎಂ ನಿತೀಶ್ ತಲಾ 4 ಲಕ್ಷ ರೂ.ಪರಿಹಾರವನ್ನು ಘೋಷಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ, ಬಿಹಾರದಲ್ಲಿ ಈವರೆಗೆ 103 ಜನರು ಸಾವನ್ನಪ್ಪಿದ್ದರೆ, ಇನ್ನೂ ಅನೇಕರು ಗಾಯಗೊಂಡಿದ್ದಾರೆ ಮತ್ತು ಸಿಡಿಲಿನಿಂದಾಗಿ ರಾಜ್ಯಾದ್ಯಂತ ಆಸ್ತಿಗಳಿಗೆ ವ್ಯಾಪಕ ಹಾನಿಯಾಗಿದೆ.ಜುಲೈ 2 ರವರೆಗೆ ಭಾರಿ ಮಳೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದಕ್ಕೂ ಮೊದಲು ಜೂನ್ 28 ರಂದು ಸಿಎಂ ನಿತೀಶ್ ಅವರು ಮಹಾನಂದ, ಕೋಸಿ, ಬಾಗ್ಮತಿ ಮತ್ತು ಗಂಡಕ್ ನದಿಗಳ ಅಪಾಯಕಾರಿ ಮಟ್ಟವನ್ನು ಪರಿಶೀಲಿಸಲು ಸಭೆ ನಡೆಸಿದರು.ಈ ನಾಲ್ಕು ನದಿಗಳು ಅಪಾಯದ ಮಟ್ಟಕ್ಕಿಂತ ಹರಿಯುವುದರೊಂದಿಗೆ, ಉತ್ತರ ಬಿಹಾರದ ಕೆಲವು ಭಾಗಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

More Stories

Trending News