ಚಿಲ್ಲಿಚಿಕನ್‌ ಹೆಸರಿನಲ್ಲಿ ಬಾವಲಿ ಮಾಂಸ ಮಾರಾಟ! ಜನರ ಆರೋಗ್ಯದ ಜೊತೆ ಆಟವಾಡಿದ ಪುಂಡರ ಬಂಧನ

ಚಿಕನ್‌ಚಿಲ್ಲಿ ಹೆಸರಿನಲ್ಲಿ ಅಕ್ರಮವಾಗಿ ಬಾವಲಿಯ ಮಾಂಸವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದ್ದು ಸತ್ಯ ತಿಳಿದ ಸಾರ್ವಜನಿಕರಿಗೆ ದೊಡ್ಡ ಆಘಾತವಾಗಿದೆ. ಸದ್ಯಕ್ಕೆ ಈ ಕೃತ್ಯವೆಸಗಿದ ಇಬ್ಬರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. 

Written by - Yashaswini V | Last Updated : Aug 1, 2025, 11:23 AM IST
  • ‘ಚಿಲ್ಲಿ ಚಿಕನ್’ ಹೆಸರಿನಲ್ಲಿ ಬಾವಲಿ ಮಾಂಸ ಮಾರಾಟ
  • ಬಾವಲಿ ಮಾಂಸದಲ್ಲಿ ನಿಪಾ, ಎಬೋಲಾ, ಮಾರ್ಬರ್ಗ್ ವೈರಸ್‌ಗಳಂತಹ ಅಪಾಯಕಾರಿ ವೈರಸ್‌ಗಳು ಇರುವ ಸಾಧ್ಯತೆ.
  • ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ಭೀಕರ ಪರಿಣಾಮದ ಬಗ್ಗೆ ಎಚ್ಚರಿಕೆ
ಚಿಲ್ಲಿಚಿಕನ್‌ ಹೆಸರಿನಲ್ಲಿ ಬಾವಲಿ ಮಾಂಸ ಮಾರಾಟ! ಜನರ ಆರೋಗ್ಯದ ಜೊತೆ ಆಟವಾಡಿದ ಪುಂಡರ ಬಂಧನ

Bat meat sold as Chilli Chicken: ಗ್ರಾಹಕರಿಗೆ ಚಿಲ್ಲಿ ಚಿಕನ್ ಎಂದು ನಂಬಿಸಿ ಬಾವಲಿ ಮಾಂಸವನ್ನು ಮಾರಾಟ ಮಾಡುತ್ತಿದ್ದ ಆಘಾತಕಾರಿ ಘಟನೆ ತಮಿಳುನಾಡಿನ ಸೆಲಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 'ಚಿಲ್ಲಿ ಚಿಕನ್' ಎಂಬ ಜನಪ್ರಿಯ ಖಾದ್ಯದ ಹೆಸರಿನಲ್ಲಿ ಚಿಕನ್‌ನ ಬದಲಾಗಿ ಬಾವಲಿ ಮಾಂಸವನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಭೀಕರ ಸತ್ಯ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ತನಿಖೆಯಿಂದ ಪತ್ತೆಯಾಗಿದೆ. 

Add Zee News as a Preferred Source

ತಮಿಳುನಾಡಿನ ಸೆಲಂ ಜಿಲ್ಲೆಯಲ್ಲಿ ರಸ್ತೆಯ ಪಕ್ಕದಲ್ಲಿನ ಆಹಾರ ಅಂಗಡಿಯಲ್ಲಿ 'ಚಿಲ್ಲಿ ಚಿಕನ್' ಮಾರುತ್ತಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ಅನುಮಾನಾಸ್ಪದಗೊಂದು ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು ಅವರು  ಮಾರುತ್ತಿದ್ದ ಮಾಂಸದ ಮಾದರಿಯನ್ನು ಜಪ್ತಿ ಮಾಡಿ ತಜ್ಞರಿಗೆ ಪರಿಶೀಲನೆಗೆ ನೀಡಿದ್ದರು. ಇದೀಗ ತನಿಖಾ ವರದಿಯಲ್ಲಿ ಇದು ಬಾವಲಿಯ ಮಾಂಸ ಎಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು 36 ವರ್ಷದ ಕಮಲ್ ಮತ್ತು 35 ವರ್ಷದ ಸೆಲ್ವಂ ಎಂದು ಗುರುತಿಸಲಾಗಿದೆ.  

ಇದನ್ನೂ ಓದಿ- ಏನಿದು ಮಾಲೆಗಾಂ ಸ್ಪೋಟ ಪ್ರಕರಣ? ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಬಂಧಿತ ಆರೋಪಿಗಳು ರಸ್ತೆ ಬದಿ ತಮ್ಮ ಫಾಸ್ಟ್‌ಫುಡ್ ಅಂಗಡಿಗಳಲ್ಲಿ ಕೋಳಿ ಮಾಂಸದ ಜೊತೆ ಈ ಬಾವಲಿ ಮಾಂಸವನ್ನು ಮಿಶ್ರಣ ಮಾಡಿ ಚಿಲ್ಲಿ ಚಿಕನ್ ಎಂದು ಮಾರಾಟ ಮಾಡುತ್ತಿದ್ದರು. ಈ ಇಬ್ಬರೂ ಬಾವಲಿಗಳನ್ನು ಕಾಡಿನಿಂದ ಹಿಡಿದು, ಅವುಗಳನ್ನು ಕೊಂದು ಮಾಂಸವನ್ನು ಅಡುಗೆ ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಬಾವಲಿ ಮಾಂಸ ಮಾನವನ ಆರೋಗ್ಯಕ್ಕೆ ತೀವ್ರ ಅಪಾಯವನ್ನುಂಟು ಮಾಡುತ್ತದೆ. ಈ ಬಾವಲಿಗಳ ದೇಹದಲ್ಲಿ ಹಲವಾರು ಜೂನೋಟಿಕ್ ವೈರಸ್‌ಗಳು ಅಡಗಿರುತ್ತವೆ. ಉದಾಹರಣೆಗೆ ನಿಪಾ ವೈರಸ್, ಎಬೋಲಾ, ಮಾರ್ಬರ್ಗ್ ಇತ್ಯಾದಿ. ಇಂತಹ ಮಾಂಸವನ್ನು ಸರಿಯಾದ ಪ್ರಕ್ರಿಯೆ ಇಲ್ಲದೆ ತಯಾರಿಸಿ ಮಾರಾಟ ಮಾಡುವುದು ಕೇವಲ ಅಪರಾಧವಲ್ಲ, ಅದು ನೇರವಾಗಿ ಸಾರ್ವಜನಿಕ ಆರೋಗ್ಯವನ್ನು ಗಂಭೀರವಾಗಿ ಅಪಾಯಕ್ಕೆ ಒಳಪಡಿಸುತ್ತದೆ.

ಇದನ್ನೂ ಓದಿ- ತಿಂಗಳಿಗೆ 70 ಸಾವಿರ ರೂ. ಸಂಬಳ.. "Eleven" ಸ್ಪೆಲ್ಲಿಂಗ್‌ ಬರೆಯಲು ಬಾರದ ಸರ್ಕಾರಿ ಶಿಕ್ಷಕ.. ಬರೆದಿದ್ದೇನು ವಿಡಿಯೋ ನೋಡಿ...

ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಹಾರ ಸುರಕ್ಷತೆ ಇಲಾಖೆಯು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ರೀತಿಯ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಮಾರಾಟವಾಗುವ ಆಹಾರದ ಗುಣಮಟ್ಟದ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಕಾಡುಪ್ರಾಣಿಗಳ ಮಾಂಸವನ್ನು ಬಳಸುವುದು ಅಕ್ರಮವಾಗಿದ್ದು, ಈ ಪ್ರಕರಣವನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ವರದಿಯಾಗಿದೆ. 

ಸದ್ಯಕ್ಕೆ ಈ ಇಬ್ಬರು ಆರೋಪಿಗಳನ್ನು ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಬೇಟೆಗಾರರು ಮತ್ತು ವ್ಯಾಪಾರಿಗಳ ವ್ಯಾಪಕ ಜಾಲದೊಂದಿಗೆ ಸಂಭಾವ್ಯ ಸಂಪರ್ಕವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News