ಅಯೋಧ್ಯ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2019 ರ ಚುನಾವಣೆಯ ಒಳಗಡೆ ನಿರ್ಮಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್ ಸ್ವಲ್ಪ ತಾಳ್ಮೆಯಿಂದ ಇದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಡಿ ಎಂದು ಎಲ್ಲ ಹಿಂದೂ ಸ್ವಾಮೀಜಿಗಳಿಗೆ ಕರೆ ನೀಡಿದರು.
ಆದಿತ್ಯನಾಥ್ ಅವರ ಈ ಹೇಳಿಕೆಯು ಇತ್ತೀಚಿಗೆ ಬಿಜೆಪಿ ನಾಯಕ ರಾಮ್ ವಿಲಾಸ್ ವೇದಾಂತಿ ಮಂದಿರವನ್ನು ಕೆಡವಲು ಬಾಬರ್ ಯಾವುದೇ ಕೋರ್ಟ್ ನಿರ್ಣಯವನ್ನು ತಂದಿರಲಿಲ್ಲ ಅದೇ ರೀತಿಯಾಗಿ ಬಾಬ್ರಿ ಮಸೀದಿಯನ್ನು 1992 ರಲ್ಲಿ ಯಾವುದೇ ಕೋರ್ಟ್ ನಿರ್ದೇಶನದಂತೆ ಮಾಡಿಲ್ಲ ಎಂದು ಹೇಳಿಕೆ ನೀಡಿದ ನಂತರ ಬಂದಿದೆ.
ಅವರು ಇನ್ನು ಮುಂದುವರೆದು ರಾಮ ಲಲ್ಲಾ ಮೂರ್ತಿ ತಕ್ಷಣ ಸ್ಥಳದಲ್ಲಿ ಕಂಡು ಬಂದು ಅದರ ನಿರ್ಮಾಣ ಕೂಡ ಒಂದೇ ದಿನದಲ್ಲಿ ಪ್ರಾರಂಭವಾಗಿತ್ತು ಎಂದು ರಾಮ್ ವಿಲಾಸ್ ವೇದಾಂತಿ ತಿಳಿಸಿದ್ದರು.