ಕೊರೊನಾ ವಾಕ್ಸಿನ್ ಗೆ 2 ಲಕ್ಷ ದಾನ ನೀಡಿದ ಬೀಡಿ ಕಾರ್ಮಿಕ ; ನಂತರ ತನ್ನ ಖಾತೆಯಲ್ಲಿ ಉಳಿದದ್ದು ಇಷ್ಟೇ..!
ಈ ವ್ಯಕ್ತಿ ಕೇರಳದ ಕಣ್ಣೂರು ನಿವಾಸಿ. ಮೊದಲೇ ಹೇಳಿದ ಹಾಗೆ ವೃತ್ತಿಯಲ್ಲಿ ಬೀಡಿ ಕಾರ್ಮಿಕ. ಕರೋನಾದಿಂದಾಗಿ ಇಡೀ ದೇಶವೇ ಕಷ್ಟ ಪಡುತ್ತಿರುವುದನ್ನು ನೋಡಿ, ತನ್ನ ಕೈಲಾದ ಸಹಾಯ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಅದಕ್ಕಾಗಿ ತಾನು ಇಲ್ಲಿವರೆಗೆ ಕೂಡಿಟ್ಟಿದ್ದ ಹಣವನ್ನೇಲ್ಲಾ ಹೊರ ತೆಗೆಯುತ್ತಾರೆ.
ಕೇರಳ : ಇವರು ವೃತ್ತಿಯಲ್ಲಿ ಬೀಡಿ ಕಾರ್ಮಿಕ. ಹೇಳಿಕೊಳ್ಳುವ ಸಿರಿವಂತನೇನಲ್ಲ. ಆದರೆ ಹೃದಯ ಶ್ರೀಮಂತ. ಹೌದು, ಕರೋನಾ (Coronavirus) ಕಾಲದಲ್ಲಿ ಒಬ್ಬರು ಮತ್ತೊಬ್ಬರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಲೇ ಇದ್ದಾರೆ. ಅದರ ಜೊತೆಗೆ ತಮ್ಮ ಖಾತೆಯಲ್ಲಿ ಸಾಧ್ಯವಾದಷ್ಟು ದುಡ್ಡು ಉಳಿಸುವ ಕೆಲಸ ಕೂಡಾ ಮಾಡುತ್ತಿದ್ದಾರೆ. ಯಾಕಂದರೆ ಕರೋನಾ ಕಾಲದಲ್ಲಿ ಯಾವಾಗ ಹಣದ ಅಗತ್ಯ ಬೀಳುತ್ತದೆಯೋ ಹೇಳಲು ಸಾಧ್ಯವಿಲ್ಲ. ಈಗ ಬೇರೆ ಎಲ್ಲಾ ಕಡೆ ಲಾಕ್ ಡೌನ್ (Lockdown). ಇಷ್ಟೆಲ್ಲಾಇದ್ದರೂ ಈ ವ್ಯಕ್ತಿ ಮಾಡಿರುವ ಕೆಲಸ ಪ್ರಶಂಸಾರ್ಹವೇ ಸರಿ.
ಈ ವ್ಯಕ್ತಿ ಕೇರಳದ ಕಣ್ಣೂರು ನಿವಾಸಿ. ಮೊದಲೇ ಹೇಳಿದ ಹಾಗೆ ವೃತ್ತಿಯಲ್ಲಿ ಬೀಡಿ ಕಾರ್ಮಿಕ. ಕರೋನಾದಿಂದಾಗಿ (Coronavirus) ಇಡೀ ದೇಶವೇ ಕಷ್ಟ ಪಡುತ್ತಿರುವುದನ್ನು ನೋಡಿ, ತನ್ನ ಕೈಲಾದ ಸಹಾಯ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಅದಕ್ಕಾಗಿ ತಾನು ಇಲ್ಲಿವರೆಗೆ ಕೂಡಿಟ್ಟಿದ್ದ ಹಣವನ್ನೇಲ್ಲಾ (Money)ಹೊರ ತೆಗೆಯುತ್ತಾರೆ. ತನ್ನಲ್ಲಿದ್ದ 2 ಲಕ್ಷ ರೂಪಾಯಿಗಳನ್ನು ಕರೋನಾ ಲಸಿಕೆಗಾಗಿ (Corona Vaccine) ದಾನ ನೀಡುತ್ತಾರೆ. ಕರೋನಾ ಲಸಿಕೆ ಖರೀದಿ ಮಾಡುವ ಸಲುವಾಗಿ ಸಿಎಂ ಡಿಸಾಸ್ಟರ್ ರಿಲೀಫ್ ಫಂಡ್ ಗೆ ತನ್ನಲ್ಲಿದ್ದ 2 ಲಕ್ಷ ರೂಪಾಯಿಗಳನ್ನು ದಾನ ಮಾಡುತ್ತಾರೆ. ಇವರು ಸಿಎಂ ರಿಲೀಫ್ ಫಂಡ್ ಗೆ ದಾನ ನೀಡಿದ ನಂತರ ಇವರ ಖಾತೆಯಲ್ಲಿ ಉಳಿದದ್ದು ಕೇವಲ 850 ರೂಪಾಯಿ.
ಇದು ಸುವರ್ಣಾವಕಾಶ ..! 8ನೇ ಕ್ಲಾಸ್ ಪಾಸಾದರೂ ಸಾಕು, ರೈಲ್ವೆಯಲ್ಲಿ ನೌಕರಿ
ಈ ವ್ಯಕ್ತಿಯ ಕಾರ್ಯದ ಬಗ್ಗೆ ಕೇರಳ ಹಣಕಾಸು ಸಚಿವ ಥಾಮಸ್ ಇಸಾಕ್ ಟ್ವೀಟ್ (Tweet) ಮಾಡಿದ್ದಾರೆ. ಇದಾದ ಮೇಲೆ ಸೋಡಿಯಲ್ ಮೀಡಿಯಾದಲ್ಲಿ ಈ ವ್ಯಕ್ತಿಯ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ (Social Media) ಈ ವ್ಯಕ್ತಿಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಮನುಷ್ಯನಲ್ಲಿ ಹಣ ರುವುದು ಮಾತ್ರ ಮುಖ್ಯವಲ್ಲ, ಮನ್ಯಷ್ಯನ ಮನಸ್ಸು ದೊಡ್ಡದಾಗಿರಬೇಕು ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ : Googleನಲ್ಲಿ ಈ ವಿಷಯಗಳನ್ನು ಮರೆತೂ ಕೂಡ ಸರ್ಚ್ ಮಾಡದಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.