ನವದೆಹಲಿ: ಭಾರತೀಯ ರೇಲ್ವೆ ಇಲಾಖೆ ಮಂಗಳವಾರ ಅಂದರೆ ದಿನಾಂಕ 07.01.2020 ರಂದು ತನ್ನ ಒಟ್ಟು 319 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆ ವತಿಯಿಂದ ಕೆಲ ಮೇಲ್, ಎಕ್ಸ್ಪ್ರೆಸ್ ಹಾಗೂ ಕೆಲ ವಿಶೇಷ ರೈಲುಗಳ ಪ್ರಯಾಣವನ್ನು ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ. ನೀವು ಸಹ ಒಂದು ವೇಳೆ ಈ ರೈಲು ಮೂಲಕ ಪ್ರಯಾಣ ನಡೆಸಲು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದಾರೆ, ನಿಮ್ಮ ರೈಲಿನ ಸ್ಟೇಟಸ್ ಅನ್ನು ಒಮ್ಮೆಪರಿಶೀಲಿಸಿ. ಹೆಚ್ಚಿನ ಪ್ಯಾಸೆಂಜರ್ ರೈಲುಗಳನ್ನು ರದ್ದುಪಡಿಸಲಾಗಿದೆ. ರೈಲ್ವೆಯ ವಿವಿಧ ವಲಯಗಳಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯಗಳ ಹಿನ್ನೆಲೆ, ದೇಶಾದ್ಯಂತ ಹಲವಾರು ಟ್ರಾಫಿಕ್ ಬ್ಲಾಕ್ಗಳನ್ನು ನಿರ್ಮಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ರೈಲುಗಳನ್ನು ಉತ್ತಮವಾಗಿ ನಿರ್ವಹಿಸಲು ಈ ರೈಲುಗಳನ್ನು ರದ್ದುಪಡಿಸಲಾಗಿದೆ. ರದ್ದಾದ ರೈಲುಗಳ ಪಟ್ಟಿಯನ್ನು ರೈಲ್ವೆ ವಿಭಾಗದ ಅಧಿಕೃತ ವೆಬ್ಸೈಟ್ ಆಗಿರುವ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (ನ್ಯಾಷನಲ್ ಟ್ರೈನ್ ಎನ್ಕ್ವೈರಿ ಸಿಸ್ಟಮ್) ಮೇಲೆ ಪ್ರಕಟಗೊಳಿಸಲಾಗಿದೆ.
ರೈಲು ವಿಭಾಗ ಈಗಾಗಲೇ ರದ್ದುಪಡಿಸಲಾರಿರುವ ರೈಲುಗಳ ಪಟ್ಟಿಯನ್ನು ರೈಲ್ವೆ ವೆಬ್ಸೈಟ್ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆಯಲ್ಲಿ ಪ್ರಕಟಿಸಿದೆ. ಜೊತೆಗೆ, ನಿಲ್ದಾಣಗಳಲ್ಲಿಯೂ ಕೂಡ ಪ್ರಕಟಣೆಗಳ ಮೂಲಕ ರದ್ದಾಗಿರುವ ರೈಲುಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ. 139 ಈ SMS ಸೇವೆಯ ಮೂಲಕ ಕೂಡ ನೀವು ರದ್ದಾದ ರೈಲುಗಳ ಸ್ಥಿತಿಯನ್ನು ತಿಳಿಯಬಹುದಾಗಿದೆ. ಇದೇ ವೇಳೆ, ರೈಲು ರದ್ದಾದ ಪ್ರಯಾಣಿಕರು, ತಮ್ಮ ಟಿಕೆಟ್ ಅನ್ನು ರದ್ದುಗೊಳಿಸುವ ಮೂಲಕ ತಮ್ಮ ಸಂಪೂರ್ಣ ಹಣವನ್ನು ಹಿಂಪಡೆಯಬಹುದಾಗಿದೆ. ಅಷ್ಟೇ ಅಲ್ಲ, ನೀವು ಪ್ರಯಾಣಿಸುವ ಮಾರ್ಗದಲ್ಲಿ ಮತ್ತೊಂದು ರೈಲಿನ ಆಯ್ಕೆಯನ್ನು ಸಹ ನೀವು ಮಾಡಬಹುದಾಗಿದೆ.
ಭಾರತೀಯ ರೈಲ್ವೆ ಇಲಾಖೆ ದೇಶಾದ್ಯಂತ ನಿತ್ಯ ಸುಮಾರು 12600 ರೈಲುಗಳನ್ನು ಓಡಿಸುತ್ತದೆ. ಪ್ರತಿ ದಿನ ಸುಮಾರು 23 ಮಿಲಿಯನ್ ಜನರು ಈ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಕಾಲಕಾಲಕ್ಕೆ ಹಳಿಗಳನ್ನು ಸರಿಪಡಿಸಲು ಭಾರತೀಯ ರೈಲ್ವೆ ಇಲಾಖೆ ದೇಶದ ವಿವಿಧ ಭಾಗಗಳಲ್ಲಿ ಟ್ರಾಫಿಕ್ ಬ್ಲಾಕ್ಗಳನ್ನು ಹಲವಾರು ಬಾರಿ ನಿರ್ಮಿಸುತ್ತದೆ. ಈ ಕಾರಣದಿಂದಾಗಿ, ರೈಲುಗಳ ಪ್ರಯಾಣವನ್ನು ಉತ್ತಮವಾಗಿ ನಿರ್ವಹಿಸಲು ರೈಲುಗಳನ್ನು ರದ್ದುಗೊಳಿಸಬೇಕಾಗುತ್ತದೆ.