ಡೇಟಿಂಗ್ ಆ್ಯಪ್ ಬಳಸುವ ಮುನ್ನ ಎಚ್ಚರ... ಎಚ್ಚರ..! ವ್ಯಕ್ತಿಗೆ ಬರೋಬ್ಬರಿ ₹1.29 ಕೋಟಿ ವಂಚನೆ

ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮಾಡಿಕೊಂಡ ಸ್ನೇಹ ನಿಮಗೆ ದುಬಾರಿಯಾಗಿ ಪರಿಣಮಿಸಬಹುದು. ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಮಾಡಿಕೊಂಡ ಸ್ನೇಹದಿಂದ ಬರೋಬ್ಬರಿ ₹1.29 ಕೋಟಿ (US$1.2 ಮಿಲಿಯನ್) ಕಳೆದುಕೊಂಡಿದ್ದಾನೆ. ನೀವು ಡೇಟಿಂಗ್ ಅಪ್ಲಿಕೇಶನ್‌ಗಳನ್ನ ಬಳಸುತ್ತಿದ್ದರೆ, ಕೂಡಲೇ ಎಚ್ಚರಿಕೆ ವಹಿಸಬೇಕು...

Written by - Puttaraj K Alur | Last Updated : Nov 16, 2025, 06:18 PM IST
  • ಡೇಟಿಂಗ್ ಆ್ಯಪ್‌ಗಳು ನಿಮಗೆ ದೊಡ್ಡ ತಲೆನೋವಾಗಿ ಪರಿಣಮಿಸಬಹುದು
  • ಬೆಂಗಳೂರಿನ ವ್ಯಕ್ತಿಗೆ ಬರೋಬ್ಬರಿ ₹1.29 ಕೋಟಿ ವಂಚಿಸಿದ ಮಹಿಳೆ
  • ಹೆಚ್ಚಿನ ಆದಾಯದ ಆಮೀಷವೊಡ್ಡಿ ಮೋಸ ಮಾಡಿದ ಮಹಿಳೆ ವಿರುದ್ಧ ಕೇಸ್‌
ಡೇಟಿಂಗ್ ಆ್ಯಪ್ ಬಳಸುವ ಮುನ್ನ ಎಚ್ಚರ... ಎಚ್ಚರ..! ವ್ಯಕ್ತಿಗೆ ಬರೋಬ್ಬರಿ ₹1.29 ಕೋಟಿ ವಂಚನೆ

Dating app fraud: ಡೇಟಿಂಗ್ ಆ್ಯಪ್‌ಗಳು ನಿಮಗೆ ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಇತ್ತೀಚೆಗೆ ಡೇಟಿಂಗ್ ಆ್ಯಪ್ ಮೂಲಕ ವ್ಯಕ್ತಿಯೊಬ್ಬರಿ ಬರೋಬ್ಬರಿ 1.29 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಮಹಿಳೆಯೊಬ್ಬರು ಡೇಟಿಂಗ್ ಆ್ಯಪ್‌ ಮೂಲಕ 42 ವರ್ಷದ ವ್ಯಕ್ತಿಗೆ ವಂಚಿಸಿದ್ದಾರೆ ವರದಿಗಳ ಪ್ರಕಾರ, ಮಹಿಳೆ ಮೊದಲು ಡೇಟಿಂಗ್ ಆ್ಯಪ್‌ನಲ್ಲಿ ವ್ಯಕ್ತಿಯ ಸ್ನೇಹ ಬೆಳೆಸಿಕೊಂಡು ನಂತರ ಹೂಡಿಕೆಯ ಹೆಸರಿನಲ್ಲಿ ಈ ದೊಡ್ಡ ವಂಚನೆಯ ಕೃತ್ಯ ಎಸಗಿದ್ದಾಳೆ. ಬೆಂಗಳೂರು ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ಐಟಿ ಕಾಯ್ದೆ 2000 ಮತ್ತು ಬಿಎನ್‌ಎಸ್ 2023ರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Add Zee News as a Preferred Source

ಏನಿದು ವಂಚನೆ ಪ್ರಕರಣ..?

ಬೆಂಗಳೂರಿನ 42 ವರ್ಷದ ವ್ಯಕ್ತಿಯೊಬ್ಬ ಡೇಟಿಂಗ್ ಆ್ಯಪ್ ಮೂಲಕ ಮೇಘನಾ ರೆಡ್ಡಿ ಎಂಬ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಸ್ನೇಹ ಬೆಳೆದ ನಂತರ ಮಹಿಳೆ ಹೆಚ್ಚಿನ ಆದಾಯದ ಹೂಡಿಕೆಯ ಹೆಸರಿನಲ್ಲಿ ವೆಬ್‌ಸೈಟ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಆಫರ್ ನೀಡಿ ಮನವೊಲಿಸಿದ್ದಾಳೆ. ಆರೋಪಿ ಮಹಿಳೆ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಲ್ಲಿ ಹೆಚ್ಚು ರಿಟರ್ನ್ಸ್ ಸಿಗುತ್ತದೆ ಎಂದು ಸಲಹೆ ನೀಡಿದ್ದಾಳೆ. ಇದಲ್ಲದೆ ಮಹಿಳೆ ಭಾವನಾತ್ಮಕವಾಗಿ ಪ್ರಭಾವ ಬೀರುವ ಮೂಲಕ ವ್ಯಕ್ತಿಯನ್ನ ವಂಚಿಸಿದ್ದಾಳೆ. ಮಹಿಳೆಯ ಮೋಹಕ ಮಾತಿನ ಬಲೆಗೆ ಬಿದ್ದ ಜಗದೀಶ್ ಎಂಬ ವ್ಯಕ್ತಿ ನವೆಂಬರ್ 5 ಮತ್ತು 6ರಂದು ಹಲವಾರು ಬಾರಿ ಒಟ್ಟು 1.29 ಕೋಟಿ ರೂ.ಗಳನ್ನ ವರ್ಗಾಯಿಸಿದ್ದಾನೆ. ಪ್ರಸ್ತುತ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಇಡೀ ದೇಶವನ್ನೇ ವಶಪಡಿಸಿಕೊಂಡ ಬ್ರಿಟಿಷರ ನಿದ್ದೆಗೆಡಿಸಿದ ಭಾರತದ ಏಕೈಕ ರಾಜ್ಯ! ಧೈರ್ಯ, ಶೌರ್ಯಕ್ಕೆ ಹೆಸರುವಾಸಿಯಾದ ಈ ನೆಲ ಭಾರತೀಯರ ಹೆಮ್ಮೆ..

ಆಮೀಷವನ್ನ ಕುರುಡಾಗಿ ನಂಬಬೇಡಿ

ಡೇಟಿಂಗ್ ಆ್ಯಪ್‌ಗಳ ಮೂಲಕ ನೀವು ಯಾರೊಂದಿಗಾದರೂ ಸ್ನೇಹ ಬೆಳೆಸಿಕೊಂಡರೆ, ಅವರನ್ನ ಕುರುಡಾಗಿ ನಂಬಬೇಡಿ. ಇದಲ್ಲದೆ ಹಣ ವರ್ಗಾವಣೆ, ಹೂಡಿಕೆ ಇತ್ಯಾದಿಗಳನ್ನ ಒಳಗೊಂಡಿರುವ ವಂಚನೆಗಳಿಗೆ ಬಲಿಯಾಗಬೇಡಿ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಜನರನ್ನ ವಂಚಿಸಲು ಹೊಸ ಹೊಸ ವಿಧಾನಗಳನ್ನ ಹೆಚ್ಚಾಗಿ ಬಳಸುತ್ತಿದ್ದಾರೆ.

* ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳು, OTP, PIN, ಕ್ರೆಡಿಟ್ ಕಾರ್ಡ್ ಇತ್ಯಾದಿಗಳನ್ನ ಯಾರೊಂದಿಗೂ ಅಪ್ಪಿತಪ್ಪಿಯೂ ಹಂಚಿಕೊಳ್ಳಬೇಡಿ.
* ನಿಮಗೆ ಯಾರ ಮೇಲಾದರೂ ಸ್ವಲ್ಪವಾದರೂ ಅನುಮಾನ ಬಂದರೆ, ಸೈಬರ್ ಅಪರಾಧ ಠಾಣೆಗೆ ದೂರು ನೀಡಿ.
* ಪ್ರತಿ ವರ್ಷವೂ ಸೈಬರ್ ಅಪರಾಧಿಗಳು ಭಾರತದಲ್ಲಿ ಲಕ್ಷಾಂತರ ರೂಪಾಯಿಗಳನ್ನ ವಂಚಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಹೆಚ್ಚಿನ ಆದಾಯದ ಆಮೀಷಗಳ ಮೂಲಕ ಜನರನ್ನ ವಂಚಿಸುವ ಮೂಲಕ ಕೋಟಿ ಕೋಟಿ ಲಪಟಾಯಿಸುತ್ತಾರೆ. 

ಇದನ್ನೂ ಓದಿ: ಬಿಹಾರ ಸೋಲಿನ ನಂತರ ಸಿಎಂ ಸಿದ್ದರಾಮಯ್ಯ ಜೊತೆ ರಾಹುಲ್ ಗಾಂಧೀ ಮಹತ್ವದ ಸಭೆ...!

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News