ಕೊರೊನಾದಿಂದ ರಕ್ಷಣೆ ನೀಡಲು ಯಶಸ್ವಿಯಾದ Homeopathy

ಹೋಮಿಯೋಪತಿ ಔಷಧಿಯ ಸಹಾಯದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕೊರೊನಾ ಸೊಂಕಿತರನ್ನೂ ಕೂಡ ಗುಣಪಡಿಸಿ, ಹೊಸ ಪ್ರಕರಣಗಳನ್ನು ಸಹ ತಡೆಗಟ್ಟಲಾಗುತ್ತಿದೆ.

Last Updated : May 25, 2020, 05:01 PM IST
ಕೊರೊನಾದಿಂದ ರಕ್ಷಣೆ ನೀಡಲು ಯಶಸ್ವಿಯಾದ Homeopathy title=

ನವದೆಹಲಿ: ಇಡೀ ವಿಶ್ವಾದ್ಯಂತ ಇಂದು ಆರೋಗ್ಯ ತಜ್ಞರು ಕೊರೊನಾ ವೈರಸ್ ವಿರುದ್ಧ ಹೋರಾಡುವ ಲಸಿಕೆಯನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಭಾರತವೂ ಕೂಡ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುವ ಔಷಧಿ ಮತ್ತು ಲಸಿಕೆಯ ತಯಾರಿಕೆಯಲ್ಲಿ ತೊಡಗಿದೆ. ಆದರೆ, ಇದೀಗ ಭಾರತದಲ್ಲಿ ಹೋಮಿಯೋಪತಿ ಕೂಡ ಈ ಹೋರಾಟದಲ್ಲಿ ತನ್ನ ಕೈಜೋಡಿಸಿದೆ. ಹೋಮಿಯೋಪತಿ ಸಹಾಯದಿಂದ ರೋಗಿಗಳಲ್ಲಿನ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕೊರೊನಾ ಸೊಂಕಿತರನ್ನು ಕೂಡ ಗುಣಪಡಿಸಿ, ಹೊಸ ಪ್ರಕರಣಗಳನ್ನು ಸಹ ತಡೆಗಟ್ಟಲಾಗುತ್ತಿದೆ.

ಕಳೆದ ಸುಮಾರು 40 ವರ್ಷಗಳಿಂದ ಡಾ.ಜವಾಹರ್ ಷಾ ಅವರು ಮುಂಬೈನಲ್ಲಿ ಹೋಮಿಯೋಪತಿ ಪ್ರ್ಯಾಕ್ಟಿಸ್ ನಡೆಸುತ್ತಿದ್ದಾರೆ. ಅವರು ವಿಶ್ವದಾದ್ಯಂತ ಸುಮಾರು 100 ಹೋಮಿಯೋಪತಿ ವೈದ್ಯರ ಜೊತೆಗೆ ಸೇರಿಕೊಂಡು ವಿಶೇಷ ಔಷಧಿಯನ್ನು (CK1 ಹಾಗೂ CK2) ಅಭವೃದ್ಧಿಗೊಳಿಸಿದ್ದಾರೆ. ಈ ಔಷಧಿ ಮಾನವನ ದೇಹದಲ್ಲಿ ರೋಗನಿರೋಧಕ ಶತಿ ಹೆಚ್ಚಿಸಲು ಕಾರ್ಯ ಮಾಡುತ್ತದೆ. ಇದರ ಸೇವನೆಯಿಂದ ಯಾವುದೇ ರೋಗ ನಿಮ್ಮ ಹತ್ತಿರಕ್ಕೆ ಸುಳಿಯುವುದಿಲ್ಲ ಎನ್ನಲಾಗಿದೆ.

ಇದುವರೆಗೆ ಈ ಔಷಧಿಯ ಸಂಪೂರ್ಣ ಕಿಟ್ ಅನ್ನು ಸುಮಾರು 22000 ಪೋಲೀಸ್ ಸಿಬ್ಬಂದಿ, 4000 ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಮುಂಬೈನ ಧಾರಾವಿಯಲ್ಲಿ ವಾಸಿಸುತ್ತಿರುವ ಸುಮಾರು 2000 ಜನ ಸೇರಿದಂತೆ ಒಟ್ಟು 1 ಲಕ್ಷಕ್ಕೂ ಅಧಿಕ ಜನರಿಗೆ ನೀಡಲಾಗಿದೆ. ಈ ಔಷಧಿ psycho neuro endocrine ಮೇಲೆ ಪ್ರಭಾವ ಬೀರುತ್ತದೆ ಹಾಗೂ ಇದನ್ನು ಕೇಂದ್ರದ ಆಯುಶ್ ಸಚಿವಾಲಯ ನೀಡಿರುವ ಮಾರ್ಗಸೂಚಿಗಳ ಆಧಾರದ ಮೇಲೆ ಅಭಿವೃದ್ಧಿಗೊಳಿಸಲಾಗಿದೆ.

ಕೇಂದ್ರ ಸರ್ಕಾರ ಆಯುಶ್ ಸಚಿವಾಲಯ ಪ್ರಮಾಣೀಕರಿಸಿದ ಆರ್ಸೆನಿಕ್ ಪಾಚಿ ಹಾಗೂ ಕರ್ಪೂರ ಎಂ1 ಅನ್ನು ಈ ಔಷಧಿಯಲ್ಲಿ ಸೇರಿಸಲಾಗಿದ್ದು, ಇದಕ್ಕಾಗಿ ವಿದೇಶಗಳಿಂದಲೂ ಕೂಡ ಇದೀಗ ಭಾರಿ ಬೇಡಿಕೆ ನಿರ್ಮಾಣಗೊಂಡಿದೆ. ಈ ಔಷಧಿಯ ವಿಶೇಷತೆ ಎಂದರೆ ಈ ಔಷಧಿಯ ಕೋರ್ಸ್ ತಿಂಗಳಿಗೆ ಒಮ್ಮೆ ಮಾತ್ರ ತೆಗೆದುಕೊಳ್ಳಬೇಕು ಮತ್ತು ಇದರ ಕೋರ್ಸ್ 6 ದಿನಗಳದ್ದಾಗಿದೆ. ಮೊದಲು CK1 ಔಷಧಿಯನ್ನು ಸತತ ಮೂರು ದಿನಗಳ ಕಾಲ ಸೇವಿಸಬೇಕು. ಈ ಔಷಧಿಯನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಅದರ ನಂತರ CK2 ಔಷಧಿಯ ಬಳಕೆಯನ್ನು ಸತತ ಮೂರು ದಿನಗಳ ಕಾಲ ಮಾಡಬೇಕು. ಇದನ್ನೂ ಕೂಡ ದಿನಕ್ಕೆ ಮೂರು ಬಾರಿ ಸೇವಿಸಬೇಕು, ಹೀಗಾಗಿ ಒಂದು ತಿಂಗಳಿನಲ್ಲಿ ಈ ಔಷಧಿಯ ಕೋರ್ಸ್ 6 ದಿನಗಳದ್ದಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರು ದೇಶದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ. ಇಂತಹುದರಲ್ಲಿ ಅವರಿಗೂ ಸಹ ಈ ಔಷಧಿಯನ್ನು ನೀಡಬಹುದು ಎಂದು ಡಾ. ಷಾ ಹೇಳಿದ್ದಾರೆ. ಇದರಿಂದ ಅವರು ಕೊರೊನಾ ವೈರಸ್ ಗೆ ಸೋಂಕಿತರಾಗುವುದು ತಪ್ಪುತ್ತದೆ. ಈ ಔಷಧಿಯ ಖರ್ಚೂ ಕೂಡ ರೂ.15-ರೂ.20 ಮಾತ್ರ ಇದೆ ಎಂದು ಷಾ ಹೇಳಿದ್ದಾರೆ.

ಡಾ. ಷಾ ಅವರ ಪ್ರಕಾರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರಲ್ಲಿ ಕೊರೊನಾ ವೈರಸ್ ನ ಯಾವುದೇ ಲಕ್ಷಣಗಳಿಲ್ಲ ಆದರೂ ಕೂಡ ಅವರು ಕೊರೊನಾ ಟೆಸ್ಟ್ ಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಾರೆ. ಜೊತೆಗೆ ಕೊರೊನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆಯೂ ಕೂಡ ಇತರೆ ದೇಶಗಳ ತುಲನೆಯಲ್ಲಿ ಭಾರಿ ಕಡಿಮೆಯಾಗಿದೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಈ ಹೋಮಿಯೋಪತಿ ಔಷಧಿ ಜನರಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಮಹಾರಾಷ್ಟ್ರ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ. ಕೇಂದ್ರ ಸರ್ಕಾರದ ಆಯುಶ್ ಸಚಿವಾಲಯದ ಆದೇಶದ ಮೇರೆಗೆ ನಾವು ಆಯುರ್ವೇದ ಹಾಗೂ ಹೋಮಿಯೋಪತಿಗೆ ಸಂಬಂಧಿಸಿದ ಸೇವೆಗಳನ್ನು ಬಳಸುತ್ತಿದ್ದೇವೆ. ಇದಕ್ಕಾಗಿ ನಾವು ಸುಮಾರು 10 ಪರಿಣಿತ ವೈದ್ಯರ ಕಾರ್ಯಪಡೆಯನ್ನು ರಚಿಸಿದ್ದೇವೆ. ಇದರಲ್ಲಿ ಹೋಮಿಯೋಪತಿ ಮೂಲಕ ನಮಗೆ ಉತ್ತಮ ಫಲಿತಾಂಶಗಳು ಬಂದಿವೆ ಎಂದು ಹೇಳಿದ್ದಾರೆ.

ಡಾ. ಷಾ ಅವರು ಈ ಕಾರ್ಯಪಡೆಯ ಸದಸ್ಯರಾಗಿದ್ದು, ಈ ತಂಡವನ್ನು ಮಹಾರಾಷ್ಟ್ರ ಸರ್ಕಾರ ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರ ತಂಡದೊಂದಿಗೆ ಕೊರೊನೊ ವೈರಸ್ ವಿರುದ್ಧ ಹೋರಾಡಲು ರಚಿಸಿದೆ. ರೋಗಲಕ್ಷಣಗಳನ್ನು ಹೊಂದಿರದ ಆದರೆ ಕರೋನಾ ಸಕಾರಾತ್ಮಕವಾಗಿರುವ ಜನರಿಗೆ ಪ್ರತಿನಿತ್ಯ ಕರೆ ಮಾಡುವ ಮೂಲಕಸಲಹೆ ನೀಡುವುದು ಈ ಕಾರ್ಯಪಡೆಯ ಕಾರ್ಯವಾಗಿದೆ ಎಂದು ಟೋಪೆ ಹೇಳಿದ್ದಾರೆ. ಈ ಕರೆಗಳ ಮೂಲಕ ನಡೆಸಲಾಗುವ ಸಮಾಲೋಚನೆಯನ್ನು ಆಧರಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲಿನ ಭಾರ ಕೂಡ ಕಡಿಮೆಯಾಗಿದೆ. ಭಾರತದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಹೋಮಿಯೋಪತಿ ಕಾಲೇಜುಗಳಿದ್ದು, ಹೆಚ್ಚಿಯ ಸಂಖ್ಯೆಯಲ್ಲಿ ವೈದ್ಯರೂ ಕೂಡ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಜೊತೆಗೆ ವಿದೇಶಗಳಲ್ಲಿಯೂ ಕೂಡ ಒಂದು ಔಷಧಿಯ ಬೆಲೆಯನ್ನು 25-30 ಡಾಲರ್ ಇದೆ. ಆದರೆ, ಭಾರತದಲ್ಲಿ ಇದರ ಬೆಲೆ ತೀರಾ ಕಮ್ಮಿಯಾಗಿದೆ. ಹೀಗಾಗಿ ಭಾರತದಲ್ಲಿ ಇದೀಗ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಈ ಪ್ರಾಚೀನ ಚಿಕಿತ್ಸೆಯ ಪದ್ಧತಿಯನ್ನು ಬಳಸಲಾಗುತ್ತಿದೆ.

Trending News