Nitish Kumar : 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ?

Nitish Kumar net worth : ದೇಶಾದ್ಯಂತ ಎಲ್ಲರ ಗಮನ ಸೆಳೆದಿರುವ ಬಿಹಾರ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿವೆ. ಎನ್‌ಡಿಎ ಗೆಲುವು ಖಚಿತವಾಗುತ್ತಿದ್ದಂತೆ, ಎಲ್ಲರ ಗಮನ ನಿತೀಶ್ ಕುಮಾರ್ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ, ನಿತೀಶ್ ಕುಮಾರ್ ಅವರ ಆಸ್ತಿಗಳಿಗೆ ಸಂಬಂಧಿಸಿದ ವಿವರಗಳನ್ನು ಈಗ ತಿಳಿದುಕೊಳ್ಳೋಣ.

Written by - Krishna N K | Last Updated : Nov 14, 2025, 12:32 PM IST
    • ದೇಶಾದ್ಯಂತ ಎಲ್ಲರ ಗಮನ ಸೆಳೆದಿರುವ ಬಿಹಾರ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿವೆ.
    • ಎನ್‌ಡಿಎ ಗೆಲುವು ಖಚಿತವಾಗುತ್ತಿದ್ದಂತೆ, ಎಲ್ಲರ ಗಮನ ನಿತೀಶ್ ಕುಮಾರ್ ಮೇಲೆ ಬಿದ್ದಿದೆ.
    • ನಿತೀಶ್ ಕುಮಾರ್ ಅವರ ಆಸ್ತಿಗಳಿಗೆ ಸಂಬಂಧಿಸಿದ ವಿವರಗಳನ್ನು ಈಗ ತಿಳಿದುಕೊಳ್ಳೋಣ.
Nitish Kumar : 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ?

Bihar CM Nitish Kumar net worth : ಸುಮಾರು 20 ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಮತ್ತೆ ಅಧಿಕಾರದಲ್ಲಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆ ಈಗ ದೊಡ್ಡ ಚರ್ಚೆಯಾಗಿದೆ. ಎನ್‌ಡಿಎ ಬಹುಮತ ಪಡೆದರೆ ನಿತೀಶ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆಯೇ ಅಥವಾ ಬಿಜೆಪಿ ತನ್ನ ನಾಯಕನನ್ನು ಮುಂದಕ್ಕೆ ತರುತ್ತದೆಯೇ ಎಂಬ ಅನುಮಾನವಿದೆ. ಅದು ಹಾಗಿರಲಿ.. ಪ್ರಸ್ತುತ ನಿತೀಶ್‌ ಅವರ ಆಸ್ತಿ ಎಷ್ಟಿದೆ ಎನ್ನುವ ವಿಚಾರ ತಿಳಿಯೋಣ ಬನ್ನಿ..

Add Zee News as a Preferred Source

ನಿತೀಶ್ ಕುಮಾರ್ ಅವರ ಆಸ್ತಿ ವಿವರಗಳು : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಡಿಸೆಂಬರ್ 2024 ರ ಘೋಷಣೆಯ ಪ್ರಕಾರ, ಅವರ ಒಟ್ಟು ಆಸ್ತಿ 1.64 ಕೋಟಿ ರೂ. ಎಂದು ಘೋಷಣೆ ಮಾಡಿದ್ದಾರೆ. ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ..

ಇದನ್ನೂ ಓದಿ:ಭರ್ಜರಿ ಮುನ್ನಡೆ ಕಾಯ್ದುಕೊಂಡ 25 ವರ್ಷದ ಗಾಯಕಿ ಮೈಥಿಲಿ..! ಆಲಿನಗರ ಆಗುತ್ತಾ ಸೀತಾನಗರ?

ಡಿಸೆಂಬರ್ 31, 2024 ರಂದು ಕ್ಯಾಬಿನೆಟ್ ಸೆಕ್ರೆಟರಿಯೇಟ್ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಿಎಂ ಘೋಷಿಸಿಕೊಂಡಿರುವ ತಮ್ಮ ಆಸ್ತಿಯ ವಿವರ ಈ ರೀತಿ ಇದೆ.. ₹1.64 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದ್ದಾರೆ. ಒಟ್ಟು ಚರಾಸ್ತಿಗಳು ಸುಮಾರು ₹16,97,741.56 ಮೌಲ್ಯದ್ದಾಗಿದ್ದು, ಅವರ ಸ್ಥಿರ ಆಸ್ತಿಗಳು ₹1.48 ಕೋಟಿ ಮೌಲ್ಯದ್ದಾಗಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಅಷ್ಟೇ ಅಲ್ಲದೆ, ವಿವಿಧ ಬ್ಯಾಂಕ್‌ಗಳಲ್ಲಿ ₹21,052 ನಗದು ಮತ್ತು ಸುಮಾರು ₹60,811.56 ಹಣವನ್ನು ಹೊಂದಿದ್ದಾರೆ. ಜನವರಿ 2025 ರಲ್ಲಿ, ನವದೆಹಲಿಯ ದ್ವಾರಕಾದಲ್ಲಿರುವ ಸಹಕಾರಿ ವಸತಿ ಸಂಘದಲ್ಲಿ ಕೇವಲ ಒಂದು ವಸತಿ ಫ್ಲಾಟ್ ಹೊಂದಿದ್ದಾರೆ. 2023 ರಲ್ಲಿ, ₹16,484,632.69 ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದಿದ್ದರು ಎಂದು ವರದಿಯಾಗಿದೆ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News