ಬಿಕಾನೆರ್: ಬಸ್-ಟ್ರಕ್ ನಡುವೆ ಡಿಕ್ಕಿ, 11 ಮಂದಿ ಸಾವು, 25 ಮಂದಿಗೆ ಗಾಯ

ಸೋಮವಾರ ಬೆಳಿಗ್ಗೆ 7: 30 ರ ಸುಮಾರಿಗೆ ರಾಜಸ್ಥಾನದ ಶ್ರೀಡುಂಗರಪುರ ಪ್ರದೇಶದ ಬಳಿ ಬಸ್ ಮತ್ತು ಟ್ರಕ್‌ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಎಷ್ಟು ಪ್ರಬಲವಾಗಿದೆಯೆಂದರೆ ಬಸ್‌ನ ಮುಂಭಾಗ ಟ್ರಕ್‌ ಒಳಗೆ ನುಗ್ಗಿದೆ.

Updated: Nov 18, 2019 , 10:32 AM IST
ಬಿಕಾನೆರ್: ಬಸ್-ಟ್ರಕ್ ನಡುವೆ ಡಿಕ್ಕಿ, 11 ಮಂದಿ ಸಾವು, 25 ಮಂದಿಗೆ ಗಾಯ

ಬಿಕಾನೆರ್: ಜಿಲ್ಲೆಯ ಜಾಂಜೆವೂ ಗ್ರಾಮದ ಬಳಿ ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ 11 ಜನರು ಸಾವನ್ನಪ್ಪಿದ್ದು, 25 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸೋಮವಾರ ಬೆಳಿಗ್ಗೆ 7: 30 ರ ಸುಮಾರಿಗೆ ರಾಜಸ್ಥಾನದ ಶ್ರೀಡುಂಗರಪುರ ಪ್ರದೇಶದ ಬಳಿ ಬಸ್ ಮತ್ತು ಟ್ರಕ್‌ನಲ್ಲಿ ಭಾರಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಎಷ್ಟು ಪ್ರಬಲವಾಗಿದೆಯೆಂದರೆ ಬಸ್‌ನ ಮುಂಭಾಗ ಟ್ರಕ್‌ ಒಳಗೆ ನುಗ್ಗಿದೆ. ಸ್ವಲ್ಪ ಸಮಯದ ನಂತರ ಎರಡೂ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ.

ಜಾಂಜೆವೂ ಗ್ರಾಮದ ಬಳಿ ಈ ಭೀಕರ ಅಪಘಾತದ ನಂತರ ಅಲ್ಲಿ ಚೀರಾಟ ಆರಂಭವಾಗಿದೆ. ಸ್ಥಳೀಯರು ತಕ್ಷಣ ಸಹಾಯಕ್ಕಾಗಿ ಧಾವಿಸಿದರು. ಮಾಹಿತಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು. ಪರಿಹಾರ ಮತ್ತು ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಬಿಕಾನೆರ್ ಆಸ್ಪತ್ರೆಗೆ ರವಾನಿಸಲಾಗಿದೆ. 

ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.