ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಾಗುವುದು-ವಾರಾಣಸಿಯಲ್ಲಿ ಗುಡುಗಿದ ಮಾಯಾವತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಷೇತ್ರ ವಾರಾಣಸಿಯಲ್ಲಿ  ಮಹಾಘಟಬಂದನ್ ರ್ಯಾಲಿಯಲ್ಲಿ ಭಾಗವಹಿಸಿದ ಮಾಯಾವತಿ ಬಿಜೆಪಿ ವಿರುದ್ಧ ಕಿಡಿ ಕಾರಿದರು. 

Updated: May 16, 2019 , 02:47 PM IST
ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಾಗುವುದು-ವಾರಾಣಸಿಯಲ್ಲಿ ಗುಡುಗಿದ ಮಾಯಾವತಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಷೇತ್ರ ವಾರಾಣಸಿಯಲ್ಲಿ  ಮಹಾಘಟಬಂದನ್ ರ್ಯಾಲಿಯಲ್ಲಿ ಭಾಗವಹಿಸಿದ ಮಾಯಾವತಿ ಬಿಜೆಪಿ ವಿರುದ್ಧ ಕಿಡಿ ಕಾರಿದರು. 

ಬಿಎಸ್ಪಿ-ಎಸ್ಪಿ-ಆರ್ಎಲ್ಡಿ ಮೈತ್ರಿಕೂಟದ  ಜಂಟಿ ಸಾಮಾಜಿಕ ನ್ಯಾಯ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಾಗುವುದು ಎಂದರು. ಇದಕ್ಕೂ ಮೊದಲು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಮಾಯಾವತಿ "ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ಪ್ರಚಾರವನ್ನು ನಿಷೇಧಿಸಿದೆ, ಆದರೆ ಇಂದು 10 ಗಂಟೆಗೆ ಪ್ರಧಾನಮಂತ್ರಿಯವರು ಎರಡು ರ್ಯಾಲಿಗಳನ್ನು ಹೊಂದಿದ್ದಾರೆ.ಆದರೆ ಅವರು ಪ್ರಚಾರವನ್ನು ನಿಷೇಧ ಹೇರಬೇಕಾದರೆ ಇವತ್ತು ಬೆಳಗ್ಗೆ ಏಕೆ ಅವರು ನಿಷೇಧಿಸಲಿಲ್ಲ? ಚುನಾವಣಾ ಆಯೋಗವು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಅನ್ಯಾಯ ಎಂದು ಹೇಳಿದರು.

ಇನ್ನು ಮುಂದುವರೆದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಹಾಗೂ ನಾಯಕರು ಉದ್ದೇಶಿಸಿತ ದಾಳಿಯನ್ನು ಮಮತಾ ಬ್ಯಾನರ್ಜೀಯವರ ಮೇಲೆ ನಡೆಸುತ್ತಿದ್ದಾರೆ. ಇದು ಅಪಾಯಕಾರಿ ಅನ್ಯಾಯದ ಬೆಳವಣಿಗೆ, ದೇಶದ ಪ್ರಧಾನಿಗೆ ಇದು ಸರಿ ಕಾಣುವುದಿಲ್ಲ ಎಂದು ಮಾಯಾವತಿ ಬಿಜೆಪಿ ನಡೆಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.