ತೆಲಂಗಾಣ : ಇಂದಿನ ಅನೇಕ ಯುವಕರು ಪ್ರೀತಿ- ಪ್ರೇಮ ಅಂತ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಲವ್ ಮ್ಯಾರೇಜ್‌ನಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಯಾವಾಗ ಪೋಷಕರು ತಮ್ಮ ಪ್ರೇಮ ವಿವಾಹಕ್ಕೆ ಒಪ್ಪಿಕೊಳ್ಳುವುದಿಲ್ಲವೋ ಆಗ ಕ್ರೌರ್ಯತೆ ಮೆರೆಯುತ್ತಿದ್ದಾರೆ.. ಅದೇ ರೀತಿ ತೆಲಂಗಾಣದಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್ ಆಗುತ್ತಿದೆ...
ಪ್ರೀತಿ.. ಈ ವಿಚಾರದಲ್ಲಿ ಕೆಲವರು ವಿವಾಹವಾಗಿ ಸುಖ ಜೀವನ ನಡೆಸುತ್ತಿದ್ದಾರೆ.. ಇನ್ನೂ ಕೆಲವರು ತಮ್ಮ ಕೆಲಸ ಮುಗಿಯುತ್ತಿದ್ದಂತೆ ನಿಜ ಬಣ್ಣ ತೋರಿಸುತ್ತಿದ್ದಾರೆ. ಪ್ರೀತಿಗೀತ ಅಂತ ಜೀವನ ಹಾಳು ಮಾಡಿಕೊಂಡವರೇ ಇಂದಿನ ಯುವಗದಲ್ಲಿ ಹೆಚ್ಚು.. ಎಲ್ಲೋ ಒಂದು ಕಡೆ ಪೋಷಕರು ಒಪ್ಪಿ ಮದುವೆಗೆ ಗ್ರೀನ್ ಸಿಗ್ನಲ್ ಕೊಡ್ತಾರೆ.. ಅದು ಹುಡುಗ ಶ್ರೀಮಂತನಿದ್ದರೆ.. ಇಲ್ಲವೇ ಸರ್ಕಾರಿ ನೌಕರಿ ಹೊಂದಿದ್ದರೆ..
ಇದನ್ನೂ ಓದಿ:ರಾಹುಲ್ ಗಾಂಧಿ ಜೊತೆ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಕಾರ್ಯಕಾರಿಣಿಯ ಶವ ಸೂಟ್‌ಕೇಸ್‌ನಲ್ಲಿ ಪತ್ತೆ..!
ಈ ಪ್ರೇಮಿಗಳು ಸಹ ತಾವು ಪ್ರೀತಿಸುವ ಹುಡುಗಿ/ಹುಡುಗನಿಗಿಂತ ಉತ್ತಮ ವ್ಯಕ್ತಿಯನ್ನು ಕಂಡಾಗ ಎಷ್ಟೋ ವರ್ಷದ ಲವ್ ಆಗಿದ್ದರೂ ಬಿಟ್ಟು ಹೋಗುತ್ತಾರೆ. ಈ ಪ್ರಕ್ರಿಯೆಯಲ್ಲಿ ಮಾನಸಿಕವಾಗಿ ಕುಗ್ಗಿಹೋಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆ ಇನ್ನೂ ಕೆಲವರು ಕೊಲೆ ಮಾಡಲು ಹಿಂಜರಿಯುವುದಿಲ್ಲ..
Sensitive Content
తమ ప్రేమకు అడొస్తుందనే కారణంగా ప్రియురాలి తల్లిపై దారుణంగా దాడి చేసిన ప్రేమోన్మాది
గొంతు పిసికి చంపడానికి ప్రయత్నం
కరీంనగర్ జిల్లా రామడుగు మండలం వన్నారం అనుబంధ గ్రామమైన సుద్దాలపల్లిలో.. తమ ప్రేమకు అడొస్తుందనే కారణంగా ప్రియురాలి తల్లి చామంతిపై దాడి చేసి… pic.twitter.com/g4Z2hdQsmb
— Telugu Scribe (@TeluguScribe) March 2, 2025
ಅದೇ ರೀತಿ ರಾಮದುಗು ಮಂಡಲದ ವನ್ನಾರಂ ಮೂಲದ ರಾಜ್ ಕುಮಾರ್, ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದರು. ಇವರಿಬ್ಬರ ನಡುವೆ ಕೆಲವು ತಿಂಗಳುಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಯುವತಿಯ ತಾಯಿ ಚಾಮಂತಿಗೆ ಈ ಮದುವೆ ಇಷ್ಟವಿಲ್ಲ. ಅವಳು ತನ್ನ ಮಗಳಿಗೆ ಬೇರೆ ಸಂಬಂಧ ಹುಡುಕಲು ಮುಂದಾದಳು.. ಮಾರ್ಚ್ ನಲ್ಲಿ ಬೇರೊಬ್ಬರಿಗೆ ಮಗಳನ್ನು ಕೊಡಲು ಸಿದ್ಧತೆ ನಡೆಸುತ್ತಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ:ಕೇಂದ್ರ ಸಚಿವರ ಮಗಳ ಮೇಲೆ ಲೈಂಗಿಕ ಕಿರುಕುಳ..! ಶಿವ ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ..
ಇದು ಆತನಿಗೆ ತನ್ನ ಪ್ರೇಯಸಿಯ ತಾಯಿಯ ಮೇಲೆ ದ್ವೇಷ ಬೆಳೆಯಲು ಕಾರಣವಾಯಿತು. ಇಂದು, ಇದ್ದಕ್ಕಿದ್ದಂತೆ ಲವರ್ ತಾಯಿ ಮೇಲೆ ಯುವಕ ದಾಳಿ ಮಾಡಿದ್ದಾನೆ. ಕತ್ತು ಹಿಸುಕಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಬಾಯಿಯಿಂದ ರಕ್ತ ಬಂದರೂ ಬಿಡಲಿಲ್ಲ.. ಅವರ ಕಿರುಚಾಟ ಕೇಳಿ ಸುತ್ತಮುತ್ತಲಿನ ಜನರು ಬಂದು ಯುವಕನನ್ನು ಬಿಡಿಸಿದರು. ಈ ಘಟನೆಯ ನಂತರ, ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ರಾಜ್ ಕುಮಾರ್ ಅವರನ್ನು ಬಂಧಿಸಿದರು. ಈ ಘಟನೆಯ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









