ಪೌರತ್ವ ತಿದ್ದುಪಡಿ ಕಾಯ್ದೆ-2019: ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಹೇಳಿದ್ದೇನು?

ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಪ್ರಧಾನಿ, " ಇದು ಶಾಂತಿ, ಐಕ್ಯತೆ ಹಾಗೂ ಬಾಂಧವ್ಯ ಕಾಪಾಡುವ ಸಮಯವಾಗಿದ್ದು, ಯಾವುದೇ ರೀತಿಯ ವದಂತಿ ಹಾಗೂ ಸುಳ್ಳು ಹೇಳಿಕೆಗಳಿಂದ ದೂರವಿರುವಂತೆ ನನ್ನ ಮನವಿ" ಎಂದಿದ್ದಾರೆ.

Last Updated : Dec 16, 2019, 04:53 PM IST
ಪೌರತ್ವ ತಿದ್ದುಪಡಿ ಕಾಯ್ದೆ-2019: ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಹೇಳಿದ್ದೇನು? title=

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ-2019 ಅನ್ನು ವಿರೋಧಿಸಿ ದೇಶಾದ್ಯಂತ ಹಲವು ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ಈ ಘಟನೆಗಳನ್ನು ಪ್ರಧಾನಿ ನರೇಂದ್ರ ಮೋದಿ ದುರದೃಷ್ಟಕರ ಎಂದು ಹೇಳಿದ್ದಾರೆ.  ವಿರೋಧದ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡುವುದು ಹಾಗೂ ಬೇರೊಬ್ಬರ ಜೀವನದಲ್ಲಿ ಮೂಗು ತೋರಿಸುವುದು ಸರಿಯಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಸೋಮವಾರ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಕುರಿತು ಬರೆದುಕೊಂಡಿರುವ ಪ್ರಧಾನಿ "ಪೌರತ್ವ ತಿದ್ದುಪಡಿ ಕಾಯ್ದೆ ಮೇಲೆ ನಡೆಯುತ್ತಿರುವ ಹಿಸ್ಮಾತ್ಮಕ ಪ್ರತಿಭಟನೆ ದುರದೃಷ್ಟಕರ ಹಾಗೂ ತುಂಬಾ ದುಃಖಕರ. ಭಿನ್ನಾಭಿಪ್ರಾಯ, ಚರ್ಚೆ ಹಾಗೂ ಅಸಂತೋಷ ಪ್ರಜಾಪ್ರಭುತ್ವದ ಅವಶ್ಯಕ ಅಂಗಗಳಾಗಿವೆ. ಆದ್ರೆ, ಎಂದಿಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಲುಪಿಲ್ಲ ಹಾಗೂ ಸಾಮಾನ್ಯ ಜೀವನದ ತೊಂದರೆ ನಮ್ಮ ನೀತಿಯ ಒಂದು ಭಾಗ ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ 2019 ಅನ್ನು ಸಂಸತ್ತಿಯ ಉಭಯ ಸದನಗಳಲ್ಲಿ ಭಾರಿ ಬೆಂಬಲದೊಂದಿಗೆ ಅನುಮೋದನೆಗೊಳಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಸಂಸದರು ಇದರ ಅನುಮೋದನೆಗೆ ತಮ್ಮ ಬೆಂಬಲ ನೀಡಿದ್ದಾರೆ. ಈ ಕಾಯ್ದೆ ಭಾರತದ ಪುರಾತನ ಸಂಸ್ಕ್ರತಿಯ ಸ್ವೀಕೃತಿ, ಸದ್ಭಾವನೆ, ಕರುಣೆ ಹಾಗೂ ಬಾಂಧವ್ಯವನ್ನು ಎತ್ತಿಹಿಡಿಯುತ್ತದೆ'.

ತನ್ಮೂಲಕ ನಾನು ನನ್ನ ಸಹಪಾಟಿ ಭಾರತೀಯರಿಗೆ ಹೇಳ ಬಯಸುವುದೇನೆಂದರೆ CAA ಭಾರತದಲ್ಲಿ ಯಾವುದೇ ಧರ್ಮದ ನಾಗರಿಕರಿಗೆ ಪ್ರಭಾವಿತಗೊಳಿಸುವುದಿಲ್ಲ. ಯಾವುದೇ ಭಾರತೀಯನಿಗೆ ಈ ಕುರಿತು ಚಿಂತೆ ಮಾಡುವ ಅಗತ್ಯವಿಲ್ಲ'.

ಕಳೆದ ಹಲವಾರು ವರ್ಷಗಳಿಂದ ಕಿರುಕುಳಕ್ಕೆ ಒಳಗಾಗಿರುವ ಮತ್ತು  ಭಾರತ ಬಿಟ್ಟು ಬೇರೆ ಎಲ್ಲಿಯೂ ಹೋಗಲು ಮಾರ್ಗವಿರದ  ಜನರಿಗೆ ಈ ಕಾಯ್ದೆ ನ್ಯಾಯ ಒದಗಿಸಲಿದೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ. ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಬಡವರು, ದಲಿತರು ಹಾಗೂ ನಮ್ಮ ಪಕ್ಕದಲ್ಲಿ ಕುಳಿತ ಜನರ ಬಲವರ್ಧನೆಗೆ ಒಂದುಗೂಡಿ ಕೆಲಸ ಮಾಡುವ ಸಮಯಇದಾಗಿದೆ  ಎಂದು ಪ್ರಧಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ. ನಾವು ಕೆಲ ಸಮೂಹಗಳಿಗೆ ಕೇವಲ ಸ್ವಾರ್ಥಕಾಗಿ ನಮ್ಮನ್ನು ಬೇರ್ಪಡಿಸುವ ಮತ್ತು ಅಶಾಂತಿ ಹುಟ್ಟುಹಾಕುವ ಕೆಲಸ ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

Trending News