2024ರ ಮಹಾಚನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲಿದೆಯಾ ತೃತೀಯ ರಂಗ.? ಪ್ರಶಾಂತ್ ಕಿಶೋರ್ ಹೇಳಿದ್ದೇನು..?
ತೃತೀಯ ರಂಗ ಕಟ್ಟುವ ಸುದ್ದಿಯ ನಡುವೆಯೇ ಪ್ರಶಾಂತ್ ಕಿಶೋರ್ (Prashanth Kishore) ನಿನ್ನೆ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಹತ್ತು ದಿನಗಳ ಅಂತರದಲ್ಲಿ ಇದು ಉಭಯ ನಾಯಕರ ಎರಡನೇ ಭೇಟಿ ಆಗಿದೆ.
ನವದೆಹಲಿ : 2024ರ ಮಹಾಚುನಾವಣೆಗೆ (2024 election) ಮುನ್ನ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ರಣತಂತ್ರದಲ್ಲಿ ನಿರತರಾಗಿದ್ದಾರೆ ಚುನಾವಣಾ ರಣನೀತಿ ತಜ್ಞ ಪ್ರಶಾಂತ್ ಕಿಶೋರ್ (Prashanth Kishore). ಸೋಮವಾರ ಶರದ್ ಪವಾರ್ (Sharad Pawar) ಭೇಟಿ ಬಳಿಕ ಮಾತನಾಡಿದ ಪ್ರಶಾಂತ್ ಕಿಶೋರ್, 2024ರ ಚುನಾವಣೆಯಲ್ಲಿ ತೃತೀಯ ರಂಗವು ಬಿಜೆಪಿಗೆ ಸವಾಲೊಡ್ಡಲಿದೆ ಎಂದು ನನಗೆ ಅನ್ನಿಸುವುದಿಲ್ಲ ಎಂದು ಹೇಳಿದ್ದಾರೆ.
ಹತ್ತು ದಿನಗಳಲ್ಲಿ ಎರಡು ಸಲ ಶರದ್ ಪವಾರ್ ಭೇಟಿ ಮಾಡಿದ ಪ್ರಶಾಂತ್ ಕಿಶೋರ್:
ತೃತೀಯ ರಂಗ ಕಟ್ಟುವ ಸುದ್ದಿಯ ನಡುವೆಯೇ ಪ್ರಶಾಂತ್ ಕಿಶೋರ್ (Prashanth Kishore) ನಿನ್ನೆ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಹತ್ತು ದಿನಗಳ ಅಂತರದಲ್ಲಿ ಇದು ಉಭಯ ನಾಯಕರ ಎರಡನೇ ಭೇಟಿ ಆಗಿದೆ. ಜೂನ್ 11 ರಂದು ಉಭಯ ನಾಯಕರು ಮುಂಬಯಿಯ ಶರದ್ ಪವಾರ್ (Sharad Pawar) ನಿವಾಸದಲ್ಲಿ ಮಾತುಕತೆ ನಡೆಸಿದ್ದರು. ಇದೀಗ ದೆಹಲಿಯ ಪವಾರ್ ನಿವಾಸದಲ್ಲಿ ಮಾತುಕತೆ ನಡೆದಿದೆ.
ಇದನ್ನೂ ಓದಿ : International Yoga Day 2021: ಇಂದು ಯೋಗ ದಿನ, ಕರೋನಾದಲ್ಲೂ ಉತ್ಸಾಹ ಕಡಿಮೆಯಾಗಿಲ್ಲ ಎಂದ ಪಿಎಂ ಮೋದಿ
‘ತೃತೀಯ ಅಥವಾ ಚತುರ್ಥ ರಂಗ ಬಿಜೆಪಿಗೆ ಸವಾಲೊಡ್ಡಲಿದೆ ಎಂದು ಅನ್ನಿಸುವುದಿಲ್ಲ’:
ಶರದ್ ಪವಾರ್ ಜೊತೆಗಿನ ಮಾತುಕತೆ ಬಳಿಕ ಮಾತನಾಡಿದ ಪ್ರಶಾಂತ್ ಕಿಶೋರ್, ಮೂರನೇ ಅಥವಾ ನಾಲ್ಕನೇ ರಂಗವು ಬಿಜೆಪಿಗೆ (BJP) ಸವಾಲೊಡ್ಡಲಿದೆ ಎಂದು ನನಗೆ ಅನ್ನಿಸುವುದಿಲ್ಲ ಎಂದು ಹೇಳಿದ್ದಾರೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ತೃತೀಯ ರಂಗ ಫಿಟ್ ಆಗುವುದಿಲ್ಲ ಎಂದು ಹೇಳಿದ್ದಾರೆ.
ಶರದ್ ಪವಾರ್ ನಿವಾಸದಲ್ಲಿ ಮಂಗಳವಾರ ರಾಷ್ಟ್ರ ಮಂಚದ ಸಭೆ :
ಮೋದಿ ಸರ್ಕಾರದ (MOdi government) ವಿರುದ್ಧ ಸೃಷ್ಟಿಯಾದ ರಾಷ್ಟ್ರ ಮಂಚದ ಸಭೆ ಮಂಗಳವಾರ ಶರದ್ ಪವಾರ್ ನಿವಾಸದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ರಾಷ್ಟ್ರ ಮಂಚದ ನಾಯಕರು ಸಭೆ ಸೇರಲಿದ್ದಾರೆ. ಯಶವಂತ್ ಸಿನ್ಹಾ (Yashwanth Sinha), ಶರದ್ ಪವಾರ್ ಅಲ್ಲದೆ, ಆಮ್ ಆದ್ಮಿ, ಟಿಎಂಸಿ (TMC) ಸೇರಿದಂತೆ ಪ್ರತಿಪಕ್ಷದ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಕಾಂಗ್ರೆಸ್ (Congress) ಈ ಸಭೆಯಿಂದ ದೂರ ಉಳಿದಿದೆ.
ಇದನ್ನೂ ಓದಿ : ಒಂದೇ ದಿನದಲ್ಲಿ 13 ಲಕ್ಷ ಕೊರೊನಾ ಲಸಿಕೆ ಹಾಕುವಲ್ಲಿ ಯಶಸ್ವಿಯಾದ ಆಂಧ್ರಪ್ರದೇಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.