ತೆಲಂಗಾಣ ಸಿಎಂ ಕೆಸಿಆರ್ ಮನೆಯ ಸಾಕು ನಾಯಿ ಸಾವು, ವೈದ್ಯರ ವಿರುದ್ಧ ಪ್ರಕರಣ ದಾಖಲು

ನಾಯಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ವೈದ್ಯರ ವಿರುದ್ಧ ಆಸಿಫ್ ಅಲಿ ಖಾನ್ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

Last Updated : Sep 15, 2019, 03:08 PM IST
ತೆಲಂಗಾಣ ಸಿಎಂ ಕೆಸಿಆರ್ ಮನೆಯ ಸಾಕು ನಾಯಿ ಸಾವು, ವೈದ್ಯರ ವಿರುದ್ಧ ಪ್ರಕರಣ ದಾಖಲು title=

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಹೈದರಾಬಾದ್ ನಿವಾಸದಲ್ಲಿ ಸಾಕು ನಾಯಿ ಮೃತಪಟ್ಟ ಬಳಿಕ ಅದಕ್ಕೆ ಚಿಕಿತ್ಸೆ ನೀಡಿದ ಪಶುವೈದ್ಯ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ.

ಚಂದ್ರಶೇಖರರಾವ್ ಅವರ ಮನೆಯಲ್ಲಿ ಸಾಕಿದ್ದ 11 ತಿಂಗಳ ಸೈಬೀರಿಯನ್ ಹಸ್ಕಿ ನಾಯಿ ಸೆಪ್ಟೆಂಬರ್ 10 ರಿಂದ ಊಟ ಮಾಡುವುದನ್ನೇ ನಿಲ್ಲಿಸಿತ್ತು. ಬಳಿಕ ಆ ನಾಯಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಆಸಿಫ್ ಅಲಿ ಖಾನ್ ಎಂಬಾತ 'ಹಸ್ಕಿ'ಯನ್ನು ಖಾಸಗಿ ಪಶುವೈದ್ಯರ ಬಳಿ ಕ್ಜಿಕಿತ್ಸೆಗೆ ಕರೆದೊಯ್ದಿದ್ದ. ನಾಯಿಯನ್ನು ಪರೀಕ್ಷಿಸಿದ ವೈದ್ಯರು ಹಸಿವಾಗುವಂತೆ ಹಾಗೂ ಗ್ಯಾಸ್ಟ್ರಿಕ್ ನಿವಾರಣೆಗೆ ಔಷಧಿಗಳನ್ನು ನೀಡಿದ್ದರು ಎನ್ನಲಾಗಿದೆ. ಆದರೂ ಆಹಾರ ಸೇವಿಸದ ನಾಯಿ ಶನಿವಾರ ಮೃತಪಟ್ಟಿದೆ. 

ನಾಯಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ವೈದ್ಯರ ವಿರುದ್ಧ ಆಸಿಫ್ ಅಲಿ ಖಾನ್ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಮತ್ತೊಂದೆಡೆ ಸಾಕು ಸಾಯಿ ಸಾವಿನ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ತೀವ್ರವಾಗಿ ಟೀಕಿಸಿವೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದರೂ ಅದನ್ನು ನಿಯಂತ್ರಿಸುವಲ್ಲಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಕೆಸಿಆರ್ ಸರ್ಕಾರ ವಿಫಲವಾಗಿದೆ. ಹಾಗಾದರೆ ನಾವು ಯಾರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಲೇವಡಿ ಮಾಡಿದ್ದಾರೆ. 

Trending News