ನವದೆಹಲಿ: ರಸ್ತೆ ಅಪಘಾತದ ಸಂತ್ರಸ್ತರಿಗೆ ಶೀಘ್ರದಲ್ಲಿಯೇ ನಗದು ರಹಿತ (ಕ್ಯಾಶ್ ಲೆಸ್) ಚಿಕಿತ್ಸಾ ಸೌಲಭ್ಯ ಆರಂಭಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಯೋಜನೆಯ ಅಡಿ ಪ್ರತಿಯೊಂದು ಪ್ರಕರಣದಲ್ಲಿ ಗರಿಷ್ಟ 2.5 ಲಕ್ಷ ರೂ.ಚಿಕಿತ್ಸೆ ಪಡೆಯಬಹುದಾಗಿದೆ. ದೇಶಾದ್ಯಂತ ಪ್ರತಿ ವರ್ಷ ಸುಮಾರು ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ. ವಿಶ್ವದ ಯಾವುದೇ ಇತರೆ ದೇಶಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚಿನ ಸಂಖ್ಯಯಾಗಿದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ ಈ ಯೋಜನೆ ಭಾರಿ ಮಹತ್ವವನ್ನೇ ಪಡೆದುಕೊಂಡಿದೆ. ವಾಸ್ತವದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲೂ ಸುಮಾರು ಒಂದೂವರೆ ಲಕ್ಷ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ ಹಾಗೂ ಮೂರು ಲಕ್ಷಕ್ಕೂ ಅಧಿಕ ಜನರು ವಿಕಲಾಂಗರಾಗುತ್ತಾರೆ ಎಂಬುದು ಇಲ್ಲಿ ಉಲ್ಲೇಖನೀಯ.


COMMERCIAL BREAK
SCROLL TO CONTINUE READING

ನಗದು ರಹಿತ ಚಿಕಿತ್ಸೆಗಾಗಿ ಈ ಯೋಜನೆಯಡಿ ಮೋಟಾರು ವಾಹನ ಅಪಘಾತ ನಿಧಿಯನ್ನು ರಚಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ರಾಜ್ಯ ಸಾರಿಗೆ ಕಾರ್ಯದರ್ಶಿಗಳು ಮತ್ತು ಆಯುಕ್ತರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದೆ. ರಸ್ತೆ ಅಪಘಾತ ಸಂತ್ರಸ್ತರಿಗೆ ನಗದುರಹಿತ ಚಿಕಿತ್ಸೆಯನ್ನು ಒದಗಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಎ), ಸದೃಢ ಐಟಿ ಮೂಲಸೌಕರ್ಯವನ್ನು ಬಳಸಲಾಗುವುದು ಎಂದು ಸರ್ಕಾರ ಹೇಳಿದೆ.


ರಸ್ತೆ ಅಪಘಾತಕ್ಕೆ ಒಳಗಾದವರಿಗೆ ಆಘಾತ ಮತ್ತು ಆರೋಗ್ಯ ಸೇವೆಗಳಿಗೆ ಬ್ಯಾಂಕ್ ಖಾತೆಯ ಮೂಲಕ ಹಣಕಾಸು ಸಹಾಯ ಒದಗಿಸಲಾಗುವುದು, ಈ ಖಾತೆಯನ್ನು ಯೋಜನೆಯ ಅನುಷ್ಠಾನಕ್ಕಾಗಿ MoRTH ಅಡಿಯಲ್ಲಿ ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿದೆ.


ಸಾಮಾನ್ಯ ವಿಮಾ ಪರಿಷತ್ ಗಳ ಮಾಧ್ಯಮದ ಮೂಲಕ ವಿಮಾ ಕಂಪನಿಗಳಿಂದ ಸುನಿಶ್ಚಿತಗೊಳಿಸಲಾಗಿರುವ ವಾಹನಗಳಿವೆ ಹಾಗೂ ಹಿಟ್ ಅಂಡ್ ರನ್ ಪ್ರಕರಣಗಳಿಗೂ ಕೂಡ ಕೊಡುಗೆ ನೀಡುವುದನ್ನು ಖಾತ್ರಿ ಪಡಿಸಿಕೊಲ್ಲಲಾಗುವುದು. ಜೊತೆಗೆ ಪರವಾನಗಿ ಇಲ್ಲದ ವಾಹನಗಳಿಗೆ, ದುರ್ಘಟನೆಗಳಿಗೆ ಸಚಿವಾಲಯ ಕೊಡುಗೆ ನೀಡಲಿದೆ. ಇದಲ್ಲದೆ, ಹೆಚ್ಚುವರಿಯಾಗಿ, ವಿಮೆ ಮಾಡದ ವಾಹನಗಳ ಸಂದರ್ಭದಲ್ಲಿ ಪರಿಹಾರದ ಭಾಗವಾಗಿ ಚಿಕಿತ್ಸೆಯ ವೆಚ್ಚವನ್ನು ವಾಹನ ಮಾಲೀಕರು ಪಾವತಿಸಬೇಕಾಗುತ್ತದೆ. 36 ರಲ್ಲಿ 32 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಂಜೆಎ ಜಾರಿಗೆ ತರಲಾಗುತ್ತಿದ್ದು, ಈ ಯೋಜನೆಯು ಸುಮಾರು 13 ಕೋಟಿ ಕುಟುಂಬಗಳಿಗೆ ಪ್ರಯೋಜನ ನೀಡಲಿದೆ.