ಬೆಂಗಳೂರಿನಲ್ಲಿರುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರಿನಲ್ಲಿರುವ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಭಾರತ ಕಚೇರಿ ಮೇಲೆ ಸಿಬಿಐ ವಿದೇಶಿ ಧನಸಹಾಯವನ್ನು ಒಳಗೊಂಡ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

Last Updated : Nov 15, 2019, 06:32 PM IST
ಬೆಂಗಳೂರಿನಲ್ಲಿರುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಕಚೇರಿ ಮೇಲೆ ಸಿಬಿಐ ದಾಳಿ title=
file photo

ನವದೆಹಲಿ: ಬೆಂಗಳೂರಿನಲ್ಲಿರುವ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಭಾರತ ಕಚೇರಿ ಮೇಲೆ ಸಿಬಿಐ ವಿದೇಶಿ ಧನಸಹಾಯವನ್ನು ಒಳಗೊಂಡ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ವರ್ಷಗಳಿಂದ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯನ್ನು ಉಲ್ಲಂಘಿಸಿದೆ ಎಂದು ತನಿಖಾ ಸಂಸ್ಥೆಗಳ ಪರಿಶೀಲನೆಗೆ ಒಳಪಟ್ಟಿದೆ. ಮಾನವ ಹಕ್ಕುಗಳ ಸಂಘಟನೆಯ ಬೆಂಗಳೂರು ಕಚೇರಿಯಲ್ಲಿ ಕಳೆದ ವರ್ಷ ಇದೇ ಪ್ರಕರಣದ ವಿಚಾರವಾಗಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ಎಫ್‌ಸಿಆರ್‌ಎ ಕಾಯ್ದೆಯನ್ನು ಬೈಪಾಸ್ ಮಾಡಲು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಆಶ್ರಯಿಸಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಲಾಭೋದ್ದೇಶವಿಲ್ಲದ ವಾಣಿಜ್ಯ ಘಟಕವನ್ನು ಸ್ಥಾಪಿಸಿ 36 ಕೋಟಿ ರೂ ದೇಣಿಗೆಯನ್ನು ಪಡೆದಿದೆ ಎಂದು ಆರೋಪಿಸಲಾಗಿದೆ.ಕಳೆದ ವರ್ಷ ಅಮ್ನೆಸ್ಟಿ ವಿರುದ್ಧದ ಕ್ರಮಕ್ಕೆ ಮೊದಲು ಲಾಭರಹಿತ ಸಂಸ್ಥೆಯಾಗಿರುವ  ಗ್ರೀನ್‌ಪೀಸ್‌ನ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು.

ಇತ್ತೀಚಿಗಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಅನೇಕ ಲಾಭರಹಿತ ಗುಂಪುಗಳ ಮೇಲೆ ಕಣ್ಗಾವಲು ಹೆಚ್ಚಿಸಿದೆ, ದೇಣಿಗೆಗಳನ್ನು ತಪ್ಪಾಗಿ ವರದಿ ಮಾಡಿದೆ ಎಂಬ ಆರೋಪದ ಮೇಲೆ ಪರವಾನಗಿಗಳನ್ನು ರದ್ದುಗೊಳಿಸುವುದನ್ನು ಅಥವಾ ಅಮಾನತುಗೊಳಿಸುವ ಕ್ರಮಕ್ಕೆ ಮುಂದಾಗಿದೆ

2015 ರಲ್ಲಿ ಗೃಹ ಸಚಿವಾಲಯವು ನ್ಯೂಯಾರ್ಕ್ ಮೂಲದ ಫೋರ್ಡ್ ಫೌಂಡೇಶನ್ ಅನ್ನು ವೀಕ್ಷಣಾ ಪಟ್ಟಿಯಲ್ಲಿ ಇರಿಸಿತ್ತು ಮತ್ತು ಪರಿಸರ ಪ್ರಚಾರಕ ಸಂಸ್ಥೆ ಗ್ರೀನ್‌ಪೀಸ್‌ನ ಪರವಾನಗಿಯನ್ನು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿಯಲ್ಲಿ ಅಮಾನತುಗೊಳಿಸಿತ್ತು.

Trending News