ನವದೆಹಲಿ: ಹರಿಯಾಣ ಭೂ ಹಗರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ ಅವರನ್ನು ಶಂಕಿಸಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕೇಂದ್ರೀಯ ತನಿಖಾ ದಳ(ಸಿಬಿಐ) ಮಾಜಿ ಸಿಎಂ ನಿವಾಸದ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಮನೆಯಲ್ಲೇ ಇದ್ದಾರೆ ಎನ್ನಲಾಗಿದೆ. ಇದಲ್ಲದೆ ಸಿಬಿಐ ದೆಹಲಿ-ಎನ್ಸಿಆರ್ ನಲ್ಲಿ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಹೂಡಾ ಎದುರಿಸುತ್ತಿರುವ ಈ ಭೂ ಹಗರಣದಲ್ಲಿ ಸೋನಿಯಾ ಗಾಂಧಿಯವರ ಸಂಬಂಧಿ ರಾಬರ್ಟ್ ವಾದ್ರಾ ಅವರಿಗೆ ಪ್ರಯೋಜನವಿದೆ ಎಂದು ಆರೋಪಿಸಲಾಗಿದೆ.


COMMERCIAL BREAK
SCROLL TO CONTINUE READING

ಭೂ ಹಗರಣದಲ್ಲಿ ಸಿಲುಕಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಂಬಂದಿ ರಾಬರ್ಟ್ ವಾದ್ರಾ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ ವಿರುದ್ಧ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ. ಡಿಸೆಂಬರ್ 2018 ರಲ್ಲಿ ಹರಿಯಾಣ ಸರ್ಕಾರ ಈ ವಿಚಾರವಾಗಿ ತನಿಖೆ ನಡೆಸಲು ಗುರುಗ್ರಾಮ್ ಪೊಲೀಸರಿಗೆ ಅನುಮತಿ ನೀಡಿದೆ.



ರಾಬರ್ಟ್ ವಾದ್ರಾ ವಿರುದ್ಧವೂ ತನಿಖೆ ನಡೆಯುತ್ತಿದೆ. ಫೈಲ್ ಫೋಟೋ


ಡಿಸೆಂಬರ್ನಲ್ಲಿ 'ಭೂಮಿ ವ್ಯವಹಾರದಲ್ಲಿ ವಾದ್ರಾ ಮತ್ತು ಹೂಡಾ ವಿರುದ್ಧ ತನಿಖೆ ನಡೆಸಲು ನಾವು ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದ್ದೇವೆ. ಈ ವಿಷಯವು ತನಿಖೆ ಮುಂದುವರೆದಿದೆ ಎಂದು ಗುರುಗ್ರಾಮ್ ಪೊಲೀಸ್ ಕಮೀಷನರ್ ಕೆ.ಕೆ.ರಾವ್ ತಿಳಿಸಿದ್ದಾರೆ.


ಪ್ರಸ್ತುತ ಹರಿಯಾಣ ಸರ್ಕಾರ ರಾಬರ್ಟ್ ವಾದ್ರಾ ಮತ್ತು ಹರಿಯಾಣ ಮಾಜಿ ಸಿಎಂ ಭೂಪೇಂದ್ರ ಸಿಂಗ್ ಹೂಡಾ ಭೂ ಹಗರಣದ ತನಿಖೆಗೆ ಅನುಮತಿ ನೀಡಿದೆ. ಗುರುಗ್ರಾಮ್ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯಿದೆ ವಿಭಾಗ 17 ಎ ಅಡಿಯಲ್ಲಿ ಈ ಕುರಿತು ತನಿಖೆ ನಡೆಸಲು ಅನುಮತಿ ಕೋರಿ ಸೆಪ್ಟೆಂಬರ್ ನಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.