)
ಗುವಾಹಟಿ: ಹತ್ತು ಲಕ್ಷ ರೂ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಗುವಾಹಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಪ್ರಾದೇಶಿಕ ಅಧಿಕಾರಿ ರಿತೇನ್ ಕುಮಾರ್ ಸಿಂಗ್ ಅವರನ್ನು ಕೇಂದ್ರೀಯ ತನಿಖಾ ದಳ (CBI) ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳಿಗೆ ತಿಳಿಸಿರುವ ದೆಹಲಿ ಪೊಲೀಸರು "ಅಕ್ಟೋಬರ್ 14 ರಂದು ಖಾಸಗಿ ವ್ಯಕ್ತಿಯಿಂದ ₹ 10 ಲಕ್ಷ ಲಂಚ ಸ್ವೀಕರಿಸುವಾಗ ಸಿಬಿಐ ಬಂಧಿಸಿದ್ದ ಗುವಾಹಟಿಯ ಪ್ರಾದೇಶಿಕ ಕಚೇರಿಯ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಪ್ರಾದೇಶಿಕ ಅಧಿಕಾರಿ ಮೈಸ್ನಮ್ ರಿತೇನ್ ಕುಮಾರ್ ಸಿಂಗ್ ಅವರ ಕಚೇರಿ ಮತ್ತು ವಸತಿ ಆವರಣದಲ್ಲಿ ಸಿಬಿಐ ಶೋಧ ನಡೆಸಿತು' ಎಂದು ತಿಳಿಸಿದ್ದಾರೆ.ಈಗ ತನಿಖೆಯಲ್ಲಿ ಅಪಾರ ಪ್ರಮಾಣದ ಹಣ, ಐಷಾರಾಮಿ ಕಾರುಗಳು, ಚಿನ್ನ, ಆಮದು ಮಾಡಿಕೊಂಡ ಮದ್ಯ ಸೇರಿದಂತೆ ಇತರ ವಸ್ತುಗಳು ಪತ್ತೆಯಾಗಿವೆ.
CBI conducted searches at the office and residential premises of Maisnam Riten Kumar Singh, Executive Director and Regional Officer, National Highways & Infrastructure Development Corporation Limited (NHIDCL), Regional Office, Guwahati, who was arrested by the CBI on 14 October… pic.twitter.com/7i0RcKUhrp
— ANI (@ANI) October 17, 2025
ಅಧಿಕಾರಿಗಳ ನಿವಾಸದ ಶೋಧದ ಸಮಯದಲ್ಲಿ, ಸಿಬಿಐ ₹ 2.62 ಕೋಟಿ ನಗದು ಮತ್ತು ದೇಶಾದ್ಯಂತ ಅವರು ಮತ್ತು ಅವರ ಕುಟುಂಬ ಸದಸ್ಯರು ಹೊಂದಿದ್ದ ಒಂಬತ್ತು ಆಸ್ತಿಗಳು ಮತ್ತು 20 ಅಪಾರ್ಟ್ಮೆಂಟ್ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಅಧಿಕಾರಿಯ ಮನೆಯಲ್ಲಿ ಸಿಕ್ಕಿದ್ದೇನು?
₹2.62 ಕೋಟಿ ನಗದು
ದೆಹಲಿ-NCR ನಲ್ಲಿ 9 ಐಷಾರಾಮಿ ಫ್ಲಾಟ್ಗಳು, 1 ಪ್ರೀಮಿಯಂ ಕಚೇರಿ ಸ್ಥಳ ಮತ್ತು 3 ವಸತಿ ಪ್ಲಾಟ್ಗಳು
ಬೆಂಗಳೂರಿನಲ್ಲಿ 1 ಫ್ಲಾಟ್ ಮತ್ತು 1 ಪ್ಲಾಟ್
ಗುವಾಹಟಿಯಲ್ಲಿ 4 ಫ್ಲಾಟ್ಗಳು ಮತ್ತು 2 ಪ್ಲಾಟ್ಗಳು
ಇಂಫಾಲ್ ಪಶ್ಚಿಮದಲ್ಲಿ 2 ಹೋಂಸ್ಟೇಡ್ ಪ್ಲಾಟ್ಗಳು ಮತ್ತು 1 ಕೃಷಿ ಭೂಮಿ
6 ಐಷಾರಾಮಿ ಕಾರುಗಳು
2 ದುಬಾರಿ ಗಡಿಯಾರಗಳು
100 ಗ್ರಾಂ ಬೆಳ್ಳಿ ಬಾರ್
ಸಿಬಿಐ ಪ್ರಕಾರ ಇವುಗಳ ನೈಜ ಮಾರುಕಟ್ಟೆ ಮೌಲ್ಯವು ಹಲವು ಪಟ್ಟು ಅಧಿಕ ಎನ್ನಲಾಗಿದೆ
ಲಂಚ ಪ್ರಕರಣವನ್ನು ಭೇದಿಸಿದ್ದು ಹೇಗೆ?
ಈ NHIDCL ಅಧಿಕಾರಿ ತಮ್ಮ ಕೆಲಸಕ್ಕೆ ಸಹಾಯಕ್ಕಾಗಿ ಖಾಸಗಿ ಕಂಪನಿಯಿಂದ ಲಂಚ ಕೇಳಿದ್ದಾರೆ ಎನ್ನುವ ಬಗ್ಗೆ ಗೌಪ್ಯ ಮಾಹಿತಿಯನ್ನು ಸಿಬಿಐ ಪಡೆದುಕೊಂಡಿದೆ. ಇದಾದ ನಂತರ ಅಕ್ಟೋಬರ್ 14 ರಂದು, ಸಿಬಿಐ ಬಲೆ ಬೀಸಿ ಅಧಿಕಾರಿ ₹10 ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದೆ.ಕಂಪನಿಯು ತನ್ನ ನಡೆಯುತ್ತಿರುವ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ 37 (ಡೆಮೋದಿಂದ ಮೋರನ್ ಬೈಪಾಸ್ಗೆ) ನಿಂದ ನಾಲ್ಕು ಪಥದ ರಸ್ತೆಯ ನಿರ್ಮಾಣಕ್ಕಾಗಿ ವಿಸ್ತರಣೆ ಮತ್ತು ಪೂರ್ಣಗೊಳಿಸುವಿಕೆಯ ಪ್ರಮಾಣಪತ್ರವನ್ನು ಪಡೆಯಲು ಲಂಚದ ಬೇಡಿಕೆಯನ್ನು ಇಡಲಾಗಿತ್ತು.