Wage Code Bill 2021 : ಕೇಂದ್ರದಿಂದ ಉದ್ಯೋಗಿಗಳಿಗೆ ಸಿಹಿ ಸುದ್ದಿ : ಜಾರಿಯಾಗಲಿದೆ ವೇತನ ಸಂಹಿತೆ ಮಸೂದೆ!

ಕೇಂದ್ರ ಸರ್ಕಾರವು ಶೀಘ್ರದಲ್ಲೇ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಲಿದ್ದು, ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನ ಬದಲಾಯಿಸಲಿದೆ. 

Last Updated : Jun 22, 2021, 12:53 PM IST
  • ಕೇಂದ್ರ ಸರ್ಕಾರವು ಶೀಘ್ರದಲ್ಲೇ ಉದ್ಯೋಗಿಗಳಿಗೆ ಸಿಹಿ ಸುದ್ದಿ
  • ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನ ಬದಲಾಯಿಸಲಿದೆ
  • ನೌಕರರು ಪ್ರತಿ 5 ಗಂಟೆಗಳ ನಂತ್ರ 30 ನಿಮಿಷಗಳ ವಿರಾಮ
Wage Code Bill 2021 : ಕೇಂದ್ರದಿಂದ ಉದ್ಯೋಗಿಗಳಿಗೆ ಸಿಹಿ ಸುದ್ದಿ : ಜಾರಿಯಾಗಲಿದೆ ವೇತನ ಸಂಹಿತೆ ಮಸೂದೆ! title=

ನವದೆಹಲಿ : ಕೇಂದ್ರ ಸರ್ಕಾರವು ಶೀಘ್ರದಲ್ಲೇ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಲಿದ್ದು, ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನ ಬದಲಾಯಿಸಲಿದೆ. 

ಕೇಂದ್ರದ ಸರ್ಕಾರ(Central Government)ವು ಕಾರ್ಮಿಕ ಸಂಹಿತೆಯ ನಿಯಮಗಳನ್ನ ಜಾರಿಗೊಳಿಸಿದ್ರೆ, ಕೆಲಸದ ಸಮಯದಿಂದ ಅಧಿಕಾವಧಿಯವರೆಗೆ ನಿಯಮಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಹೊಸ ಕರಡು ಕಾನೂನಿನಲ್ಲಿ ಗರಿಷ್ಠ ಕೆಲಸದ ಸಮಯವನ್ನ 12ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನ ಪ್ರಸ್ತಾಪಿಸಲಾಗಿದೆ. ಇದರೊಂದಿಗೆ, 15 ರಿಂದ 30 ನಿಮಿಷಗಳ ಹೆಚ್ಚುವರಿ ಕೆಲಸವನ್ನ ಓವರ್‌ಟೈಮ್‌ ಎಂದು ಸೇರಿಸಲು ನಿಯಮವಿದೆ. ಉದ್ಯೋಗದಲ್ಲಿರುವ ಜನರಿಗೆ ಇದು ಹೆಚ್ಚಿನ ಪ್ರಯೋಜನವನ್ನ ನೀಡುತ್ತದೆ.

ಇದನ್ನೂ ಓದಿ : Aadhaar-SIM: ಒಂದು ಆಧಾರ್ ಕಾರ್ಡ್‌ನಿಂದ ಎಷ್ಟು ಸಿಮ್‌ಗಳನ್ನು ಖರೀದಿಸಬಹುದು?

ನೌಕರರು ಪ್ರತಿ 5 ಗಂಟೆಗಳ ನಂತ್ರ 30 ನಿಮಿಷಗಳ ವಿರಾಮವನ್ನ ನೀಡಬೇಕಾಗುತ್ತದೆ!

ಪ್ರಸ್ತುತ ನಿಯಮಗಳ ಪ್ರಕಾರ, 30 ನಿಮಿಷಗಳಿಗಿಂತ ಕಡಿಮೆ ಸಮಯವನ್ನ ಒವರ್‌ಟೈಮ್‌ ಎಂದು ಪರಿಗಣಿಸಲಾಗುವುದಿಲ್ಲ. ಕರಡು ನಿಯಮಗಳಲ್ಲಿ 15 ರಿಂದ 30 ನಿಮಿಷಗಳ ಹೆಚ್ಚುವರಿ ಕೆಲಸವನ್ನ ಓವರ್‌ಟೈಮ್‌ನಲ್ಲಿ ಸೇರಿಸಲು ಅವಕಾಶವಿದೆ. ಇನ್ನು ಕರಡು ನಿಯಮಗಳು ಯಾವುದೇ ಉದ್ಯೋಗಿಯನ್ನ 5 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕೆಲಸ ಮಾಡುವುದನ್ನ ನಿಷೇಧಿಸಿವೆ. ಪ್ರತಿ 5 ಗಂಟೆಗಳ ನಂತ್ರ ನೌಕರರಿಗೆ(Employees) ಅರ್ಧ ಘಂಟೆಯ ಮಧ್ಯಂತರವನ್ನ ನೀಡುವಂತೆ ಕರಡು ನಿಯಮಗಳಲ್ಲಿ ಸೂಚನೆಗಳನ್ನ ಸೇರಿಸಲಾಗಿದೆ.ಕಾರ್ಮಿಕ ಸಂಹಿತೆಯ ನಿಯಮಗಳ ಪ್ರಕಾರ, ಮೂಲ ವೇತನವು ಒಟ್ಟು ವೇತನದ 50 ಪ್ರತಿಶತ ಅಥವಾ ಹೆಚ್ಚಿನದಾಗಿರಬೇಕು. ಈ ಕಾರಣದಿಂದಾಗಿ, ಹೆಚ್ಚಿನ ಉದ್ಯೋಗಿಗಳ ವೇತನದಲ್ಲಿ ಬದಲಾವಣೆ ಕಂಡು ಬರುತ್ತದೆ. ಮೂಲ ವೇತನ ಹೆಚ್ಚಾದರೆ, ಭವಿಷ್ಯನಿಧಿ (ಪಿಎಫ್) ಮತ್ತು ಗ್ರಾಚ್ಯುಟಿಯಲ್ಲಿ ಕಡಿತಗೊಳಿಸಿದ ಮೊತ್ತವು ಹೆಚ್ಚಾಗುತ್ತದೆ. ಇದು ಟೇಕ್ ಹೋಮ್ ಸಂಬಳವನ್ನ ಕಡಿಮೆ ಮಾಡುತ್ತದೆ.

ಇದನ್ನೂ ಓದಿ : ಇನ್ನು ಈ ರೀತಿ ಡೇಟಾ ಬ್ಯಾಕ್ ಅಪ್ ಮಾಡಲಿದೆ WhatsApp, ಬಳಕೆದಾರರ ಮೇಲಾಗುವ ಪರಿಣಾಮ ಏನು?

ಕಂಪನಿಗಳು ಉದ್ಯೋಗಿಗಳಿಗೆ PF ನಲ್ಲಿ ಹೆಚ್ಚಿನ ಕೊಡುಗೆ ನೀಡಬೇಕಾಗುತ್ತದೆ!

ಭವಿಷ್ಯ ನಿಧಿ(PF) ಮತ್ತು ಗ್ರ್ಯಾಚುಟಿ ಕೊಡುಗೆಯ ಹೆಚ್ಚಳದೊಂದಿಗೆ, ನಿವೃತ್ತಿಯ ನಂತ್ರ ಪಡೆದ ಮೊತ್ತವೂ ಹೆಚ್ಚಾಗುತ್ತದೆ. ಪಿಎಫ್ ಮತ್ತು ಗ್ರಾಚ್ಯುಟಿ ಹೆಚ್ಚಳದೊಂದಿಗೆ, ಕಂಪನಿಗಳ ವೆಚ್ಚವೂ ಹೆಚ್ಚಾಗುತ್ತದೆ. ಯಾಕಂದ್ರೆ, ಅವರು ಉದ್ಯೋಗಿಗಳಿಗೆ ಪಿಎಫ್‌ಗೆ ಹೆಚ್ಚಿನ ಕೊಡುಗೆ ನೀಡಬೇಕಾಗುತ್ತದೆ. ಇದು ಕಂಪನಿಗಳ ಬ್ಯಾಲೆನ್ಸ್ ಶೀಟ್‌ಗಳ ಮೇಲೂ ಪರಿಣಾಮ ಬೀರುತ್ತದೆ. ಈ ನಿಯಮಗಳನ್ನ ಮುಂದೂಡಲು ಇದು ಕಾರಣವಾಗಿದೆ. ಈ ನಿಯಮಗಳು ಏಪ್ರಿಲ್ 1, 2021 ರಿಂದ ಜಾರಿಗೆ ಬರಬೇಕಿತ್ತು. ಆದ್ರೆ, ರಾಜ್ಯ ಸರ್ಕಾರಗಳು ಮತ್ತು ಕಂಪನಿಗಳ ತಯಾರಿಕೆಯ ಕೊರತೆಯಿಂದಾಗಿ ಅವುಗಳನ್ನು ಮುಂದೂಡಲಾಗಿದೆ. ಈ ನಿಯಮಗಳನ್ನ ಆದಷ್ಟು ಬೇಗ ಜಾರಿಗೆ ತರಲು ಕೇಂದ್ರ ಸರ್ಕಾರ ಬಯಸಿದೆ.

ಇದನ್ನೂ ಓದಿ : ಇನ್ನು ಈ ರೀತಿ ಡೇಟಾ ಬ್ಯಾಕ್ ಅಪ್ ಮಾಡಲಿದೆ WhatsApp, ಬಳಕೆದಾರರ ಮೇಲಾಗುವ ಪರಿಣಾಮ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News