ಆಸ್ಪತ್ರೆಗಳಲ್ಲಿ ಭರ್ತಿ ಇರುವ Covid-19 ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಸಲು ಅನುಮತಿ ನೀಡಿ: ಕೇಂದ್ರ

ಕೆಲವು ರೋಗಿಗಳ ಸಂಬಂಧಿಕರು ಕೆಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಇದಕ್ಕೆ ಅನುಮತಿಸಲಾಗುವುದಿಲ್ಲ ಎಂಬ ಆರೋಪದ ನಂತರ ಈ ಕೇಂದ್ರ ಸರ್ಕಾರ ಸೂಚನೆಯನ್ನು ಜಾರಿಗೊಳಿಸಿದೆ.

Updated: Aug 2, 2020 , 08:11 PM IST
ಆಸ್ಪತ್ರೆಗಳಲ್ಲಿ ಭರ್ತಿ ಇರುವ Covid-19 ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಸಲು ಅನುಮತಿ ನೀಡಿ: ಕೇಂದ್ರ

ನವದೆಹಲಿ: ಆಸ್ಪತ್ರೆಗೆ ದಾಖಲಾದ ಕೋವಿಡ್-19 ರೋಗಿಗಳಿಗೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಬಳಸಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮಾತನಾಡಬಹುದು. ಇದು ಅವರಿಗೆ ಮಾನಸಿಕ ಬೆಂಬಲವನ್ನು ನೀಡುತ್ತದೆ. ಪ್ರಸ್ತುತ ಆಸ್ಪತ್ರೆ ವಾರ್ಡ್‌ಗಳಲ್ಲಿ ಮೊಬೈಲ್ ಫೋನ್‌ಗಳನ್ನು ಅನುಮತಿಸಲಾಗಿದ್ದರೂ, ಕೆಲವು ರೋಗಿಗಳ ಸಂಬಂಧಿಕರನ್ನು ಕೆಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಅನುಮತಿಸಲಾಗುವುದಿಲ್ಲ ಎಂಬ ಆರೋಪದ ನಂತರ ಈ ಸೂಚನೆಯನ್ನು ನೀಡಲಾಗಿದೆ.

ಟೈಮ್ ಸ್ಲಾಟ್ ನಿರ್ಧರಿಸಬಹುದು
ಇದಕ್ಕೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ರಾಜೀವ್ ಗರ್ಗ್, ತಮ್ಮ ಪತ್ರದಲ್ಲಿ ರೋಗಿ ಮತ್ತು ಅವರ ಕುಟುಂಬದ ನಡುವಿನ ಸಂಪರ್ಕಕ್ಕಾಗಿ ಮೊಬೈಲ್ ಮತ್ತು ಟ್ಯಾಬ್ಲೆಟ್ ಸಾಧನಗಳನ್ನು ಬಳಸಲು ಅನುಮತಿಸಬೇಕು ಎಂದು ಹೇಳಿದ್ದಾರೆ. ಸಂವಹನ ಮಾಡಲು ಆಸ್ಪತ್ರೆಯಿಂದ ಸಮಯದ ಸ್ಲಾಟ್‌ಗಳನ್ನು ನಿಗದಿಪಡಿಸಬಹುದು ಮತ್ತು ಸಾಧನಗಳನ್ನು ಸೋಂಕುರಹಿತಗೊಳಿಸಲು ಸೂಕ್ತವಾದ ಪ್ರೋಟೋಕಾಲ್‌ಗಳನ್ನು ಅಭಿವೃದ್ಧಿಪಡಿಸಬಹುದು ಎಂದೂ ಕೂಡ ಸೂಚಿಸಲಾಗಿದೆ.

ಸಾಮಾಜಿಕ ಸಂಪರ್ಕ ರೋಗಿಗಳಿಗೆ ಶಾಂತವಾಗಿರಿಸುತ್ತದೆ
ಕೋವಿಡ್ 19 ವಾರ್ಡ್ ಗಳಲ್ಲಿ ಅಥವಾ ವಿವಿಧ ಆಸ್ಪತ್ರೆಗಳ ಐಸಿಯುಗಳಲ್ಲಿ ದಾಖಲಾದ ರೋಗಿಗಳ ಮಾನಸಿಕ ಅಗತ್ಯಗಳಿಗೆ ಆಡಳಿತ ಮತ್ತು ವೈದ್ಯಕೀಯ ತಂಡಗಳು ಜವಾಬ್ದಾರರಾಗಿರಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ಸಾಮಾಜಿಕ ಸಂವಹನದಿಂದ ರೋಗಿಗಳನ್ನು ಶಾಂತವಾಗಿರಿಸಿಕೊಳ್ಳಬಹುದು ಎಂದು ಗರ್ಗ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.