ರಾಯಪುರ: ಚುನಾವಣಾ ಅಫಿಡವಿಟ್‌ನಲ್ಲಿ ಜನ್ಮಸ್ಥಳಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿರುವ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಫೆಬ್ರವರಿ 3, 2018 ರಂದು ಗೋರೆಲಾ ಪೊಲೀಸ್ ಠಾಣೆಯಲ್ಲಿ ಮಾರ್ವಾಹಿಯ ಮಾಜಿ ಶಾಸಕ ಅಮಿತ್ ಜೋಗಿ ವಿರುದ್ಧ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 2013 ರಲ್ಲಿ ಮಾರ್ವಾಹಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಮೀರಾ ಪಕ್ರ ಅವರು  ಜೋಗಿ ಅವರು ಅಫಿಡವಿಟ್ನಲ್ಲಿ ತನ್ನ ಜನ್ಮಸ್ಥಳವನ್ನು ತಪ್ಪಾಗಿ ಘೋಷಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಅದರಂತೆ ಗೋರೆಲಾ ಪೊಲೀಸ್ ಠಾಣೆಯಲ್ಲಿ ಅಮಿತ್ ಜೋಗಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.


ಚುನಾವಣೆಯಲ್ಲಿ ಸೋತ ನಂತರ, ಅಮಿತ್ ಜೋಗಿ ಅವರ ಜಾತಿ ಮತ್ತು ಜನ್ಮ ದಿನಾಂಕವನ್ನು ಪ್ರಶ್ನಿಸಿ ಸಮೀರಾ ಪಕ್ರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಚುನಾವಣೆಯ ಸಮಯದಲ್ಲಿ ನೀಡಿದ ಅಫಿಡವಿಟ್ನಲ್ಲಿ, ಅಮಿತ್ ಜೋಗಿ ಅವರು 1978 ರಲ್ಲಿ ಗ್ರಾಮ ಪಂಚಾಯಿತಿ ಸರ್ಬಹ್ರಾ ಗೊರೆಲ್ಲಾದಲ್ಲಿ ಜನಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಅವರು 1977 ರಲ್ಲಿ ಅಮೆರಿಕದ ಟೆಕ್ಸಾಸ್‌ನ ಡೌಗ್ಲಾಸ್ ಎಂಬ ಸ್ಥಳದಲ್ಲಿ ಜನಿಸಿದ್ದಾರೆ ಎಂದು ಸಮೀರಾ ಆರೋಪಿಸಿದ್ದಾರೆ.