ಕುಲುವಿನಲ್ಲಿ ವಿನಾಶ ಉಂಟು ಮಾಡಿದ ಮೇಘಸ್ಫೋಟ: ಹಿಮಾಚಲ ಪ್ರದೇಶದ ಕುಲು ಪ್ರದೇಶದ ಚೋಜ್ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಮೇಘಸ್ಫೋಟ ಸಂಭವಿಸಿದ್ದು ವಿನಾಶ ಉಂಟು ಮಾಡಿದೆ. ಬುಧವಾರ ಮುಂಜಾನೆ ಪಾರ್ವತಿ ನದಿಯ ಉಪನದಿಯಾದ ಚೋಜ್‌ ಎಂಬಲ್ಲಿ ಸಂಭವಿಸಿರುವ ಮೇಘಸ್ಫೋಟದಲ್ಲಿ ಕ್ಯಾಪಿಂಗ್ ಸೈಟ್ ನಾಶವಾಗಿದ್ದು ಹಲವರು ನಾಪತ್ತೆ ಆಗಿದ್ದಾರೆ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಕುಲು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭಾರೀ ಮಳೆಯಿಂದಾಗಿ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹ ಉಂಟಾಗಿ ಹತ್ತಾರು ಮನೆಗಳನ್ನು ಮುಳುಗಿವೆ. ಘಟನೆಯಲ್ಲಿ ಕನಿಷ್ಠ 3 ಜನರು ಸಾವನ್ನಪ್ಪಿದ್ದಾರೆ. ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದಲ್ಲದೆ, ಕಣಿವೆಯಲ್ಲಿನ ಹಠಾತ್ ಪ್ರವಾಹದಿಂದಾಗಿ ಚೋಜ್ ಗ್ರಾಮಕ್ಕೆ ಹೋಗುವ ಏಕೈಕ ಸೇತುವೆಯೂ ಹಾನಿಯಾಗಿದೆ. 


ಈ ಪ್ರದೇಶವು ಪ್ರಾಥಮಿಕವಾಗಿ ಕ್ಯಾಂಪಿಂಗ್ ಸೈಟ್‌ಗಳ ಕೇಂದ್ರವಾಗಿತ್ತು. ಸುದ್ದಿ ಸಂಸ್ಥೆ ಎಎನ್ಐನಲ್ಲಿ ಮಣಿಕರಣ್ ಕಣಿವೆಯಿಂದ ಮೇಘಸ್ಫೋಟದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. 


Dam Water Level: ಕೊಡಗಿನಲ್ಲಿ ಧಾರಾಕಾರ ಮಳೆ; KRS ಡ್ಯಾಂ ಭರ್ತಿಗೆ 13 ಅಡಿ ಬಾಕಿ


ಮಂಗಳವಾರ ರಾತ್ರಿಯಿಂದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಮುಂದುವರಿದಿದೆ. ಧರ್ಮಶಾಲಾ, ಶಿಮ್ಲಾ, ಬಿಲಾಸ್‌ಪುರ, ಕುಫ್ರಿಯಲ್ಲಿ ಭಾರಿ ಮಳೆ ದಾಖಲಾಗಿದೆ. 


ಇದಲ್ಲದೆ ಹಿಮಾಚಲ ಪ್ರದೇಶದಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಾರ್ವತಿ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಅಲ್ಲದೆ, ಝಖಾರಿ ಬಳಿ ಭೂಕುಸಿತದಿಂದಾಗಿ ಶಿಮ್ಲಾ-ಕಿನ್ನೌರ್ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡಿದೆ. ಹವಾಮಾನ ಕೇಂದ್ರ ಶಿಮ್ಲಾದಲ್ಲಿ ಬುಧವಾರ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ ನೀಡಿದ್ದು ಆರೆಂಜ್ ಅಲರ್ಟ್ ಘೋಷಿಸಿದೆ. 


ಇದನ್ನೂ ಓದಿ- ಮುಂದಿನ ಐದು ದಿನ ಭಾರೀ ಮಳೆ ; ಕರಾವಳಿ ಜಿಲ್ಲೆಗಳಲ್ಲಿಆರೆಂಜ್ ಅಲರ್ಟ್ .!


ಹವಾಮಾನ ಇಲಾಖೆಯ ಪ್ರಕಾರ, ಭಾರೀ ಮಳೆಯ ಸಂದರ್ಭದಲ್ಲಿ ವಿದ್ಯುತ್, ಸಂಪರ್ಕ ಮತ್ತು ಸಂಬಂಧಿತ ಸೇವೆಗಳಿಗೆ ತೊಂದರೆಯಾಗಬಹುದು. ಅಲ್ಲದೇ ಭಾರೀ ಮಳೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.