ಭಾರತ ಈ ಸಾವುಗಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ : ಸಿಎಂ ಯೋಗಿ ಆದಿತ್ಯನಾಥ್‌

Pahalgam Attack : ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ಉದ್ಯಮಿ ಶುಭಂ ದ್ವಿವೇದಿ ಅವರ ಮನೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಭೇಟಿ ನೀಡಿದರು. ಈ ವೇಳೆ ಭಯೋತ್ಪಾದಕರ ದಾಳಿ ಕುರಿತು ಮಾತನಾಡಿ, ಪ್ರತ್ಯುತ್ತರ ನೀಡುವ ಭರವಸೆ ಕೊಟ್ಟರು. ಅಲ್ಲದೆ, ಸಂತ್ರಸ್ತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

Written by - Krishna N K | Last Updated : Apr 24, 2025, 01:22 PM IST
    • ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ಉದ್ಯಮಿ ಶುಭಂ ದ್ವಿವೇದಿ
    • ಶುಭಂ ದ್ವಿವೇದಿ ಅವರ ಮನೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಭೇಟಿ
    • ದಾಳಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದಾರೆ.
ಭಾರತ ಈ ಸಾವುಗಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ : ಸಿಎಂ ಯೋಗಿ ಆದಿತ್ಯನಾಥ್‌

ಕಾನ್ಪುರ್ : ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಮಾರಕ ದಾಳಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದಾರೆ. ಇದು ಭಾರತ ಎಂದಿಗೂ ಮರೆಯದ ಹೇಡಿತನ ಮತ್ತು ಘೋರ ಭಯೋತ್ಪಾದನಾ ಕೃತ್ಯ ಎಂದು ಕಿಡಿಕಾರಿದ್ದಾರೆ.. 

Add Zee News as a Preferred Source

ದಾಳಿಯಲ್ಲಿ ಸಾವನ್ನಪ್ಪಿದ 28 ಸಂತ್ರಸ್ತರಲ್ಲಿ ಒಬ್ಬರಾದ ಕಾನ್ಪುರದ 31 ವರ್ಷದ ಉದ್ಯಮಿ ಶುಭಂ ದ್ವಿವೇದಿ ಅವರ ಕುಟುಂಬವನ್ನು ಸಿಎಂ ಯೋಗಿ ಭೇಟಿಯಾದರು. ಶುಭಂ ಎರಡು ತಿಂಗಳ ಹಿಂದೆ ಫೆಬ್ರವರಿ 12 ರಂದು ವಿವಾಹವಾದರು. ಕಾಶ್ಮೀರದ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಹತ್ಯಾಕಾಂಡದ ಸಮಯದಲ್ಲಿ ಶುಭಂ ಅವರನ್ನು ಪತ್ನಿಯ ಮುಂದೆಯೇ ಗುಂಡು ಹಾಕಿ ಕೊಲ್ಲಲಾಯಿತು. 

ಇದನ್ನೂ ಓದಿ:ನನಗೆ ಮದುವೆ, ಕುಟುಂಬ, ಮಕ್ಕಳು ಬೇಕು; ವಿಚ್ಛೇದನದ ನಂತರ ಹೊಸ ಸಂಗಾತಿಯನ್ನು ಹುಡುಕುತ್ತಿರುವ ಖ್ಯಾತ ನಟಿ!  

ಈ ದಾಳಿಯನ್ನು "ಘೋರ ಮತ್ತು ಹೇಡಿತನ" ಎಂದು ಕರೆದಿರುವ ಯೋಗಿ ಆದಿತ್ಯನಾಥ್, ಈ ಕುರಿತು ಸರ್ಕಾರ ನಿರ್ಣಾಯಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಭರವಸೆ ನೀಡಿದರು. ಅಲ್ಲದೆ, "ಭಾರತವು ಈ ಸಾವುಗಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ.. ದೇಶವು ಈ ದಾಳಿಯನ್ನು ಎಂದಿಗೂ ಮರೆಯುವುದಿಲ್ಲ" ಎಂದು ತಿಳಿಸಿದರು. 

ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ಕೇಂದ್ರದ ಕ್ರಮವನ್ನು ಉಲ್ಲೇಖಿಸಿದ ಸಿಎಂ ಯೋಗಿ, "ಇದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಅಂತಿಮ ಯುದ್ಧದ ಆರಂಭ.. ಮುಂಬರುವ ದಿನಗಳು ಅವರ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯುವಂತಹ ಪ್ರತಿಕ್ರಿಯೆಯನ್ನು ನೀಡುತ್ತವೆ" ಎಂದು ಹೇಳಿದರು.

ಇದನ್ನೂ ಓದಿ:"ಸಿನಿಮಾದ ಕತೆ ಚೆನ್ನಾಗಿದ್ದರೆ ಬಿಕಿನಿ ಧರಿಸುವುದು ಅಷ್ಟೇ ಅಲ್ಲ.. ಅವಶ್ಯಕತೆ ಇದ್ದರೆ ಬೆತ್ತಲಾಗುತ್ತೇನೆ.." 50ನೇ ವಯಸ್ಸಿನಲ್ಲಿ ನಟಿ ಶ್ವೇತಾ ಮೆನನ್‌ ಬೋಲ್ಡ್‌ ಕಾಮೆಂಟ್ಸ್‌  

ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಅಥವಾ ಮತಬ್ಯಾಂಕ್ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ರೀತಿಯ ಸರ್ಕಾರ ನಮ್ಮದಲ್ಲ. ಎಲ್ಲರೂ ನೋಡುವ ಮತ್ತು ನೆನಪಿಸಿಕೊಳ್ಳುವ ರೀತಿಯಲ್ಲಿ ನಾವು ಭಯೋತ್ಪಾದನೆಯನ್ನು ಹತ್ತಿಕ್ಕುತ್ತೇವೆ. ಫಲಿತಾಂಶಗಳು ಶೀಘ್ರದಲ್ಲೇ ಬೆಳಕಿಗೆ ಬರಲಿವೆ ಎಂದು ಸಿಎಂ ಯೋಗಿ ತಿಳಿಸಿದರು.

ಭಯೋತ್ಪಾದಕರು ಭಾರತ ಸರ್ಕಾರಕ್ಕೆ ಸವಾಲ್‌ ಹಾಕುವ ಧೈರ್ಯ ಮಾಡಿದ್ದಾರೆ. ಅವರಲ್ಲಿ ಒಬ್ಬರು ನನ್ನ ಸೊಸೆಯನ್ನ ಪ್ರಧಾನಿ ನರೇಂದ್ರ ಮೋದಿಗೆ ಸಂದೇಶ ನೀಡಲು ಉಳಿಸುತ್ತಿರುವುದಾಗಿ ಹೇಳಿದ್ದಾನೆ. ಭಯೋತ್ಪಾದಕರು ಈಗ ಮಾತ್ರವಲ್ಲ, ಮುಂದಿನ ಏಳು ತಲೆಮಾರುಗಳವರೆಗೆ ಇಂತಹ ಕೃತ್ಯ ಯೋಚಿಸಲು ಸಹ ಭಯಪಡುವಷ್ಟು ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು" ಶುಭಂ ತಂದೆ ಸರ್ಕಾರಕ್ಕೆ ಮನವಿ ಮಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News