ಶೀಘ್ರದಲ್ಲಿ ಈ ಕೆಲಸ ಮಾಡದೆ ಹೋದಲ್ಲಿ ಬಂದ್ ಆಗಲಿದೆ ನಿಮ್ಮ ಮೊಬೈಲ್ ವ್ಯಾಲೆಟ್

ಒಂದು ವೇಳೆ ನೀವೂ ಕೂಡ ಅಮೆಜಾನ್, paytm, ಪೋನ್ ಪೇ, ಓಲಾ ಮನಿ ಅಥವಾ ಇತರೆ ಯಾವುದಾದರೊಂದು ಪ್ರಿಪೇಯ್ಡ್ ವ್ಯಾಲೆಟ್ ಸೇವೆ ಬಳಸುತ್ತಿದ್ದಾರೆ ಇಂದೇ ಎಚ್ಚೆತ್ತುಕೊಳ್ಳಿ. 

Last Updated : Jan 24, 2020, 04:54 PM IST
ಶೀಘ್ರದಲ್ಲಿ ಈ ಕೆಲಸ ಮಾಡದೆ ಹೋದಲ್ಲಿ ಬಂದ್ ಆಗಲಿದೆ ನಿಮ್ಮ ಮೊಬೈಲ್ ವ್ಯಾಲೆಟ್ title=

ನವದೆಹಲಿ: ಒಂದು ವೇಳೆ ನೀವೂ ಕೂಡ ಅಮೆಜಾನ್, paytm, ಪೋನ್ ಪೇ, ಓಲಾ ಮನಿ ಅಥವಾ ಇತರೆ ಯಾವುದಾದರೊಂದು ಪ್ರಿಪೇಯ್ಡ್ ವ್ಯಾಲೆಟ್ ಸೇವೆ ಬಳಸುತ್ತಿದ್ದಾರೆ ಇಂದೇ ಎಚ್ಚೆತ್ತುಕೊಳ್ಳಿ. ಏಕೆಂದರೆ, RBI ನಿಯಮಗಳ ಅನುಸಾರ 29 ಫೆಬ್ರವರಿ 2020ರವರೆಗೆ ಇ-ವ್ಯಾಲೆಟ್ ನ ಸಂಪೂರ್ಣ KYC ಮಾಡಿಸುವುದು ಅನಿವಾರ್ಯವಾಗಿದೆ. ಇದಕ್ಕೂ ಮೊದಲು ಆಗಸ್ಟ್ 31, 2019 ಫುಲ್ KYC ಮಾಡಿಸಲು ಕೊನೆಯ ದಿನಾಂಕ ಎಂದು ಹೇಳಲಾಗಿತ್ತು.

SMS ರಿಮೈಂಡರ್
RBI ಈ ನಿರ್ದೇಶನದ ಹಿನ್ನೆಲೆ ಇ-ವ್ಯಾಲೆಟ್ ಕಂಪನಿಗಳು ತಮ್ಮ ಬಳಕೆದಾರರಿಗೆ SMS ಕಳುಹಿಸಿ ಸಂಪೂರ್ಣ KYC ಮಾಹಿತಿ ನೀಡಲು ಸೂಚಿಸುತ್ತಿವೆ. ಆದರೆ, ಇವುಗಳಲ್ಲಿ ಬೇರೆ ಬೇರೆ ದಿನಾಂಕಗಳ ಕುರಿತು ಉಲ್ಲೇಖಿಸಲಾಗುತ್ತಿದ್ದು, ಬಳಕೆದಾರರು ಕನ್ಫ್ಯೂಸ್ ಆಗುತ್ತಿದ್ದಾರೆ.

SMS ನಿಂದ ಕನ್ಫ್ಯೂಸ್ ಆಗಬೇಡಿ
ಡಿಸೆಂಬರ್ 16ಕ್ಕೆ ಕಳುಹಿಸಲಾದ ಒಂದು SMS ಪ್ರಕಾರ ಬಳಕೆದಾರರು ತಮ್ಮ KYCಯನ್ನು ಮಾರ್ಚ್ 5, 2020ರವರೆಗೆ ಪೂರ್ಣಗೊಳಿಸಲು ಹೇಳಲಾಗಿದೆ. ಈ ಕುರಿತಾದ ಮತ್ತೊಂದು SMS ಪ್ರಕಾರ ಮೇ 8, 2020ರವರೆಗೆ KYC ಪೂರ್ಣಗೊಳಿಸಲು ಹೇಳಲಾಗಿದೆ. ಜೊತೆಗೆ KYC ಪೂರ್ಣಗೊಳಿಸದೆ ಹೋದಲ್ಲಿ ನಿಮ್ಮ ಇ-ವ್ಯಾಲೆಟ್ ಬ್ಲಾಕ್ ಆಗಲಿದೆ ಎಂದೂ ಕೂಡ ಹೇಳಲಾಗಿದೆ.

KYC ಪ್ರೋಸೆಸ್ ಹೇಗೆ ಪೂರ್ಣಗೊಳಿಸಬೇಕು?
KYC ಪೂರ್ಣಗೊಳಿಸಲು ಮೊದಲು ನೀವು ನಿಮ್ಮ ಪ್ರೀಪೇಡ್ ಇನ್ಸ್ಟ್ರುಮೆಂಟ್ (PPI) ಖಾತೆಯನ್ನು ಆಧಾರ್ ಜೊತೆಗೆ ಜೋಡಣೆ ಮಾಡಬೇಕು. ಇದನ್ನು ನೀವು ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಅಥವಾ ಇ-ವ್ಯಾಲೆಟ್ ಆಪ್  ಬಳಸಿ ಅಥವಾ ಹತ್ತಿರದ KYC ಸೆಂಟರ್ ಗೆ ಭೇಟಿ ನೀಡಿಯೂ ಕೂಡ ಮಾಡಿಸಬಹುದಾಗಿದೆ.

ಸಂಪೂರ್ಣ KYCಗಾಗಿ ಈ ಕೆಲಸ ಮಾಡಬೇಕು
ಒಂದು ವೇಳೆ ನೀವು ಈಗಾಗಲೇ ಆಂಶಿಕ KYC ಮಾಡಿಸಿದ್ದೀರಿ ಎಂದಾದಲ್ಲಿ ನೀವು ಸಂಪೂರ್ಣ KYCಯನ್ನು ಮಾಡಿಸಬಹುದು.  ಇದಕ್ಕಾಗಿ ನೀವು ನಿಮ್ಮ ಪೇಟಿಎಂ KYC ಸೆಂಟರ್ ಗೆ ಭೇಟಿ ನೀಡಿ ನಿಮ್ಮ ದಾಖಲೆಗಳನ್ನು ಸಲ್ಲಿಸಬೇಕು . ಇದಾದ ಬಳಿಕ ಫುಲ್ KYC ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ. ಮಿನಿಮಮ್ ಅಥವಾ ಆಂಶಿಕ KYC ಮತ್ತು ಫುಲ್ KYC ನಡುವೆ ಕೆಲ ವ್ಯವಹಾರಗಳ ಮೇಲೆ ಲಿಮಿಟ್ ಹೇರಲಾಗಿದೆ.

ಫೆಬ್ರವರಿ 29ರ ಒಳಗೆ ಮಾಡಿಸಬೇಕು ಫುಲ್ KYC
ಇದಕ್ಕೂ ಮೊದಲು ಆಗಸ್ಟ್ ನಲ್ಲಿ ಜಾರಿಗೊಳಿಸಿದ ಸುತ್ತೋಲೆ ಪ್ರಕಾರ RBI ಇ-ವ್ಯಾಲೆಟ್ ಸೇವೆ ಬಳಸುವ ಗ್ರಾಹಕರಿಗೆ ಫುಲ್ KYC ಮಾಡಿಸುವ ಅಂತಿಮ ದಿನಾಂಕವನ್ನು ಫೆಬ್ರವರಿ  29, 2020ರವರೆಗೆ ವಿಸ್ತರಿಸಿತ್ತು. ಆದರೆ, ಇನ್ಮುಂದೆ ಈ ಡೆಡ್ ಲೈನ್ ನಲ್ಲಿ ಯಾವುದೇ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಹೇಳಿತ್ತು. 

ಅವಧಿ ವಿಸ್ತರಣೆ
ಆಗಸ್ಟ್ ನಲ್ಲಿ ಅಧಿಸೂಚನೆ ಪ್ರಕಾರ  ಮಿನಿಮಮ್ KYC ಮಾಡಿಸಲು ಈ ಮೊದಲು ನೀಡಲಾಗಿರುವ ಅವಧಿಯನ್ನು 18 ತಿಂಗಳಿಂದ 24ತಿಂಗಳುಗಳವರೆಗೆ ವಿಸ್ತರಣೆಯಾಗಿದೆ. ಇದರಿಂದ ನೀವು ಪ್ರತಿ ತಿಂಗಳು 10,000 ರೂ.ಗಳವರೆಗಿನ ಕಿರುಕುಳ ವ್ಯಾಪಾರಕ್ಕಾಗಿ ಫುಲ್ KYC ಅಗತ್ಯವಿಲ್ಲ. ಕೇವಲ ಸೆಲ್ಫ್ ಡಿಕ್ಲೆರೇಶನ್ ಹಾಗೂ ಮೊಬೈಲ್ OTP ನೀಡುವ ಮೂಲಕ ನಿಮ್ಮ ಟ್ರಾನ್ಸಾಕ್ಷನ್ ನಡೆಸಬಹುದಾಗಿದೆ.

ಮಿನಿಮಮ್ VS ಫುಲ್ KYC
ಮಿನಿಮಮ್ KYC ನಲ್ಲಿ ಇ-ವ್ಯಾಲೆಟ್ ಸೇವೆ ನೀಡುವ ಕಂಪನಿಗಳು ತಮ್ಮ ಬಳಕೆದಾರರ ಮೊಬೈಲ್ ಸಂಖ್ಯೆ ಹಾಗೂ ಪ್ಯಾನ್, ಆಧಾರ್ ಅಥವಾ ಯಾವುದೇ ಸರ್ಕಾರಿ ದಾಖಲೆಯ ನಂಬರ್ ಪಡೆಯುತ್ತವೆ. ಆದರೆ, ಫುಲ್ KYC ನೆಲ್ಲಿ ವೆರಿಫಿಕೆಶನ್ ಮಾಡಿಸಬೇಕು. ಇದರಲ್ಲಿ PAN ಕಾರ್ಡ್ ಹಾಗೂ ನಿಮ್ಮ ಅಡ್ರೆಸ್ ಪ್ರೂಫ್ ನೀವು ನೀಡಲೇಬೇಕು.

Trending News