ನವದೆಹಲಿ: ಸೋನಭದ್ರ ಕುಟುಂಬ ಸಂತ್ರಸ್ತರನ್ನು ಭೇಟಿಯಾಗಿಯೇ ಹೋಗುತ್ತೇನೆ ಎಂದು ಬಿಗಿಪಟ್ಟು ಹಿಡಿದಿದ್ದ ಪ್ರಿಯಾಂಕಾ ಗಾಂಧಿ ಈಗ ಕೊನೆಗೂ ಅವರನ್ನು ಭೇಟಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.



COMMERCIAL BREAK
SCROLL TO CONTINUE READING

ಭೂವಿವಾದ ಹಿನ್ನಲೆಯಲ್ಲಿ ನಡೆದ ಸೋನಭದ್ರ ಹತ್ಯಾಕಾಂಡದಲ್ಲಿ ಸುಮಾರು 10 ಜನರು ಮೃತಪಟ್ಟಿದ್ದರು. ಮೃತಪಟ್ಟ ಕುಟುಂಬ ಸಂತ್ರಸ್ತರನ್ನು ಭೇಟಿ ಮಾಡಲು ತೆರಳಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಶುಕ್ರವಾರದಂದು ಅವರನ್ನು ಬಂಧಿಸಿ ಅತಿಥಿ ಗೃಹದಲ್ಲಿಟ್ಟಿದ್ದರು.ಆದರೆ ಈ ಬಂಧನಕ್ಕೆ ಜಗ್ಗದ ಪ್ರಿಯಾಂಕಾ ಗಾಂಧಿ ಮಾತ್ರ ರಾತ್ರಿಯಿಡಿ ಪೋಲೀಸರ ವಶದಲ್ಲಿಯೇ ಕಳೆದರು. ಶನಿವಾರದಂದು ಅವರು ತಂಗಿದ್ದ ಅತಿಥಿ ಗೃಹದ ಎದುರುಗಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.



ಪ್ರಿಯಂಕಾ ಗಾಂಧಿಯವರು ಸೋನಭದ್ರ ಸಂತ್ರಸ್ತರನ್ನು ಭೇಟಿ ಮಾಡಿ ತಿರುವುದಾಗಿ ಎಂದು ಬಿಗಿ ಪಟ್ಟು ಹಿಡಿದ ಹಿನ್ನಲೆಯಲ್ಲಿ, ಅಧಿಕಾರಿಗಳು ಅವರ ಕುಟುಂಬ ಸದಸ್ಯರನ್ನು ಪ್ರಿಯಾಂಕಾ ಗಾಂಧಿ ತಂಗಿದ್ದ ಅತಿಥಿ ಗೃಹದಲ್ಲಿ ಭೇಟಿ ಮಾಡಿಸುವ ವ್ಯವಸ್ಥೆ ಮಾಡಿದರು. ಸಂತ್ರಸ್ತರ ಎರಡು ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಸುದ್ದಿಗಾರೊಂದಿಗೆ ಮಾತಾನಾಡಿದ ಪ್ರಿಯಾಂಕಾ ಗಾಂಧಿ 'ಸಂತ್ರಸ್ತರ ಎರಡು ಕುಟುಂಬ ಸದಸ್ಯರು ನನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾರೆ. ಇತರ 15 ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ನನಗೂ ಸಹಿತ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ಈ ಜನರು ಬಹಳ ದೂರದಿಂದ ಭೇಟಿ ಮಾಡಲು ಬಂದಿದ್ದಾರೆ, ಆದರೂ ಅಧಿಕಾರಿಗಳು ಅವರಿಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು.



ಬುಧುವಾರದಂದು ಸೋನಭದ್ರದಲ್ಲಿ ಗೊಂಡ ಮತ್ತು ಗುಜ್ಜರ ಸಮುದಾಯದ ನಡುವೆ ಭೂವಿವಾದದ ಹಿನ್ನಲೆಯಲ್ಲಿ ನಡೆದ ಹತ್ಯಾಕಾಂಡದಲ್ಲಿ 10 ಜನರು ಸಾವನ್ನಪ್ಪಿದ್ದಲ್ಲದೆ 24 ಜನರು ಗಾಯಗೊಂಡಿದ್ದರು. ಇದುವರೆಗೆ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ 29 ಜನರನ್ನು ಬಂಧಿಸಲಾಗಿದೆ. ಒಟ್ಟು 78 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.