Congress President Elections: `ಹಳೆ ಕಾಂಗ್ರೆಸ್ ಪಕ್ಷ ಬೇಕಾದರೆ ಖರ್ಗೆ ನಿಂತಿದ್ದಾರೆ, ಬದಲಾವಣೆ ಬಯಸುವುದಾದರೆ ನಾನು ನಿಂತಿದ್ದೇನೆ`
Congress President Election: ತಮ್ಮ ಪಕ್ಷದ ಹಿರಿಯ ಸಹೋದ್ಯೋಗಿಯಾಗಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಯಾವುದೇ ಹೋರಾಟವಿಲ್ಲ ಎಂದು ಶನಿವಾರ ಪಕ್ಷದ ಅಧ್ಯಕ್ಷ ಸ್ಥಾನದ ರೆಸ್ ನಲ್ಲಿರುವ ಶಶಿ ತರೂರ್ ಮತ್ತೊಮ್ಮೆ ಬಲವಾಗಿ ಪ್ರತಿಪಾದಿಸಿದ್ದಾರೆ.
Congress President Election: ತಮ್ಮ ಪಕ್ಷದ ಹಿರಿಯ ಸಹೋದ್ಯೋಗಿಯಾಗಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಯಾವುದೇ ಹೋರಾಟವಿಲ್ಲ ಎಂದು ಶನಿವಾರ ಪಕ್ಷದ ಅಧ್ಯಕ್ಷ ಸ್ಥಾನದ ರೆಸ್ ನಲ್ಲಿರುವ ಶಶಿ ತರೂರ್ ಮತ್ತೊಮ್ಮೆ ಬಲವಾಗಿ ಪ್ರತಿಪಾದಿಸಿದ್ದಾರೆ. ಆದರೆ, ಹಳೆಯ ಕಾಂಗ್ರೆಸ್ ಬೇಕಾದರೆ ಖರ್ಗೆ ನಿಂತಿದ್ದಾರೆ ಮತ್ತು ಬದಲಾವಣೆ ಬೇಕಿದ್ದರೆ ನಾನು ನಿಂತಿದ್ದೇನೆ ಎಂಬ ಬಲವಾದ ಸಂದೇಶವನ್ನು ಪಕ್ಷದ ಮುಖಂಡರಿಗೆ ನೀಡಿದ್ದಾರೆ. ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಆಂತರಿಕ ಕಲಹದ ನಂತರ, ಅಶೋಕ್ ಗೆಹ್ಲೋಟ್ ರೇಸ್‌ನಿಂದ ಹೊರಗುಳಿದ ತಕ್ಷಣ ಶಶಿ ತರೂರ್ ವಿರುದ್ಧ ಖರ್ಗೆ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಶನಿವಾರ ನಡೆಸಿರುವ ಸಂಭಾಷಣೆಯಲ್ಲಿ ಮಾತನಾಡಿರುವ ಶಶಿ ತರೂರ್, "ಇದು ಯುದ್ಧವಲ್ಲ, ನಾವು ವಿಭಿನ್ನ ಚಿಂತನೆಯ ಶಾಲೆಗಳಿಗೆ ಸೇರಿರಬಹುದು. ಆದ್ದರಿಂದ ನಮ್ಮ ಪಕ್ಷದ ಸದಸ್ಯರು ನಿರ್ಧರಿಸಲಿ. ನೀವು ಪಕ್ಷದ ಕಾರ್ಯಚಟುವಟಿಕೆ ಬಗ್ಗೆ ತೃಪ್ತರಾಗಿದ್ದರೆ, ದಯವಿಟ್ಟು ಖರ್ಗೆ ಸಾಹೇಬರಿಗೆ ಮತ ನೀಡಿ. ಆದರೆ, ಒಂದು ವೇಳೆ ನೀವು ಪಕ್ಷದಲ್ಲಿ ಬದಲಾವಣೆ ಬಯಸುತ್ತಿದ್ದರೆ ಮತ್ತು ಈಗಿರುವ ಪಕ್ಷವನ್ನು ಬದಲಾಯಿಸಲು ಬಯಸುತ್ತಿದ್ದರೆ ನನ್ನನ್ನು ಆಯ್ಕೆ ಮಾಡಿ" ಎಂಬ ನೇರ ಸಂದೇಶವನ್ನು ನೀಡಿದ್ದಾರೆ.
80 ವರ್ಷ ವಯಸ್ಸಿನ ಖರ್ಗೆ ಅವರಿಗೆ ಗಾಂಧಿ ಕುಟುಂಬದ ಬೆಂಬಲದ ಬಗ್ಗೆ ಚರ್ಚೆಗಳ ಹಿನ್ನೆಲೆ ತರೂರ್ ಅವರ ಹೇಳಿಕೆಗಳು ಬಂದಿವೆ. ಈ ಹಿಂದೆ ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನಾಮಪತ್ರ ಸಲ್ಲಿಕೆಯ ವೇಳೆ ಬಹಿರಂಗಗೊಂಡ ಭೇದಭಾವ
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೆಪ್ಟೆಂಬರ್ 30ರಂದು ಒಂದೆಡೆ ಪಕ್ಷದ ಹಿರಿಯ ಮುಖಂಡರು ಖರ್ಗೆ ಅವರ ಬೆಂಬಲಕ್ಕೆ ನಿಂತಿರುವುದು ಕಂಡು ಬಂದರೆ, ಇನ್ನೊಂದೆಡೆ ಪಕ್ಷದ ಹೊಸ ಮುಖಗಳು ಹಾಗೂ ಪಕ್ಷದ ಕಾರ್ಯಕರ್ತರು ತರೂರ್ ಬೆಂಬಲಕ್ಕೆ ನಿಂತಿರುವುದು ಕಂಡುಬಂದಿದೆ. ಅತ್ತ ಅಶೋಕ್ ಗೆಹಲೋಟ್ ಹಾಗೂ ಜಿ-23 ಗುಂಪಿನ ಸದಸ್ಯರು ಕೂಡ ಖರ್ಗೆ ಅವರಿಗೆ ಬೆಂಬಲ ನೀಡಿದ್ದಾರೆ. ಇದೇ ವೇಳೆ ಪಕ್ಷದ ಮತ್ತೋರ್ವ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನಾಮಪತ್ರ ಸಲ್ಲಿಸಲು ನಿರಾಕರಿಸಿದ್ದು, ಖರ್ಗೆ ಅವರಿಗೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-ದೆಹಲಿಯಿಂದಲೇ ಯುರೋಪ್ ನಲ್ಲಿನ ಕಾರನ್ನು ಡ್ರೈವ್ ಮಾಡಿದ ಪ್ರಧಾನಿ ಮೋದಿ..!
ಗಾಂಧಿ ಕುಟುಂಬದ ಕುರಿತು ತರೂರ್ ಹೇಳಿದ್ದೇನು?
ಪಕ್ಷದ ಅಧ್ಯಕ್ಷ ಚುನಾವಣೆಯಲ್ಲಿ ಗಾಂಧಿ ಕುಟುಂಬ ಪ್ರಮುಖ ಪಾತ್ರ ವಹಿಸಲಿದೆ ಎಂದು ಶಶಿ ತರೂರ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಯಾರೇ ಅಧ್ಯಕ್ಷರಾಗಲಿ ಗಾಂಧಿ ಕುಟುಂಬಕ್ಕೆ ಬೈ ಬೈ ಹೇಳುವಷ್ಟು ಮೂರ್ಖರಾಗುವುದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದೂ ಕೂಡ ತರೂರ್ ಹೇಳಿದ್ದಾರೆ. ಅದರ ಬದಲು ಬ್ಲಾಕ್, ಮಂಡಲ, ಜಿಲ್ಲಾ ಮಟ್ಟದಲ್ಲಿ ಅಧಿಕಾರ ನೀಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-Congress President Election: ಖರ್ಗೆ-ತರೂರ್ ಮಧ್ಯೆ ನೇರ ಹಣಾಹಣಿ, ತ್ರಿಪಾಠಿ ನಾಮಪತ್ರ ರದ್ದು
ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ತರೂರ್ ಹೇಳಿದ್ದೇನು?
ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಮಾತನಾಡಿರುವ ಶಶಿ ತರೂರ್, ಶಾಸಕರ ಮನಸ್ಸಿನಲ್ಲಿ ಏನಿದೆ, ಅದನ್ನು ಗುಪ್ತ ಮತದಾನದ (ಸಿಕ್ರೆಟ್ ಬ್ಯಾಲೆಟ್) ಮೂಲಕ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ. ಅವರಿಗೆ ಗೆಹ್ಲೋಟ್ ಬೇಕಿದ್ದರೆ ಅವರೇ ಸಿಎಂ ಆಗಿ ಮುಂದುವರಿಯಲಿ ಎಂದರು. ಮುಚ್ಚಿದ ಕೋಣೆಯಲ್ಲಿ ರಹಸ್ಯ ಮತದಾನದ ಮೂಲಕ ಶಾಸಕರ ಮನಸ್ಸು ತಿಳಿಯಲು ವೀಕ್ಷಕರನ್ನು ರಾಜಸ್ಥಾನಕ್ಕೆ ಕಳುಹಿಸಬೇಕು ಎಂದು ತರೂರ್ ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.