ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಪ್ರವಾಹವನ್ನೇ ಗೆದ್ದ ಪೋಲಿಸ್ ಪೇದೆ..!

 ಪೋಲಿಸ್ ಪೇದೆಯೊಬ್ಬ ಮಾನವೀಯತೆ ಮತ್ತು ಶೌರ್ಯದ ಅಪರೂಪದ ಪ್ರದರ್ಶನದಿಂದಾಗಿ ಇಬ್ಬರು ಮಕ್ಕಳನ್ನು ಪ್ರವಾಹದಿಂದ ರಕ್ಷಿಸಿದ ಘಟನೆ ಗುಜರಾತ್ ನಲ್ಲಿ ನಡೆದಿದೆ. 

Updated: Aug 11, 2019 , 02:36 PM IST
ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಪ್ರವಾಹವನ್ನೇ ಗೆದ್ದ ಪೋಲಿಸ್ ಪೇದೆ..!
video grab

ನವದೆಹಲಿ:  ಪೋಲಿಸ್ ಪೇದೆಯೊಬ್ಬ ಮಾನವೀಯತೆ ಮತ್ತು ಶೌರ್ಯದ ಅಪರೂಪದ ಪ್ರದರ್ಶನದಿಂದಾಗಿ ಇಬ್ಬರು ಮಕ್ಕಳನ್ನು ಪ್ರವಾಹದಿಂದ ರಕ್ಷಿಸಿದ ಘಟನೆ ಗುಜರಾತ್ ನಲ್ಲಿ ನಡೆದಿದೆ. 

ಗುಜರಾತ್  ಪೋಲಿಸ್ ಪೇದೆಯಾಗಿರುವ ಪೃಥ್ವಿರಾಜ್ ಜಡೇಜಾ, ಈಗ ಇಬ್ಬರು ಮಕ್ಕಳನ್ನು ಪ್ರವಾಹದ ಮಧ್ಯ ತನ್ನ ಹೆಗಲ ಮೇಲೆ ಹೊತ್ತುಕೊಂಡು ಸುಮಾರು 1.5 ಕಿಮೀ ದೂರ ಸಾಗಿಸುವ ಮೂಲಕ ರಕ್ಷಿಸಿದ್ದಾನೆ.ಈ ಘಟನೆ ಗುಜರಾತಿನ ಮೊರ್ಬಿ ಜಿಲ್ಲೆಯ ಕಲ್ಯಾಣಪುರ್ ಜಿಲ್ಲೆಯಲ್ಲಿ ನಡೆದಿದೆ.

ಈ ದೃಶ್ಯವು ಈಗ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋವನ್ನು ಎಎನ್ಐ ಸುದ್ದಿಸಂಸ್ಥೆ ಬಿಡುಗಡೆ ಮಾಡಿದೆ. ಈಗ ವೈರಲ್ ಆಗಿರುವ ಈ ವೀಡಿಯೋದಲ್ಲಿ ಪ್ರವಾಹದಿಂದಾಗಿ ಸಂಪೂರ್ಣ ಪ್ರದೇಶ ಜಲಾವೃತವಾಗಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಲಿಸ್ ಪೇದೆಯ ಸಾಹಸಕ್ಕೆ ಮತ್ತು ಕರ್ತವ್ಯ ನಿಷ್ಠೆಗೆ ಜನರು ಕೊಂಡಾಡಿದ್ದಾರೆ. ಈಗ ವೀಡಿಯೋ ಈಗ ವಾಟ್ಸಪ್ ಮತ್ತು ಫೇಸ್ ಬುಕ್ ಗಳಲ್ಲಿ  ಸಾಕಷ್ಟು ಶೇರ್ ಆಗುತ್ತಿದೆ.