ಕೈಗಳಿಲ್ಲದ ಹಸಿದ ಮಂಗಕ್ಕೆ ಬಾಳೆ ಹಣ್ಣು ತಿನಿಸಿ ಮಾನವೀಯತೆ ಮೆರೆದ ಪೋಲಿಸ್ ಪೇದೆ...!

 ದೇಶದಲ್ಲಿ ಲಾಕ್ ಡೌನ್ ಜಾರಿ ಇರುವ ಹಿನ್ನಲೆಯಲ್ಲಿ ಈಗ ಮಾನವರ ಮೇಲೆ ಅವಲಂಬಿತವಾಗಿರುವ ಪ್ರಾಣಿಗಳು ಸಹಿತ ಆಹಾರಕ್ಕಾಗಿ ಪಡಿಪಾಠಲು ಅನುಭವಿಸುತ್ತಿವೆ.

Updated: Apr 17, 2020 , 11:21 PM IST
ಕೈಗಳಿಲ್ಲದ ಹಸಿದ ಮಂಗಕ್ಕೆ ಬಾಳೆ ಹಣ್ಣು ತಿನಿಸಿ ಮಾನವೀಯತೆ ಮೆರೆದ ಪೋಲಿಸ್ ಪೇದೆ...!
Photo Courtsey : Twitter

ನವದೆಹಲಿ:  ದೇಶದಲ್ಲಿ ಲಾಕ್ ಡೌನ್ ಜಾರಿ ಇರುವ ಹಿನ್ನಲೆಯಲ್ಲಿ ಈಗ ಮಾನವರ ಮೇಲೆ ಅವಲಂಬಿತವಾಗಿರುವ ಪ್ರಾಣಿಗಳು ಸಹಿತ ಆಹಾರಕ್ಕಾಗಿ ಪಡಿಪಾಠಲು ಅನುಭವಿಸುತ್ತಿವೆ.

ಈಗ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಪೋಲಿಸ್ ಪೇದೆಯೊಬ್ಬ ಹಸಿದ ಮಂಗಕ್ಕೆ ಬಾಳೆ ಹಣ್ಣು ತಿನ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಈ ವೀಡಿಯೋದಲ್ಲಿ ಕೈಗಳಿಲ್ಲದ ಮಂಗಕ್ಕೆ ತಾಳ್ಮೆಯಿಂದ ಪೋಲಿಸ್ ಬಾಳೆ ಹಣ್ಣನ್ನು ಸುಲಿದು ತಿನ್ನಿಸುತ್ತಿರುವ ವೀಡಿಯೋ ನಿಜಕ್ಕೂ ಹೃದಯಸ್ಪರ್ಶೀಯಾಗಿದೆ.

ಈಗ ಸಾಮಾಜಿಕ ಮಾಧ್ಯಮದಲ್ಲಿ ಈ ಪೋಲಿಸನ ವರ್ತನೆಗೆ ಮೆಚ್ಚುಗೆ ಸುರಿಮಳೆಯ ಹರಿದು ಬಂದಿದೆ