ವಿಮಾನ ನಿಲ್ದಾಣಗಳ ಸುಮಾರು 2 ಲಕ್ಷ ನೌಕರರಿಗೆ ಬೆದರಿಕೆ ಒಡ್ಡಿದ ಕೊರೋನಾ

ನವದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಕೆಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2 ಲಕ್ಷ ಉದ್ಯೋಗಿಗಳ ನೌಕರಿಗೆ ಕುತ್ತು ತಂದಿದೆ.

Last Updated : Apr 6, 2020, 12:11 PM IST
ವಿಮಾನ ನಿಲ್ದಾಣಗಳ ಸುಮಾರು 2 ಲಕ್ಷ ನೌಕರರಿಗೆ ಬೆದರಿಕೆ ಒಡ್ಡಿದ ಕೊರೋನಾ title=

ನವದೆಹಲಿ: ಕರೋನವೈರಸ್  (Coronavirus)  ಹರಡುವಿಕೆಯನ್ನು ಕಡಿಮೆ ಮಾಡಲು ದೇಶಾದ್ಯಂತ ಜಾರಿಗೆ ತರಲಾಗಿರುವ ಲಾಕ್ ಡೌನ್ (Lockdown) ನಿಂದಾಗಿ ಇತರ ಕ್ಷೇತ್ರಗಳಂತೆ ವಿಮಾನಯಾನ ಕ್ಷೇತ್ರಕ್ಕೂ ಸಾಕಷ್ಟು ನಷ್ಟ ಉಂಟಾಗಿದೆ. ಈ ಕಾರಣದಿಂದಾಗಿ ದೇಶದ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರೊಂದಿಗೆ ಕೆಲಸ ಮಾಡುವ 2 ಲಕ್ಷ ನೌಕರರ ಕೆಲಸ ಸಂಕಷ್ಟದಲ್ಲಿ ಸಿಲುಕಿದೆ.

ಪ್ರಸ್ತುತ, ಲಾಕ್‌ಡೌನ್ ಗಡುವಿನಿಂದಾಗಿ ಏಪ್ರಿಲ್ 14 ರವರೆಗೆ ಸರಕು ಕಾರ್ಯಾಚರಣೆಗೆ ಮಾತ್ರ ಅನುಮತಿ ನೀಡಲಾಗಿದ್ದು, ಯಾವುದೇ ದೇಶೀಯ ಅಥವಾ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ಅನುಮತಿಸಲಾಗುವುದಿಲ್ಲ. ಇದರಿಂದಾಗಿ ವಿಮಾನ ಕಂಪನಿಗಳ ಗಳಿಕೆ ಕಡಿಮೆಯಾಗಿದೆ. ಸಹಜವಾಗಿಯೇ ಇದರಿಂದ ವಿಮಾನ ಕಂಪನಿಗಳಿಗೆ ಭಾರಿ ನಷ್ಟವಾಗಿದ್ದು,  ಆಯಾ ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದ ಅನೇಕ ನಿರ್ವಹಣಾ ವ್ಯವಹಾರಗಳ ಆದಾಯವನ್ನು ಪಾವತಿಸಲು ಕಂಪನಿಗಳು ಒತ್ತಡ ಎದುರಿಸುತ್ತಿವೆ.

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಸಹಾಯ ನೆನೆದು ಭಾವುಕರಾದ ಪ್ರಧಾನಿ ನರೇಂದ್ರ ಮೋದಿ

ಇದರಿಂದಾಗಿ ಪ್ರಸ್ತುತ, ವಿಮಾನ ನಿಲ್ದಾಣ ಕಾರ್ಯಾಚರಣೆ ಸಿಬ್ಬಂದಿ ಸೇರಿದಂತೆ ವಿಮಾನ ನಿಲ್ದಾಣದ ಸ್ಥಳಗಳಲ್ಲಿ ಕೆಲಸ ಮಾಡುವ ಸುಮಾರು 240,000 ಜನರ ಉದ್ಯೋಗವೂ ಅಪಾಯದಲ್ಲಿದೆ. 

ಅದರಲ್ಲೂ ಮುಖ್ಯವಾಗಿ ನವದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಕೆಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2 ಲಕ್ಷ ಉದ್ಯೋಗಿಗಳ ನೌಕರಿಗೆ ಕುತ್ತು ತಂದಿದೆ.

ಕರೋನಾವೈರಸ್ ಭೀತಿ ನಡುವೆ ಭಾರತೀಯರಿಗೆ ನೆಮ್ಮದಿ ನೀಡಲಿದೆ ಈ ಸುದ್ದಿ

ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನ್ ನಾಯರ್ ಮಾತನಾಡಿ, "ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರಿಗೆ ಕೆಲವು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಸರ್ಕಾರವನ್ನು ಕೋರಿದ್ದೇವೆ. ಇದು ಕರೋನಾ ವೈರಸ್ ಹರಡುವಿಕೆಯಿಂದ ವಿಮಾನ ನಿಲ್ದಾಣಗಳ ಮೇಲಿನ ಆರ್ಥಿಕ ಹೊರೆಯನ್ನು ನೇರವಾಗಿ ಕಡಿಮೆ ಮಾಡುತ್ತದೆ". ಈ ಹಿನ್ನೆಲೆಯಲ್ಲಿ  Assessment of Private Airport Operations (APAO) ಆರ್ಥಿಕ ಪರಿಹಾರ ಪ್ಯಾಕೇಜ್ ಒದಗಿಸುವುದಲ್ಲದೆ, ಈ ವಲಯವನ್ನು ಹಾಗೇ ಉಳಿಸಿಕೊಳ್ಳುವ ಪ್ರಮುಖ ಮೂಲಸೌಕರ್ಯ ಸ್ವತ್ತುಗಳನ್ನು ಕಾಪಾಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದೆ ಎಂದು ತಿಳಿಸಿದ್ದಾರೆ.

Trending News