ಕೊರೋನಾ ಪೀಡಿತ ಕಟ್ಟುನಿಟ್ಟಾಗಿ ಇರದಿದ್ದರೆ ಒಬ್ಬನಿಂದ 406 ಜನರಿಗೆ ಹರಡಲಿದೆ ಸೋಂಕು: ಐಸಿಎಂಆರ್​​

ಏಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್​ಡೌನ್ ಇದ್ದು ಇದನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ವಿವಿಧ ರೀತಿಯ ಮಾರ್ಗೋಪಾಯಗಳನ್ನು ಹುಡುಕಾಟ ಮಾಡುತ್ತಿದೆ.

Last Updated : Apr 8, 2020, 08:55 AM IST
ಕೊರೋನಾ ಪೀಡಿತ ಕಟ್ಟುನಿಟ್ಟಾಗಿ ಇರದಿದ್ದರೆ ಒಬ್ಬನಿಂದ 406 ಜನರಿಗೆ ಹರಡಲಿದೆ ಸೋಂಕು: ಐಸಿಎಂಆರ್​​  title=

ನವದೆಹಲಿ: ದೇಶದಲ್ಲಿ  ಕರೋನಾವೈರಸ್ (Coronavirus) ​ ವೇಗವಾಗಿ ಹರಡುತ್ತಿದೆ. ಕೊರೋನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಆತಂಕಕಾರಿಯಾದ ಮಾಹಿತಿಯೊಂದು ಬಹಿರಂಗಗೊಂಡಿದೆ.

ಕೊರೋನಾ ಸೋಂಕು ತಗುಲಿರುವ ವ್ಯಕ್ತಿ ಅಥವಾ ರೋಗಲಕ್ಷಣ ಇರುವ ವ್ಯಕ್ತಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಲಾಕ್​​ಡೌನ್​​ (Lockdown) ನಿಯಮಗಳನ್ನು ಪಾಲಿಸದೇ ಇದ್ದು ಎಲ್ಲರೊಂದಿಗೆ ಬೆರತದ್ದೇಯಾದರೆ ಆತ ಮುಂದಿನ 30 ದಿನಗಳಲ್ಲಿ 406 ಜನರಿಗೆ ರೋಗವನ್ನು ಹರಡಿಸಬಲ್ಲವನಾಗಿರುತ್ತಾನೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್​​ ತಿಳಿಸಿದ್ದಾರೆ.

ಇತ್ತೀಚಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ನಡೆಸಿರುವ ಅಧ್ಯಯನದ ಪ್ರಕಾರ ಕೊರೊನಾ ಸೋಂಕು ಪೀಡಿತ ಅತ್ಯಗತ್ಯ ಕ್ರಮಗಳನ್ನು ಪಾಲಿಸದೇ ಇದ್ದರೆ ಒಂದು‌ ತಿಂಗಳೊಳಗೆ 406 ಜನರಿಗೆ ಸೋಂಕು ಹರಡಬಹುದು. ಆದುದರಿಂದ ವೈದ್ಯರ ಸಲಹೆ ಮೇರೆಗೆ ಬೇಕಾದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಲಾವ್ ಅಗರ್ವಾಲ್ ಎಂದಿದ್ದಾರೆ.

ಏಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್​ಡೌನ್ ಇದ್ದು ಇದನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ವಿವಿಧ ರೀತಿಯ ಮಾರ್ಗೋಪಾಯಗಳನ್ನು ಹುಡುಕಾಟ ಮಾಡುತ್ತಿದೆ. ಇದೇ ವೇಳೆ ಅಮೆರಿಕದ ಸಂಸ್ಥೆಯೊಂದು ನಡೆಸಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ ಇನ್ನೂ ಹಲವು ದಿನ ನಿರ್ಬಂಧಗಳನ್ನು ಮುಂದುವರಿಸುವುದು ಅನಿವಾರ್ಯವಾಗಬಹುದು. ಜೂನ್ 4ನೇ ವಾರದಿಂದ ಸೆಪ್ಟೆಂಬರ್ ಮೊದಲ ವಾರದವರೆಗೆ ಲಾಕ್ ಡೌನ್ ಮುಂದುವರೆಸಬೇಕಾಗಬಹುದು ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಎಸ್​ಜಿ) ಅಭಿಪ್ರಾಯಪಟ್ಟಿದೆ.

ಲಾಕ್ ಡೌನ್ ಅನ್ನು ಮುಂದುವರಿಸುವುದು ಏಕೆ ಮುಖ್ಯ ಎಂಬುದಕ್ಕೆ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಸಂಸ್ಥೆ ಕಾರಣಗಳನ್ನು ತಿಳಿಸಿದೆ. ಭಾರತದ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಮತ್ತು ಸರ್ಕಾರದ ನೀತಿ ಎಷ್ಟು ಸಮರ್ಪಕವಾಗಿ ಅನುಷ್ಠಾನವಾಗಬಹುದು ಎಂಬುದರ ಹಿನ್ನೆಲೆಯಲ್ಲಿ ಈ ರೀತಿ ಅಂದಾಜು ಮಾಡಿರುವುದಾಗಿ ತಿಳಿಸಿದೆ. ಈ ಸಂಸ್ಥೆಯ ಅಧ್ಯಯನ ನಡೆದಿರುವ ಪ್ರಕಾರ ಜೂನ್ 3ನೇ ವಾರದಲ್ಲಿ ಕೊರೋನಾ ಸೋಂಕು ಇನ್ನೂ ತೀವ್ರವಾಗಿ ಹರಡುವ ಸಂಭವವಿದೆ.
 

Trending News