ದೇಶದಲ್ಲಿ 40 ಸಾವಿರ ದಾಟಿದ ಕೊರೋನಾ ಪ್ರಕರಣಗಳು,1,300 ಜನರ ಸಾವು

ಕರೋನವೈರಸ್ ಸೋಂಕುಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿದ್ದು, ಈವರೆಗೆ ಒಟ್ಟು  40,263 ಪ್ರಕರಣಗಳು ಮತ್ತು 1,307 ಸಾವುಗಳು ಸಂಭವಿಸಿವೆ, 10,887 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Last Updated : May 3, 2020, 11:27 PM IST
 ದೇಶದಲ್ಲಿ 40 ಸಾವಿರ ದಾಟಿದ ಕೊರೋನಾ ಪ್ರಕರಣಗಳು,1,300 ಜನರ ಸಾವು  title=

ನವದೆಹಲಿ: ಕರೋನವೈರಸ್ ಸೋಂಕುಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿದ್ದು, ಈವರೆಗೆ ಒಟ್ಟು  40,263 ಪ್ರಕರಣಗಳು ಮತ್ತು 1,307 ಸಾವುಗಳು ಸಂಭವಿಸಿವೆ, 10,887 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾನುವಾರ (ಮೇ 3, 2020) ಬಿಡುಗಡೆ ಮಾಡಿದ ನೂತನ ಮಾಹಿತಿಯಲ್ಲಿ  2,487 ಹೊಸ ಪ್ರಕರಣಗಳು ಮತ್ತು 87 ಸಾವುಗಳನ್ನು ವರದಿ ಮಾಡಿದೆ. ಇದು ದೇಶ ಸೋಂಕುಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದ್ದರೂ ಕೂಡ, ಮರಣ ಪ್ರಮಾಣವು ಕೇವಲ ಶೇ 3.2% ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದ್ದಾರೆ.

ಮುಂಬೈಯಲ್ಲಿ, 441 ಹೊಸ ಕೊರೋನಾ ಪ್ರಕರಣ ಮತ್ತು 21 ಸಾವು ಭಾನುವಾರ ವರದಿಯಾಗಿದ್ದು,  ಆ ಮೂಲಕ ಸೋಂಕಿತರ ಸಂಖ್ಯೆ ನಗರದಲ್ಲಿ  8,613 ಕ್ಕೆ ತಲುಪಿದ್ದು, ಇನ್ನು ಸಾವಿನ ಸಂಖ್ಯೆ 343 ರಷ್ಟಿದೆ ಎನ್ನಲಾಗಿದೆ. ಇಡೀ ಮಹಾರಾಷ್ಟ್ರದಲ್ಲಿ 12,296 ಪ್ರಕರಣಗಳು ಮತ್ತು 521 ಸಾವುಗಳು ಸಂಭವಿಸಿವೆ. ಮೂರನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಹಲವು ನಿಯಮಗಳಲ್ಲಿನ ಸಡಿಲಿಕೆಗಳ ಭಾಗವಾಗಿ ಈಗ ಮದ್ಯದಂಗಡಿಗಳು ಸೇರಿದಂತೆ ಅಗತ್ಯರಹಿತ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಹಸಿರು, ಕಿತ್ತಳೆ ಮತ್ತು ಕೆಂಪು ವಲಯ ಪ್ರದೇಶಗಳಲ್ಲಿ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದೆಹಲಿಯಲ್ಲಿ ಭಾನುವಾರ 384 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು,  64 ಸೋಂಕುಗಳೊಂದಿಗೆ ಪ್ರಕರಣಗಳ ಸಂಖ್ಯೆ ಒಟ್ಟು 4,122 ಕ್ಕೆ ತಲುಪಿದೆ. ಉತ್ತರಪ್ರದೇಶದಲ್ಲಿ 158 ಹೊಸ ಪ್ರಕರಣಗಳೊಂದಿಗೆ 2,645 ಕ್ಕೆ ಏರಿದೆ. ಈವರೆಗೆ ಅಲ್ಲಿ  43 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Trending News