ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ. ರಾಜ್ಯದ BSY ನೇತೃತ್ವದ ಸರ್ಕಾರದ ಭವಿಷ್ಯ ಮತ್ತು  ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಹೊಂದಿರುವ 13 ಅನರ್ಹಶಾಸಕರ ಕಳೆಬರಹ ನಾಳೆ ನಿರ್ಧಾರವಾಗಲಿದೆ. ರಾಜ್ಯದ ಮೂರು ರಾಜಕೀಯ ಪಕ್ಷಗಳಲ್ಲಿ ಮುಂದಿನ ನಡೆ ಕುರಿತು ಈಗಾಗಲೇ ಚರ್ಚೆಗಳು ಮುಂದುವರೆದಿದ್ದು, ಅನರ್ಹಗೊಂಡ ಶಾಸಕರಲ್ಲಿ ಆತಂಕ ಮನೆ ಮಾಡಿದೆ. 

COMMERCIAL BREAK
SCROLL TO CONTINUE READING

ಏತನ್ಮಧ್ಯೆ ಮತದಾರಪ್ರಭು ಯಾರಿಗೆ ಮಣೆಹಾಕಲಿದ್ದಾನೆ ಎಂಬ ಕುತೂಹಲ ಕೂಡ ರಾಜ್ಯದ ಜನರಲ್ಲಿ ಮೂಡಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಮತ್ತು ಬೆಂಗಳೂರಿನ ಮೂರು ಕಡೆಗಳಲ್ಲಿ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಸಂಜೆಯೊಳಗೆ ಎಲ್ಲರ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.  


ರಾಜ್ಯದ ಉಪಚುನಾವಣೆಗಳ ಕುರಿತು ನಡೆದ ಮತದಾನೋತ್ತರ ಸಮೀಕ್ಷೆಗಳು ಈಗಾಗಲೇ  ರಾಜ್ಯ BJP ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿವೆ. ಒಂದೆಡೆ ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ, ನನಗೆ ಸಮೀಕ್ಷೆಗಳಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದರೆ, ಇನ್ನೊಂದೆಡೆ ಎಲ್ಲ 15 ಸ್ಥಾನಗಳಲ್ಲಿ BJP ಗೆಲುವು  ಸಾಧಿಸಲಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅತ್ತ ಯಶವಂತಪುರ ಮತ್ತು ಕೆ. ಆರ್. ಪೇಟೆ ಕ್ಷೇತ್ರಗಳ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಜೆ.ಡಿ.ಎಸ್ ಫಲಿತಾಂಶದ ನಂತರ ಉಭಯ ರಾಷ್ಟ್ರೀಯ ಪಕ್ಷಗಳು ಪಕ್ಷದ ಕದ ತಟ್ಟುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಭಾವಿಸಿದೆ.


ಯಾವ ಕ್ಷೇತ್ರದಲ್ಲಿ  ಯಾರ ಯಾರ ಭವಿಷ್ಯ ನಿರ್ಧಾರ
ಅಥಣಿ ವಿಧಾನಸಭಾ ಕ್ಷೇತ್ರ:ಮಹೇಶ್ ಕುಮಟಳ್ಳಿ(ಬಿಜೆಪಿ), ಗಜಾನನ ಬಾಲಚಂದ್ರ(ಕಾಂಗ್ರೆಸ್), ಶ್ರೀ ಶೈಲ ತುಕ್ಕಪ್ಪ(ಜೆಡಿಎಸ್)
ಕಾಗವಾಡ ವಿಧಾನಸಭಾ ಕ್ಷೇತ್ರ:ಶ್ರೀಮಂತ ಪಾಟೀಲ್(ಬಿಜೆಪಿ ), ರಾಜು ಕಾಗೆ(ಕಾಂಗ್ರೆಸ್), ಶ್ರೀಶೈಲ ತುಗಶೆಟ್ಟಿ (ಜೆಡಿಎಸ್)
ಗೋಕಾಕ್ ವಿಧಾನಸಭಾ ಕ್ಷೇತ್ರ:ರಮೇಶ್ ಜಾರಕಿಹೊಳಿ(ಬಿಜೆಪಿ), ಲಖನ್ ಜಾರಕಿಹೊಳಿ(ಕಾಂಗ್ರೆಸ್), ಅಶೋಕ್ ಪೂಜಾರಿ(ಜೆಡಿಎಸ್)
ಯಲ್ಲಾಪುರ ವಿಧಾನಸಭಾ ಕ್ಷೇತ್ರ:ಶಿವರಾಮ್ ಹೆಬ್ಬಾರ್(ಬಿಜೆಪಿ), ಭೀಮಣ್ಣ ನಾಯ್ಕ್(ಕಾಂಗ್ರೆಸ್), ಚೈತ್ರಾ ಗೌಡ(ಜೆಡಿಎಸ್)
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ:ಅರುಣ್ ಕುಮಾರ್ ಪೂಜಾರ್(ಬಿಜೆಪಿ), ಕೆ.ಬಿ ಕೋಳಿವಾಡ್(ಕಾಂಗ್ರೆಸ್), ಮಲ್ಲಿಕಾರ್ಜುನ ಹಲಗಿರಿ(ಜೆಡಿಎಸ್)
ಹಿರೇಕೆರೂರು ವಿಧಾನಸಭಾ ಕ್ಷೇತ್ರ:ಬಿ.ಸಿ ಪಾಟೀಲ್(ಬಿಜೆಪಿ), ಬಿ.ಎಚ್ ಬನ್ನಿಕೋಡ್ (ಕಾಂಗ್ರೆಸ್), ಉಜೇನಪ್ಪ ಜಟ್ಟಪ್ಪ ಕೋಡಿಹಳ್ಳಿ(ಜೆಡಿಎಸ್)
ಹುಣಸೂರು ವಿಧಾನಸಭಾ ಕ್ಷೇತ್ರ:ಎಚ್‌. ವಿಶ್ವನಾಥ್(ಬಿಜೆಪಿ), ಎಚ್‌.ಪಿ ಮಂಜುನಾಥ್(ಕಾಂಗ್ರೆಸ್), ಸೋಮಶೇಖರ್(ಜೆಡಿಎಸ್)
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ:ಡಾ. ಸುಧಾಕರ್ (ಬಿಜೆಪಿ), ಆಂಜನಪ್ಪ(ಕಾಂಗ್ರೆಸ್ ), ರಾಧಾಕೃಷ್ಣ(ಜೆಡಿಎಸ್)
ಹೊಸಕೋಟೆ ವಿಧಾನಸಭಾ ಕ್ಷೇತ್ರ:ಎಂಟಿಬಿ ನಾಗರಾಜ್ (ಬಿಜೆಪಿ), ಪದ್ಮಾವತಿ ಸುರೇಶ್(ಕಾಂಗ್ರೆಸ್), ಶರತ್ ಬಚ್ಚೇಗೌಡ (ಪಕ್ಷೇತರ)
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ: ಗೋಪಾಲಯ್ಯ(ಬಿಜೆಪಿ), ಎಂ. ಶಿವರಾಜು(ಕಾಂಗ್ರೆಸ್)
ಕೆ.ಆರ್ ಪುರ ವಿಧಾನಸಭಾ ಕ್ಷೇತ್ರ:ಭೈರತಿ ಬಸವರಾಜ್(ಬಿಜೆಪಿ), ಎನ್. ನಾರಾಯಣ ಸ್ವಾಮಿ(ಕಾಂಗ್ರೆಸ್), ಕೃಷ್ಣ ಮೂರ್ತಿ(ಜೆಡಿಎಸ್)
ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರ:ಕೆ. ಸಿ ನಾರಾಯಣ ಗೌಡ(ಬಿಜೆಪಿ), ಕೆ.ಬಿ ಚಂದ್ರಶೇಖರ್(ಕಾಂಗ್ರೆಸ್),  ಬಿ.ಎಲ್ ದೇವರಾಜ್(ಜೆಡಿಎಸ್)
ಯಶವಂತಪುರ ವಿಧಾಸಭಾ ಕ್ಷೇತ್ರ:ಎಸ್.ಟಿ. ಸೋಮಶೇಖರ್(ಬಿಜೆಪಿ), ಪಿ.ನಾಗರಾಜ್ (ಕಾಂಗ್ರೆಸ್), ಜವರಾಯಿ ಗೌಡ(ಜೆಡಿಎಸ್)
ಶಿವಾಜಿನಗರ ವಿಧಾನಸಭಾ ಕ್ಷೇತ್ರ: ಶರವಣ(ಬಿಜೆಪಿ), ರಿಜ್ವಾನ್ ಅರ್ಷದ್(ಕಾಂಗ್ರೆಸ್), ತನ್ವೀರ್ ಅಹಮ್ಮದ್(ಜೆಡಿಎಸ್)
ವಿಜಯನಗರ ವಿಧಾನಸಭಾ ಕ್ಷೇತ್ರ: ಆನಂದ್ ಸಿಂಗ್(ಬಿಜೆಪಿ), ವಿ.ವೈ ಘೋರ್ಪಡೆ(ಕಾಂಗ್ರೆಸ್ ), ಎನ್.ಎಂ ನಬಿ(ಜೆಡಿಎಸ್)