ಕೇಂದ್ರ ಸಚಿವ Dharmendra Pradhan ಕೊವಿಡ್-19 ಪಾಸಿಟಿವ್

ಕೇಂದ್ರ ಗೃಹ ಸಚಿವ ಅಮಿತ್ ಷಾ ಬಳಿಕ ಇದೀಗ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

Updated: Aug 4, 2020 , 08:55 PM IST
ಕೇಂದ್ರ ಸಚಿವ Dharmendra Pradhan ಕೊವಿಡ್-19 ಪಾಸಿಟಿವ್

ನವದೆಹಲಿ:ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ಕರೋನಾ ವರದಿ ಸಕಾರಾತ್ಮಕವಾಗಿ ಹೊರಬಂದಿದೆ. ಅವರನ್ನು ಮೆದಾನ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೋನಾ ಸೋಂಕಿಗೆ ಒಳಗಾದ ಎರಡನೇ ಸಚಿವ ಧರ್ಮೇಂದ್ರ ಪ್ರಧಾನ ಆಗಿದ್ದಾರೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಲ್ಲಿ ಕರೋನ ಸೋಂಕಿನ ಸೌಮ್ಯ ಲಕ್ಷಣಗಳು ಕಂಡುಬಂದಿದ್ದವು. ಅವರನ್ನು ಕೂಡ ಮೆದಾಂತಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಸ್ವತಃ ಧರ್ಮೇಂದ್ರ ಪ್ರಧಾನ ಟ್ವೀಟ್ ಮಾಡಿ, "Covid-19 ಲಕ್ಷಣಗಳು ಕಂಡು ಬಂದ ಹಿನ್ನೆಲೆ ನಾನು ಟೆಸ್ಟ್ ಗೆ ಒಳಗಾಗಿದ್ದು, ನನ್ನ ವರದಿ ಪಾಸಿಟಿವ್ ಬಂದಿದೆ. ವೈದ್ಯರ ಸಲಹೆಯ ಮೇರೆಗೆ ದಾಖಲಾಗಿದ್ದು, ನನ್ನ ಆರೋಗ್ಯ ಸ್ಥಿರವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಹಲವು ದಿಗ್ಗಜ ಮುಖಂಡರು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಇವರಲ್ಲಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಾಮೀಲಾಗಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸೋಂಕಿನ ಒಟ್ಟು 52,052 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ದೇಶಾದ್ಯಂತ ಸೋಂಕಿತರ ಒಟ್ಟು ಸಂಖ್ಯೆ 18,55,745ಕ್ಕೆ ತಲುಪಿದೆ.

ಇಂದು ಬೆಳಗ್ಗೆ 8 ಗಂಟೆಗೆ ಜಾರಿಯಾಗಿರುವ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ಒಟ್ಟು 803 ಜನರು ಈ ಮಾರಕ ಕಾಯಿಲೆಗೆ ಮರಣಹೊಂದಿದ್ದು, ಒಟ್ಟು ಮೃತರ ಸಂಖ್ಯೆ 38,938ಕ್ಕೆ ತಲುಪಿದೆ.