ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ನ ವೇಗ ನಿಯಂತ್ರಣವನ್ನೇ  ಮೀರಿದೆ.ಕಳೆದ ಒಂದೇ ದಿನದಲ್ಲಿ 38,902 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದರೆ, ಸೋಂಕಿತರ ಸಂಖ್ಯೆ 10,77,618 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 543 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 26,816 ಕ್ಕೆ ಏರಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಇನ್ನೂ 3,73,379 ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. 6,77,422 ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ 30 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಜುಲೈ 16 ಗುರುವಾರ, ಮೊದಲ ಬಾರಿಗೆ, 30 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದಲ್ಲಿ 3 ಲಕ್ಷದ ಗಡಿ ದಾಟಿದ ಕೊರೊನಾ ಪ್ರಕರಣಗಳ ಸಂಖ್ಯೆ
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಕೋವಿಡ್ -19 ಹೊಸ 8,348 ಪ್ರಕರಣಗಳು ಪತ್ತೆಯಾದ ಬಳಿಕ, ಒಟ್ಟು ಪ್ರಕರಣಗಳ ಸಂಖ್ಯೆ ಮೂರು ಲಕ್ಷ ದಾಟಿದೆ. ಸೋಂಕಿನಿಂದಾಗಿ ಹೊಸ 144 ರೋಗಿಗಳು ಸಾವನ್ನಪ್ಪಿದ ಬಳಿಕ, ಸತ್ತವರ ಸಂಖ್ಯೆ 11,596 ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಇದೀಗ 3,00,937 ಕ್ಕೆ ತಲುಪಿದೆ. ರೋಗದಿಂದ ಗುಣಮುಖರಾದವರ ಸಂಖ್ಯೆ  ಸಂಖ್ಯೆಯೂ ಕೂಡ ಇದೀಗ 1,65,663ಕ್ಕೆ ತಲುಪಿದೆ.. ಮಹಾರಾಷ್ಟ್ರದಲ್ಲಿ ಇದೀಗ ಒಟ್ಟು 1,26,926 ರೋಗಿಗಳ ಮೇಲೆ ಚಿಕಿತ್ಸೆ ಮುಂದುವರೆದಿದೆ.


'ಕ್ಲಸ್ಟರ್ ಕೇರ್ ಪದ್ಧತಿ ಅಳವಡಿಸಲು ಮುಂದಾದ ಕೇರಳ ಸರ್ಕಾರ
ಕೇರಳದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು 'ಕ್ಲಸ್ಟರ್ ಕೇರ್' ವಿಧಾನವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಯಾವುದೇ ನಿರ್ದಿಷ್ಟ ಪ್ರದೇಶವನ್ನು ಹೊರತುಪಡಿಸಿ ವೈರಸ್ ಹರಡುವುದನ್ನು ತಡೆಗಟ್ಟಲು ಕ್ಲಸ್ಟರ್‌ಗಳ ಒಳಗೆ ತನಿಖೆ, ಚಿಕಿತ್ಸೆ ಮತ್ತು ಪ್ರತ್ಯೇಕ ವಾಸ ಸ್ಥಾನವನ್ನು ಬಲಪಡಿಸಲಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಹೇಳಿದ್ದಾರೆ. ರಾಜ್ಯದಲ್ಲಿ 87 ಕ್ಲಸ್ಟರ್‌ಗಳಿದ್ದು, ಅವುಗಳಲ್ಲಿ 70 ಕ್ಲಸ್ಟರ್‌ಗಳು ಇನ್ನೂ ಸೋಂಕಿತ ಪ್ರಕರಣಗಳಿದ್ದು, 17 ಕ್ಲಸ್ಟರ್‌ಗಳಲ್ಲಿ ಪ್ರಕರಣಗಳು ನಿಯಂತ್ರಣದಲ್ಲಿವೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.


ದೇಶಾದ್ಯಂತ ಕೊರೊನಾ ವೈರಸ್ ನಿಂದ ಪ್ರಭಾವಿತಕ್ಕೊಳಗಾದ ಜಿಲ್ಲೆಯಲ್ಲಿ ಶಾಮೀಲಾಗಿರುವ ಇಂದೋರ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 129 ಹೊಸ ಸೋಂಕಿನ ಹೊಸ ಪ್ರಕರಣಗಳು ಪತ್ತಿಯಾಗಿದ್ದು, ಮಾಹಾಮಾರಿಗೆ ಗುರಿಯಾದವರ ಸಂಖ್ಯೆ 6,035 ಕ್ಕೆ ತಲುಪಿದೆ. ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಕರೋನಾ ವೈರಸ್ ಸೋಂಕಿನ ವೇಗ ನಿಯಂತ್ರಣ ಮೀರಿದೆ. ಈ ಕುರಿತು ಭಾನುವಾರ ಮಾಹಿತಿ ನೀಡಿರುವ  ರಾಜ್ಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಪ್ರವೀಣ್ ಜಾಡಿಯಾ, ಕಳೆದ 24 ಗಂಟೆಗಳಲ್ಲಿ 1,957 ಮಾದರಿಗಳ ಪರೀಕ್ಷೆಯಲ್ಲಿ ಕೋವಿಡ್ -19 ರ 129 ಹೊಸ ರೋಗಿಗಳನ್ನು ನಾವು ಪತ್ತೆಹಚ್ಚಿದ್ದೇವೆ ಎಂದು ಹೇಳಿದ್ದಾರೆ.