ಪುದುಚೇರಿ ದಾಟಿದ ನಂತರ ತಗ್ಗಿದ Cyclone Nivar ಪ್ರಭಾವ

ಪುದುಚೇರಿ ದಾಟಿದ ನಂತರ, ನಿವಾರ್ ಚಂಡಮಾರುತದ ವೇಗ ಕಡಿಮೆಯಾಗಿದೆ. ಆದರೆ ಈ ಮಧ್ಯೆ ಮಳೆ ಮತ್ತು ಬಿರುಗಾಳಿಯು ತಮಿಳುನಾಡು ಮತ್ತು ಪುದುಚೇರಿಯ ಅನೇಕ ಜಿಲ್ಲೆಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿದೆ.

Written by - Yashaswini V | Last Updated : Nov 26, 2020, 07:29 AM IST
  • ಪುದುಚೇರಿ ದಾಟಿದ ನಂತರ, ನಿವಾರ್ ಚಂಡಮಾರುತದ ವೇಗ ಕಡಿಮೆಯಾಗಿದೆ.
  • ತಮಿಳುನಾಡು-ಪುದುಚೇರಿಯ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ
  • ಮಳೆ ಮತ್ತು ಬಿರುಗಾಳಿಯು ಅನೇಕ ಪ್ರದೇಶಗಳಲ್ಲಿ ಹಾನಿಯನ್ನುಂಟುಮಾಡಿದೆ
ಪುದುಚೇರಿ ದಾಟಿದ ನಂತರ ತಗ್ಗಿದ Cyclone Nivar ಪ್ರಭಾವ

ಚೆನ್ನೈ: ಪುದುಚೇರಿ ದಾಟಿದ ನಂತರ ಚಂಡಮಾರುತದ ವೇಗ ಈಗಾಗಲೇ ಕಡಿಮೆಯಾಗಿದ್ದರೂ, ನಿವಾರ್ ಚಂಡಮಾರುತವು ತಮಿಳುನಾಡಿನ ಕರಾವಳಿ ಪ್ರದೇಶಗಳತ್ತ ವೇಗವಾಗಿ ಚಲಿಸುತ್ತಿದೆ. ಏತನ್ಮಧ್ಯೆ ತಮಿಳುನಾಡು ಮತ್ತು ಪುದುಚೇರಿಯ (Puducherry)ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಮಳೆ ಮತ್ತು ಬಿರುಗಾಳಿಯು ಅನೇಕ ಪ್ರದೇಶಗಳಲ್ಲಿ ಭಾರಿ ವಿನಾಶಕ್ಕೆ ಕಾರಣವಾಗಿದೆ.

1 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು:-
ನಿವಾರ್ ಚಂಡಮಾರುತದ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡದಿಂದ ಕೋಸ್ಟ್‌ಗಾರ್ಡ್ ವರೆಗೆ ಎಲ್ಲರೂ ತಮ್ಮ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಚಂಡಮಾರುತದಿಂದ ಹಾನಿಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಡಿಆರ್‌ಎಫ್ (NDRF) ತಂಡವು ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನರನ್ನು ಚೆನ್ನೈನಿಂದ ಸ್ಥಳಾಂತರಿಸಿದ್ದು, ಪುದುಚೇರಿಯಿಂದ 1 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ನಿವಾರ್ ಚಂಡಮಾರುತದಿಂದಾಗಿ ಈ ಮಾರ್ಗಗಳಲ್ಲಿ ರದ್ದಾಗಿವೆ ಒಂದು ಡಜನ್ ರೈಲುಗಳು

ಮೂರು ರಾಜ್ಯಗಳಲ್ಲಿ 30 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ :
ಈವರೆಗೆ ತಮಿಳುನಾಡು (Tamil Nadu), ಪುದುಚೇರಿ ಮತ್ತು ಆಂಧ್ರಪ್ರದೇಶಗಳಲ್ಲಿ 30 ತಂಡಗಳನ್ನು ನಿಯೋಜಿಸಲಾಗಿದ್ದು, ತಕ್ಷಣದ ನಿಯೋಜನೆಗಾಗಿ ಇನ್ನೂ 20 ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ. ಎನ್‌ಡಿಆರ್‌ಎಫ್‌ನ ತಂಡವು 40 ಸಿಬ್ಬಂದಿಗಳನ್ನು ಒಳಗೊಂಡಿದೆ. ಇದರೊಂದಿಗೆ ಭಾರತೀಯ ನೌಕಾಪಡೆ (Indian Navy) ಮತ್ತು ಎನ್‌ಡಿಆರ್‌ಎಫ್ ತಂಡಗಳು ಜನರಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸುವಲ್ಲಿ ನಿರತವಾಗಿವೆ ಎಂದು ಎನ್‌ಡಿಆರ್‌ಎಫ್ ಮುಖ್ಯಸ್ಥರು ತಿಳಿಸಿದ್ದಾರೆ.

ಪರಿಹಾರ ಸಾಮಗ್ರಿಗಳಿಗಾಗಿ ಐಎನ್‌ಎಸ್ ಸುಮಿತ್ರಾ ರವಾನೆ:-
ಪ್ರವಾಹದ ನಂತರ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಐಎನ್‌ಎಸ್ ಸುಮಿತ್ರಾವನ್ನು ವಿಶಾಖಪಟ್ಟಣಂನಿಂದ ರವಾನಿಸಲಾಗಿದೆ. ಐಎನ್‌ಎಸ್ ಸುಮಿತ್ರಾ ಜೊತೆಗೆ, ಐಎನ್‌ಎಸ್ ಜ್ಯೋತಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯವನ್ನು ವಹಿಸಲಾಗಿದೆ. ಎರಡೂ ಹಡಗುಗಳ ಕೆಲಸವೆಂದರೆ ಪರಿಹಾರ ಸಾಮಗ್ರಿಗಳನ್ನು ತಮಿಳುನಾಡು ಕರಾವಳಿಯ ಅಗತ್ಯ ಸ್ಥಳಗಳಿಗೆ ಕೊಂಡೊಯ್ಯುವುದು.

ಚೆನ್ನೈನಲ್ಲಿ ಮಳೆ ಉಲ್ಬಣಗೊಳ್ಳುತ್ತದೆ:
ಇದಕ್ಕೂ ಮುನ್ನ ಬುಧವಾರ ತಮಿಳುನಾಡಿನ ಚೆನ್ನೈ ಮತ್ತು ಮಹಾಬಲಿಪುರಂನಲ್ಲಿ ನಿವಾರ್ ಚಂಡಮಾರುತದ (Cyclone Nivar) ಪರಿಣಾಮ ಕಂಡುಬಂದಿದೆ. ಚಂಡಮಾರುತದ ಆಗಮನದ ಮುಂಚೆಯೇ ಚೆನ್ನೈ ಭಾರಿ ಮಳೆಗೆ ಸಾಕ್ಷಿಯಾಗಿತ್ತು. ಅನೇಕ ಪ್ರದೇಶಗಳಲ್ಲಿ ನೀರು ಹರಿಯುತ್ತಿರುವ ದೃಶ್ಯಗಳು ಕಂಡುಬಂದವು. ಮಹಾಬಲಿಪುರಂನಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಅನೇಕ ಮರಗಳು ಧರೆಗುರುಳಿದವು.

More Stories

Trending News