Daily GK Quiz: ಹಳದಿ ನದಿ ಹರಿಯುವ ವಿಶ್ವದ ಏಕೈಕ ದೇಶ ಯಾವುದು..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Oct 1, 2023, 11:11 PM IST
  • "ಸಿಲಾವ್ ಖಾಜಾ" ಯಾವ ರಾಜ್ಯದ ಪ್ರಸಿದ್ಧ ಸಿಹಿ ತಿಂಡಿಯಾಗಿದೆ?
  • ಭಾರತದಲ್ಲಿ ಮೊದಲ ಮುಸ್ಲಿಂ ಆಕ್ರಮಣಕಾರ ಯಾರು?
  • ಹಳದಿ ನದಿ ಹರಿಯುವ ವಿಶ್ವದ ಏಕೈಕ ದೇಶ ಯಾವುದು?
Daily GK Quiz: ಹಳದಿ ನದಿ ಹರಿಯುವ ವಿಶ್ವದ ಏಕೈಕ ದೇಶ ಯಾವುದು..? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

ಪ್ರಶ್ನೆ 1 - ಅಶೋಕ ಚಕ್ರದಲ್ಲಿ ಎಷ್ಟು ಗೆರೆಗಳಿವೆ?

(ಎ) 22

(ಬಿ) 24

(ಸಿ) 28

(ಡಿ) 18

ಉತ್ತರ 1 (ಬಿ) 24: ಅಶೋಕ ಚಕ್ರದಲ್ಲಿ ಒಟ್ಟು 24 ಗೆರೆಗಳಿವೆ. ಭಾರತದ ತ್ರಿವರ್ಣ ರಾಷ್ಟ್ರಧ್ವಜದಲ್ಲಿ ಬಿಳಿ ಪಟ್ಟಿಯ ಮಧ್ಯದಲ್ಲಿ 24 ಗೆರೆಗಳನ್ನು ಹೊಂದಿರುವ ಕಡು ನೀಲಿ ಅಶೋಕ ಚಕ್ರವನ್ನು ಸಾರನಾಥದ (ವಾರಣಾಸಿ) ಅಶೋಕ ಸ್ತಂಭದಿಂದ ತೆಗೆದುಕೊಳ್ಳಲಾಗಿದೆ.  

ಇದನ್ನೂ ಓದಿ: ಪೊಲೀಸ್‌ ಕಾರಿನ ಮೇಲೆ ಮಹಿಳೆಯ ರೀಲ್ಸ್: ಕಾರು ಕೊಟ್ಟ ಅಧಿಕಾರಿ ಗತಿ ಏನಾಯ್ತು ಗೊತ್ತಾ?

ಪ್ರಶ್ನೆ 2 - "ಸಿಲಾವ್ ಖಾಜಾ" ಯಾವ ರಾಜ್ಯದ ಪ್ರಸಿದ್ಧ ಸಿಹಿ ತಿಂಡಿಯಾಗಿದೆ?

(ಎ) ಒಡಿಶಾ

(ಬಿ) ಪಶ್ಚಿಮ ಬಂಗಾಳ

(ಸಿ) ಜಾರ್ಖಂಡ್

(ಡಿ) ಬಿಹಾರ

ಉತ್ತರ 2  (ಡಿ) ಬಿಹಾರ: ಸಿಲಾವ್ ಖಾಜಾ ಬಿಹಾರ ರಾಜ್ಯದ ಪ್ರಸಿದ್ಧ ಸಿಹಿತಿಂಡಿ. ವಾಸ್ತವವಾಗಿ ಖಾಜಾದ ನಿಜವಾದ ಅರ್ಥ "ಬಹಳಷ್ಟು ತಿನ್ನು" ಮತ್ತು "ಹೋಗು". ಸಿಲಾವ್ ಖಾಜಾ ಒಂದು ರೀತಿಯ ಸಿಹಿಯಾಗಿದ್ದು, ಇದನ್ನು 52 ಪದರಗಳಲ್ಲಿ ತಯಾರಿಸಲಾಗುತ್ತದೆ. ಬಿಹಾರದ ನಳಂದಾ ಜಿಲ್ಲೆಯಲ್ಲಿ ಈ ಸಿಹಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸಿಲಾವ್ ಖಾಜಾಗೆ ಜಿಐ ಟ್ಯಾಗ್ ಕೂಡ ನೀಡಲಾಗಿದೆ.

ಪ್ರಶ್ನೆ 3 - ಶ್ರೀಲಂಕಾದ ಹಳೆಯ ಹೆಸರೇನು?

(ಎ) ಲಂಕಾ

(ಬಿ) ಬ್ಯಾಬಿಲೋನ್

(ಸಿ) ಸಿಲೋನ್

(ಡಿ) ರತ್ನಾಕರ್ ಸಾಗರ್

ಉತ್ತರ 3  (ಸಿ)  ಸಿಲೋನ್: ವಾಸ್ತವವಾಗಿ ಶ್ರೀಲಂಕಾದ ಹಳೆಯ ಹೆಸರು "ಸಿಲೋನ್". 1972ರ ಮೊದಲು ಈ ದೇಶವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು. ಆದರೆ 1972ರಲ್ಲಿ ಸಿಲೋನ್ ಹೆಸರನ್ನು "ಲಂಕಾ" ಎಂದು ಬದಲಾಯಿಸಲಾಯಿತು. 1978ರಲ್ಲಿ ಗೌರವದ ಸಂಕೇತವಾಗಿ "ಶ್ರೀ" ಪದವನ್ನು ಸೇರಿಸಿ ಶ್ರೀಲಂಕಾ ಎಂದು ಬದಲಾಯಿಸಲಾಯಿತು.

ಇದನ್ನೂ ಓದಿ: ಇಂದಿನಿಂದ ಹಿಂಗಾರು ಶುರು: ರಾಜ್ಯದ 8 ಜಿಲ್ಲೆಗಳಲ್ಲಿ ಧಾರಾಕಾರ ಮಳೆ-ಜಲಪ್ರವಾಹದ ಮುನ್ನೆಚ್ಚರಿಕೆ

ಪ್ರಶ್ನೆ 4 - ಭಾರತದಲ್ಲಿ ಮೊದಲ ಮುಸ್ಲಿಂ ಆಕ್ರಮಣಕಾರ ಯಾರು?

(ಎ) ಮುಹಮ್ಮದ್ ಬಿನ್ ಕಾಸಿಮ್

(ಬಿ) ಮಹಮ್ಮದ್ ಘಜ್ನಿ

(ಸಿ) ಮುಹಮ್ಮದ್ ಘೋರಿ

(ಡಿ) ತೈಮೂರ್ ಲ್ಯಾಂಗ್

ಉತ್ತರ (ಎ) ಮುಹಮ್ಮದ್ ಬಿನ್ ಕಾಸಿಮ್: ಭಾರತದ ಮೇಲೆ ಮೊದಲ ಮುಸ್ಲಿಂ ದಾಳಿಯನ್ನು ಅರಬ್ಬರು 711ರಲ್ಲಿ ಮಾಡಿದರು. ಆಗಿನ ಅರಬ್ ಗವರ್ನರ್ ಹಜ್ಜಾಜ್ ಆದೇಶದ ಮೇರೆಗೆ, "ಮುಹಮ್ಮದ್ ಬಿನ್ ಕಾಸಿಮ್" ಅರಬ್ ಸೈನ್ಯದೊಂದಿಗೆ ವಾಯುವ್ಯ ಭಾರತದ ಸಿಂಧ್ ಮೇಲೆ ಯಶಸ್ವಿಯಾಗಿ ದಾಳಿ ಮಾಡಿದ್ದನು.

ಪ್ರಶ್ನೆ 5 - ಹಳದಿ ನದಿ ಹರಿಯುವ ವಿಶ್ವದ ಏಕೈಕ ದೇಶ ಯಾವುದು?

ಉತ್ತರ 5 - ಚೀನಾದಲ್ಲಿ ಹರಿಯುವ 'ಹುವಾಂಗ್ ಹೆ' ನದಿ ಹಳದಿ ಬಣ್ಣದ ನದಿಯಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News