ಇನ್ಮುಂದೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನ ಪಕ್ಕ ಪದವಿ, ಉದ್ಯೋಗವಲ್ಲ ವಧು-ವರರ ವಯಸ್ಸು ಇರಲೇಬೇಕು!!

Age mandatory on wedding invitations: ರಾಜಸ್ಥಾನದಲ್ಲಿ ಸಾಮಾನ್ಯವಾಗಿ ಮದುವೆಗಳನ್ನು ಹೆಚ್ಚಾಗಿ ಅಕ್ಷಯ ತೃತಿಯ ಸಂದರ್ಭದಲ್ಲಿ ಮಾಡಲಾಗುತ್ತದೆ. ಆದ್ದರಿಂದ ಈ ರೀತಿಯ ಯೋಜನೆಯನ್ನು ಸರ್ಕಾರ ಜಾರಿ ತರಲು ಯೋಚಿಸಿದೆ.

Written by - Puttaraj K Alur | Last Updated : Mar 3, 2025, 07:05 PM IST
  • ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ರಾಜಸ್ಥಾನ ಸರ್ಕಾರದಿಂದ ಹೊಸ ಯೋಜನೆ
  • ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನ ಪಕ್ಕ ಪದವಿ, ಉದ್ಯೋಗವಲ್ಲ ವಧು-ವರರ ವಯಸ್ಸು ಇರಲೇಬೇಕು!!
  • ಕಾನೂನು ಬಾಹಿರ ಕೃತ್ಯ ತಡೆಯಲು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಖಡಕ್‌ ಎಚ್ಚರಿಕೆ
ಇನ್ಮುಂದೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನ ಪಕ್ಕ ಪದವಿ, ಉದ್ಯೋಗವಲ್ಲ ವಧು-ವರರ ವಯಸ್ಸು ಇರಲೇಬೇಕು!!
ಬಾಲ್ಯ ವಿವಾಹಕ್ಕೆ ಕಡಿವಾಣ

Child Marriage Prevention Act: ಬಾಲ್ಯ ವಿವಾಹ ಪದ್ಧತಿಯನ್ನು ತಡೆಯಲು ಸರ್ಕಾರಗಳು ಕೈಗೊಂಡ ಕ್ರಮಗಳು ಅಷ್ಟಿಷ್ಟಲ್ಲ... ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಮೂಢನಂಬಿಕೆಗಳಿಂದ ಹೊರಬರದ ಜನ ಆಚರಣೆ ಮತ್ತು ಸಂಪ್ರದಾಯವೆಂಬ ಹೆಸರಿನಲ್ಲಿ ಇದನ್ನು ಮುಂದುವರೆಸಿಕೊಂಡು ಹೊಗುತ್ತಿದ್ದಾರೆ. ಇನ್ನು ಹೊರಜಗತ್ತಿನ ಅರಿವೇ ಇಲ್ಲದ ಸಣ್ಣ ಸಣ್ಣ ಮಕ್ಕಳನ್ನು ಮದುವೆಯೆಂಬ ಪ್ರಪಾತಕ್ಕೆ ನೂಕುತ್ತಿದ್ದಾರೆ. ಅನಕ್ಷರತೆಯಿಂದ ಈ ತೊಂದರೆ ದಿನೇ ದಿನೇ ಮತ್ತಷ್ಟು ಉಲ್ಭಣವಾಗುತ್ತಿದೆ. ಆದ ಕಾರಣ ಈ ಸಮಸ್ಯೆಗೆ ಕಡಿವಾಣ ಹಾಕಲು ರಾಜಸ್ಥಾನ ಸರ್ಕಾರವು ಹೊಸ ಯೋಜನೆಯೊಂದನ್ನು ರೂಪಿಸಿದೆ.  

Add Zee News as a Preferred Source

ಯೋಜನೆಯನುಸಾರ ಇನ್ಮುಂದೆ ಮದುವೆಯಾಗುವ ಎಲ್ಲಾ ಜೋಡಿ ತಮ್ಮ ಮದುವೆಯ ಆಮಂತ್ರಣ ಪತ್ರಗಳಲ್ಲಿ ಹೆಸರಿನ ಮುಂದೆ ಪದವಿ, ಉದ್ಯೋಗದ ಬದಲು ತಮ್ಮ ವಯಸ್ಸನ್ನು ಮುದ್ರಿಸಬೇಕು. ಆಮಂತ್ರಣ ಪತ್ರಗಳನ್ನು ತಯಾರು ಮಾಡುವ ಮುದ್ರಣಾಲಯಗಳು ಮದುವೆಯಾಗುವ ಹುಡುಗ-ಹುಡುಗಿಯ ಕುಟುಂಬದವರಿಂದ ಅವರ ನಿಜವಾದ ವಯಸ್ಸನ್ನು ಕೇಳಿ ನಂತರ ಅದನ್ನು ಅವರ ಹೆಸರಿನ ಮುಂದೆ ಬರೆಯಬೇಕು ಎಂದು ಆದೇಶಿಸಿದೆ.  

ಇದನ್ನೂ ಓದಿ: ಪೆಟ್ರೋಲ್ ದರ ಏರಿಕೆ ಚಿಂತೆ ಬೇಡ..! ಇಲ್ಲಿವೆ ಅತ್ಯುತ್ತಮ ಮೈಲೇಜ್ ನೀಡಬಲ್ಲ ಆಕರ್ಷಕ ಬೈಕ್‌ಗಳು..!

ಇದರೊಂದಿಗ ಮದುವೆಯ ಸಂದರ್ಭದಲ್ಲಿ ಬಳಕೆಯಾಗುವ ಶಾಮಿಯಾನ, ಪುರೋಹಿತರು, ಅಡುಗೆಯವರು ಮತ್ತು ವಸ್ತ್ರವಿನ್ಯಾಸಕರು ಸೇರಿಂದಂತೆ ಹೀಗೆ ಭಾಗಿಯಾಗುವ ಎಲ್ಲರೂ ಈ ರೀತಿಯ ಬಾಲ್ಯ ವಿವಾಹ ಕುರಿತು ಜಾಗೃತಿ ಹೊಂದಿರರಬೇಕು. ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ತಡೆಯಲು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಖಡಕ್‌ ಎಚ್ಚರಿಕೆ ನೀಡಿದೆ. 

ರಾಜಸ್ಥಾನದಲ್ಲಿ ಸಾಮಾನ್ಯವಾಗಿ ಮದುವೆಗಳನ್ನು ಹೆಚ್ಚಾಗಿ ಅಕ್ಷಯ ತೃತಿಯ ಸಂದರ್ಭದಲ್ಲಿ ಮಾಡಲಾಗುತ್ತದೆ. ಆದ್ದರಿಂದ ಈ ರೀತಿಯ ಯೋಜನೆಯನ್ನು ಸರ್ಕಾರ ಜಾರಿ ತರಲು ಯೋಚಿಸಿದೆ. ಹಲವು ದಿನಗಳಿಂದ ನಡೆದುಕೊಂಡು ಬಂದ ಪದ್ಧತಿಯೇನೆಂದರೆ ಈ ಸಮಯದಲ್ಲಿಯೇ ಸಾಮಾನ್ಯವಾಗಿ ಬಾಲ್ಯ ವಿವಾಹವನ್ನು ಹೆಚ್ಚಾಗಿ ಮಾಡುತ್ತಾರೆ. ಹೀಗಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ಈ ಹೊಸ ಕ್ರಮಕ್ಕೆ ರಾಜಸ್ಥಾನ ಸರ್ಕಾರವು ಕೈಹಾಕಿದೆ.

ಇದನ್ನೂ ಓದಿ: ಪ್ರತಿ ತಿಂಗಳು 2,500 ರೂ. ಖಾತೆ ಸೇರಬೇಕಾದರೆ ಮಹಿಳೆಯರು ಈ ನೋಂದಣಿ ಮಾಡಿಸಲೇ ಬೇಕು ! ಒಂದು ತಿಂಗಳೊಳಗೆ ಹಣ ವರ್ಗಾವಣೆ ಆರಂಭ

ಸದ್ಯಕ್ಕೆ ರಾಜಸ್ಥಾನ ಸರ್ಕಾರದ ಈ ಹೊಸ ಆಲೋಚನೆ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿಬಂದಿವೆ. ಇದರಿಂದ ಬಾಲ್ಯ ವಿವಾಹ  ಸಂಪೂರ್ಣವಾಗಿ ನಿಲ್ಲುವುದಿಲ್ಲ, ಈ ಯೋಜನೆ ಯಶಸ್ವಿಯಾಗುವುದಿಲ್ಲವೆಂದು ಕೆಲವರು ಅಭಿಪ್ರಾಯ ಪಟ್ಟಿದ್ದರೆ, ವಧು-ವರರು ನಕಲಿ ಜನ್ಮ ದಿನಾಂಕವಿರುವ ದಾಖಲೆಗಳಿಂದ ಮೋಸ ಮಾಡುವ ಸಾಧ್ಯತೆ ಇರುತ್ತದೆ ಅಂತಾ ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News