ಬಾಡಿಗೆದಾರರಿಗೆ ಸಿಎಂ ಕೇಜ್ರಿವಾಲ್ ದಸರಾ ಗಿಫ್ಟ್; ಪ್ರಿಪೇಯ್ಡ್ ಮೀಟರ್ ಯೋಜನೆಗೆ ಚಾಲನೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 'ಬಾಡಿಗೆದಾರರ ವಿದ್ಯುತ್ ಮೀಟರ್ ಯೋಜನೆ' ಅನ್ನು ಬುಧವಾರ ಪ್ರಾರಂಭಿಸಿದರು. ಈ ಯೋಜನೆಯಡಿ ದೆಹಲಿಯಲ್ಲಿ ವಾಸಿಸುವ ಬಾಡಿಗೆದಾರರು ಸಹ ಪ್ರಿಪೇಯ್ಡ್ ಮೀಟರ್ ಪಡೆಯಲು ಸಾಧ್ಯವಾಗುತ್ತದೆ.

Updated: Sep 25, 2019 , 01:32 PM IST
ಬಾಡಿಗೆದಾರರಿಗೆ ಸಿಎಂ ಕೇಜ್ರಿವಾಲ್ ದಸರಾ ಗಿಫ್ಟ್; ಪ್ರಿಪೇಯ್ಡ್ ಮೀಟರ್ ಯೋಜನೆಗೆ ಚಾಲನೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 'ಬಾಡಿಗೆದಾರರ ವಿದ್ಯುತ್ ಮೀಟರ್ ಯೋಜನೆ'ಗೆ ಬುಧವಾರ ಚಾಲನೆ ನೀಡಿದರು. ಈ ಯೋಜನೆಯಡಿ ದೆಹಲಿಯಲ್ಲಿ ವಾಸಿಸುವ ಬಾಡಿಗೆದಾರರು ಸಹ ಪ್ರಿಪೇಯ್ಡ್ ಮೀಟರ್ ಪಡೆಯಲು ಸಾಧ್ಯವಾಗುತ್ತದೆ. ವಿದ್ಯುತ್ ಮೀಟರ್ ಅಳವಡಿಸಲು ಬಾಡಿಗೆದಾರನು ಭೂಮಾಲೀಕರಿಂದ ಎನ್‌ಒಸಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ ಬಾಡಿಗೆದಾರರು ಕೇವಲ ಎರಡು ದಾಖಲೆಗಳನ್ನು ಒದಗಿಸಬೇಕು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

24*7 ವಿದ್ಯುತ್ ಪಡೆಯುವ ದೇಶದ ಏಕೈಕ ನಗರ ದೆಹಲಿ:
ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೆಹಲಿಯು ಬಹುಶಃ 24 ಗಂಟೆಗಳ ವಿದ್ಯುತ್ ಪಡೆಯುವ ದೇಶದ ಏಕೈಕ ನಗರವಾಗಿದೆ. ಅಷ್ಟೇ ಅಲ್ಲದೆ ಇಡೀ ದೇಶದಲ್ಲಿ ಅಗ್ಗದ ವಿದ್ಯುತ್ ಸಿಗುತ್ತಿರುವುದು ದೆಹಲಿಯಲ್ಲಿ  ಎಂದು ಕೇಜ್ರಿವಾಲ್ ಹೇಳಿದರು. ದೆಹಲಿಯಲ್ಲಿ ವಾಸಿಸುವ ಬಾಡಿಗೆದಾರರಿಗೆ ಇದುವರೆಗೂ ವಿದ್ಯುತ್ ಮೀಟರ್ ಸೌಲಭ್ಯ ಸಿಗುತ್ತಿರಲಿಲ್ಲ. ಅದಕ್ಕಾಗಿ ಈ ಮೊದಲು ಎನ್‌ಒಸಿಯನ್ನು ಭೂಮಾಲೀಕರಿಂದ ಪಡೆಯಬೇಕಾಗಿತ್ತು ಎಂದವರು ವಿವರಿಸಿದರು.

ಈಗ ಬಾಡಿಗೆದಾರನು ಪ್ರತ್ಯೇಕ ವಿದ್ಯುತ್ ಮೀಟರ್ ಪಡೆಯಲು ಬಯಸಿದರೆ ಅದಕ್ಕಾಗಿ ಭೂಮಾಲೀಕರಿಂದ ಎನ್‌ಒಸಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಮೀಟರ್ ಸ್ಥಾಪಿಸಲು, ಬಾಡಿಗೆದಾರನು 3 ಸಂಖ್ಯೆಗಳಿಗೆ ಕರೆ ಮಾಡಬೇಕಾಗುತ್ತದೆ. ತಂಡವು ಖುದ್ದಾಗಿ ಬಂದು ಮೀಟರ್ ಅನ್ನು ಸ್ಥಾಪಿಸುತ್ತದೆ ಎಂದು ಸಿಎಂ ಕೇಜ್ರಿವಾಲ್ ತಿಳಿಸಿದರು.

ವಿದ್ಯುತ್ ಕಂಪನಿಗಳು ಮತ್ತದರ ಸಂಖ್ಯೆ:
19122: ಬಿಎಸ್ಇಎಸ್ ಯಮುನಾ(BSES yamuna)
19123: ಬಿಎಸ್ಇಎಸ್ ರಾಜಧಾನಿ (BSES rajdhani)
19124: ಟಾಟಾ ಪವರ್ (Tata Power)