ದೆಹಲಿ ಅಗ್ನಿ ಅವಘಡ: ಅರ್ಜಿ ವಿಚಾರಣೆಗೆ ನಿರಾಕರಿಸಿದ ದೆಹಲಿ ಹೈಕೋರ್ಟ್

ಘಟನೆಯನ್ನು ತಡೆಯಲು ತಜ್ಞರ ಸಮೀತಿ ರಚನೆಯಾಗಬೇಕು ಮತ್ತು ಈ ಸಮೀತಿ ಸಂಪೂರ್ಣ ದೆಹಲಿಯಲ್ಲಿ ಸರ್ವೇ ನಡೆಸಿ, ಈ ಘಟನೆಯ ಹಿನ್ನೆಲೆ ಇಂತಹ ಎಷ್ಟು ಸೂಕ್ಷ್ಮ ಕಟ್ಟಡಗಳಿವೆ ಎಂಬುದನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

Updated: Dec 10, 2019 , 06:08 PM IST
ದೆಹಲಿ ಅಗ್ನಿ ಅವಘಡ: ಅರ್ಜಿ ವಿಚಾರಣೆಗೆ ನಿರಾಕರಿಸಿದ ದೆಹಲಿ ಹೈಕೋರ್ಟ್
Photo courtesy: ANI

ನವದೆಹಲಿ: ಹಳೆದೆಹಲಿಯ ಅನಾಜ್ ಮಂಡಿಯಲ್ಲಿ ನಡೆದ ಅಗ್ನಿ ಅವಘಡದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೊರಲಾದ ಅರ್ಜಿಯ ವಿಚಾರಣೆಯಿಂದ ದೆಹಲಿ ಹೈಕೋರ್ಟ್ ಹಿಂದೆ ಸರೆದಿದೆ. ಅರ್ಜಿಯಲ್ಲಿ ಸಂಪೂರ್ಣ ಪ್ರಕರಣದ ನ್ಯಾಯಾಂಗ ತನಿಖೆಯ ಜೊತೆಗೆ ಸಿಬಿಐ ತನಿಖೆ ನಡೆಸುವಂತೆಯೂ ಕೂಡ ಆಗ್ರಹಿಸಲಾಗಿದೆ. ಈ ಅರ್ಜಿಯನ್ನು ತಿರಸ್ಕರಿಸುವ ನ್ಯಾಯಪೀಠ, ಅಧಿಕಾರಿಗಳಿಗೆ ಸಂಪೂರ್ಣ ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಉಚಿತ ಸಮಯಾವಕಾಶ ನೀಡಬೇಕು ಎಂದು ಹೇಳಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಅನಾಜ್ ಮಂಡಿಯಲ್ಲಿ ನಡೆದ ಅಗ್ನಿ ಆಕಸ್ಮಿಕಗಳಂತಹ ದುರ್ಘಟನೆಯಿಂದ ಪಾರಾಗಲು ಅತ್ಯಾವಶ್ಯಕ ತಂತ್ರ ಹಾಗೂ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅನಾಜ್ ಮಂದಿಯಲ್ಲಿ ನಡೆದ ಅಗ್ನಿ ಪ್ರಮಾದ ಮತ್ತು ಘಟನೆಯಲ್ಲಿ ನಡೆದ ಸಾವುನೋವುಗಳ ತನಿಖೆ ನಡೆಸಲು ಓರ್ವ ನಿವೃತ್ತ ನ್ಯಾಯಮೂರ್ತಿ ಅವರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಜೊತೆಗೆ ಘಟನೆಯಲ್ಲಿ ನಾಗರಿಕ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಹೊಣೆಗಾರಿಕೆ ಗೊತ್ತುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಇನ್ನೊಂದೆಡೆ ಈ ಘಟನೆಯ ಸಂತ್ರಸ್ಥರಿಗೆ ಪರಿಹಾರ ಹಣ ಘೋಷಣೆಯಾಗಬೇಕು ಮತ್ತು ಈ ಹಣವನ್ನು ಅಧಿಕಾರಿಯ ಬಳಿಯಿಂದ ವಸೂಲಿ ಮಾಡಬೇಕು ಎಂದು ಹೇಳಲಾಗಿತ್ತು.