ದೆಹಲಿಯಲ್ಲಿನ ಮಾಲಿನ್ಯ ಹೆಚ್ಚಳಕ್ಕೆ 'ಆಪ್' ಸರ್ಕಾರ ಹೊಣೆ-ಗೌತಮ್ ಗಂಭೀರ್

ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಕಾರಣ ಎಂದು ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಆರೋಪಿಸಿದ್ದಾರೆ.

Last Updated : Nov 2, 2018, 10:05 AM IST
ದೆಹಲಿಯಲ್ಲಿನ ಮಾಲಿನ್ಯ ಹೆಚ್ಚಳಕ್ಕೆ 'ಆಪ್' ಸರ್ಕಾರ ಹೊಣೆ-ಗೌತಮ್ ಗಂಭೀರ್  title=

ನವದೆಹಲಿ: ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಕಾರಣ ಎಂದು ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಆರೋಪಿಸಿದ್ದಾರೆ.

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌತಮ್ ಗಂಭೀರ್ "ದೆಹಲಿಯಲ್ಲಿ ವಾಯುಗುಣ ಮಟ್ಟ ಕುಸಿಯುತ್ತಿರುವ ವಿಚಾರವಾಗಿ ಮಾತನಾಡಬೇಕು.ನಾನು ಕಾಂಗ್ರೆಸ್ ಪರಾನು ಅಲ್ಲ ಬಿಜೆಪಿ ಪರವಾಗಿಯೂ ಅಲ್ಲ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಈ ಮಾಲಿನ್ಯಕ್ಕೆ ಜವಾಬ್ದಾರಿಯನ್ನು ಹೊರಬೇಕು" ಎಂದು ತಿಳಿಸಿದರು.

ಇನ್ನು ಮುಂದುವರೆದು ಆಮ್ ಆದ್ಮಿ ಪಕ್ಷವು ದೆಹಲಿ ಮಹಾನಗರ ಪಾಲಿಕೆಯನ್ನು ದೂರುವುದನ್ನು ಬಿಡಬೇಕು ಅದರ ಬದಲಾಗಿ ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ತಿಳಿಸಿದರು.ಇದಕ್ಕೂ ಮೊದಲು ಗಂಭೀರ್ ದೆಹಲಿ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದೆ. ಮತ್ತು ಡೆಂಗ್ಯೂ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ತಿಳಿಸಿದ್ದರು.

ಗೌತಮ್ ಗಂಬೀರ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳು ಜಾರಿಯಲ್ಲಿವೆ.ಈಗಾಗಲೇ ಈ ವಿಚಾರವಾಗಿ  ಬಿಜೆಪಿ ಅವರ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದೆ.
 

Trending News