ನವದೆಹಲಿ : ಅಲೋಪತಿ ಮತ್ತು ಆಯುರ್ವೇದಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ವಿವಾದ ದೆಹಲಿ ಹೈಕೋರ್ಟ್‌ಗೆ ತಲುಪಿದ್ದು. ಕೊರೋನಾ ಗುಣಪಡಿಸುತ್ತದೆ ಎಂದು ಪತಂಜಲಿಯ ಕೊರೊನಿಲ್ ಕಿಟ್ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡದಂತೆ ತಡೆಯಲು ಕೋರಿ ದೆಹಲಿ ವೈದ್ಯಕೀಯ ಸಂಸ್ಥೆ (DMA) ಮೊಕದ್ದಮೆಗೆ ದೆಹಲಿ ಹೈಕೋರ್ಟ್ ಇಂದು ಯೋಗ ಗುರು ಬಾಬಾ ರಾಮದೇವ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಜುಲೈ 13 ಕ್ಕೆ ವಿಚಾರಣೆ ಮುಂದೊಡಿದ್ದು ವಿಚಾರಣೆಯವರೆಗೆ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಬಾರದು ಮತ್ತು ಮೊಕದ್ದಮೆಗೆ ಸ್ಪಂದಿಸಬೇಡಿ ಎಂದು ಹೈಕೋರ್ಟ್(Delhi High Court) ಮೌಖಿಕವಾಗಿ ರಾಮದೇವ್ ಪರ ವಕೀಲರಿಗೆ ತಿಳಿಸಿದೆ. ಔಷಧವು ಕೊರೋನಾವನ್ನು ಗುಣಪಡಿಸುವುದಿಲ್ಲ ಮತ್ತು ಅದು ದಾರಿತಪ್ಪಿಸುವ ಕಾರಣ ರಾಮ್‌ದೇವ್ ಅವರ ಹೇಳಿಕೆಯು ಪರಿಣಾಮ ಬೀರುತ್ತದೆ ಎಂದು ದೆಹಲಿ ವೈದ್ಯಕೀಯ ಸಂಸ್ಥೆ ತನ್ನ ವೈದ್ಯರ ಸದಸ್ಯರ ಪರವಾಗಿ ಹೇಳಿದೆ.
ಇದನ್ನೂ ಓದಿ : BSNL: ಬಳಕೆದಾರರಿಗೆ ಭರ್ಜರಿ ಗಿಫ್ಟ್ ನೀಡಿದ ಬಿಎಸ್ಎನ್ಎಲ್
ಇತ್ತೀಚೆಗೆ ಯೋಗ ಗುರು ಬಾಬಾ ರಾಮದೇವ್ ಅಲೋಪತಿ ವಿರುದ್ದ ಸುಳ್ಳು ಮಾಹಿತಿಯ ಹೇಳಿಕೆ ನೀಡಿದ್ದನ್ನು ವಿರೋಧಿಸಿ ವೈದ್ಯರು ಬಾಬಾ ರಾಮದೇವ್(Baba Ramdev) ವಿರುದ್ದ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ : ಭಿಕ್ಷೆ ಬೇಡುತ್ತಿದ್ದ ವೃದ್ಧ ಮಹಿಳೆಯ ಬಳಿಯಿದ್ದ ಹಣ ಎಷ್ಟೆಂದು ತಿಳಿದರೆ ಶಾಕ್ ಆಗಬಹುದು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ