ದೆಹಲಿ ಸಿಎಂ ಕೇಜ್ರಿವಾಲ್ ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಮತ್ತು ಅವಹೇಳನಕಾರಿ ಇಮೇಲ್‌ಗಳನ್ನು ಕಳುಹಿಸಿದ ಆರೋಪಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Updated: Oct 5, 2019 , 03:40 PM IST
ದೆಹಲಿ ಸಿಎಂ ಕೇಜ್ರಿವಾಲ್ ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ
file photo

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಮತ್ತು ಅವಹೇಳನಕಾರಿ ಇಮೇಲ್‌ಗಳನ್ನು ಕಳುಹಿಸಿದ ಆರೋಪಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಈಗ ಬಂಧಿತ ಆರೋಪಿಯು ರಾಜಸ್ಥಾನದ ಅಜ್ಮೀರ್ ಮೂಲದವನು ಮತ್ತು ಮಾನಸಿಕ ಅಸ್ವಸ್ಥ, ಈ ಹಿಂದೆ ಹಲವಾರು ಜನರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಆರೋಪಿ ಸಿಎಂ ಕೇಜ್ರಿವಾಲ್ ಅವರ ಇಮೇಲ್ ವಿಳಾಸವನ್ನು ಪಡೆದು ಬೆದರಿಕೆ ಮೇಲ್ ಕಳುಹಿಸಿದ್ದಾರೆ ಎಂದು ಪೊಲೀಸರು ಎಎನ್ಐಗೆ ತಿಳಿಸಿದ್ದಾರೆ, ಈ ಮೊದಲು ಅವರು ಹಲವಾರು ಜನರಿಗೆ ಮೇಲ್ ಮಾಡಿದ್ದಾರೆ. ಈಗ ಆ ವ್ಯಕ್ತಿಯ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದು, ಅವರಿಗೆ ವೈದ್ಯಕೀಯ ಸಮಾಲೋಚನೆ ನೀಡಲು ಯೋಜಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಸೆಪ್ಟೆಂಬರ್ ತಿಂಗಳಲ್ಲಿ ಕೇಜ್ರಿವಾಲ್ ಎರಡು ಬೆದರಿಕೆ ಮತ್ತು ಅವಹೇಳನಕಾರಿ ಇಮೇಲ್ ಸಂದೇಶಗಳು ಬಂದಿದ್ದವು, ನಂತರ ಮುಖ್ಯ ಕಾರ್ಯದರ್ಶಿ ಅಜಯ್ ಚಗಟಿ ಅವರು ಪೋಲಿಸ್ ರ ಬಳಿ ದೂರು ದಾಖಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.