ಪಾಕಿಸ್ತಾನ ನಿದ್ದೆಗೆಡಿಸಿದ್ದ "ಬ್ರಹ್ಮೋಸ್ ಕ್ಷಿಪಣಿ" ತಯಾರಿಸಲು ಎಷ್ಟು ವೆಚ್ಚವಾಯಿತು ಅಂತ ಗೊತ್ತಾದ್ರೆ ಶಾಕ್‌ ಆಗ್ರಿರಾ..!

Brahmos missile : ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕ್ವಾ ನದಿಯ ಹೆಸರನ್ನು ಇಡಲಾಗಿದೆ. ಹಾಗಿದ್ರೆ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲು ಎಷ್ಟು ಖರ್ಚು ಮಾಡಲಾಗಿದೆ. ಬನ್ನಿ ತಿಳಿಯೋಣ

Written by - Krishna N K | Last Updated : May 12, 2025, 11:16 PM IST
    • ಬ್ರಹ್ಮೋಸ್ ಕ್ಷಿಪಣಿಗೆ ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕ್ವಾ ನದಿಯ ಹೆಸರನ್ನು ಇಡಲಾಗಿದೆ.
    • ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದೆ.
    • ಇದರ ಕ್ರೇಡಿಟ್‌ ಭಾರತದ ನಿರ್ಮಿತ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್‌ಗೆ ಸೇರಬೇಕು..
ಪಾಕಿಸ್ತಾನ ನಿದ್ದೆಗೆಡಿಸಿದ್ದ "ಬ್ರಹ್ಮೋಸ್ ಕ್ಷಿಪಣಿ" ತಯಾರಿಸಲು ಎಷ್ಟು ವೆಚ್ಚವಾಯಿತು ಅಂತ ಗೊತ್ತಾದ್ರೆ ಶಾಕ್‌ ಆಗ್ರಿರಾ..!

Operation Sindoor : ಮೇ 10 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸಲಾಯಿತು. ಆದರೆ ಅದಕ್ಕೂ ಮುನ್ನ, ಭಾರತ ಪಾಕಿಸ್ತಾನಕ್ಕೆ ತನ್ನ ಶಕ್ತಿ ಪ್ರದರ್ಶನ ಮಾಡಿತು. ಇದರ ಕ್ರೇಡಿಟ್‌ ಭಾರತದ ನಿರ್ಮಿತ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್‌ಗೆ ಸೇರಬೇಕು.. 

Add Zee News as a Preferred Source

ಹೌದು.. ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಆರಂಭವಾದ ದಿನ ಅದು... ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು 26 ಭಾರತೀಯರನ್ನು ಗುಂಡಿಕ್ಕಿ ಕೊಂದ ನಂತರ ಪಾಕಿಸ್ತಾನ ಮತ್ತು ಭಾರತ ನಡುವೆ ಯುದ್ಧದ ವಾತಾವರಣ ಶುರುವಾಯಿತು. 

ಇದನ್ನೂ ಓದಿ:"ಆಪರೇಷನ್ ಸಿಂಧೂರ್ 3.0" ಸೂಚನೆ ನೀಡಿದ ಪ್ರಧಾನಿ ಮೋದಿ..! ಪಾಕ್‌ಗೆ ಢವಢವ.. 

ಇದರ ಬೆನ್ನಲ್ಲೇ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಮೇ 7 ರಂದು ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು. ಈ ದಾಳಿಯಲ್ಲಿ ಭಾರತವು ತನ್ನ ಮೇಡ್ ಇನ್ ಇಂಡಿಯಾ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಅನ್ನು ಬಳಸಿತು. ಇದು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ಪುಡಿ ಪುಡಿ ಮಾಡಿತು..

ಮೇ 7 ರಂದು ಭಾರತ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ ನಂತರ ಪಾಕಿಸ್ತಾನ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಭಾರತದ ಮೇಲೆ ದಾಳಿ ಮಾಡಿತು. ಇವುಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ನಾಶಪಡಿಸಿತು. ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ, ಭಾರತವು ಬ್ರಹ್ಮೋಸ್ ಕ್ಷಿಪಣಿಗಳೊಂದಿಗೆ ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ಮಾಡಿತು.

ಇದನ್ನೂ ಓದಿ:"ನೀರು ಮತ್ತು ರಕ್ತ ಜೊತೆಯಾಗಿ ಹರಿಯಲು ಸಾಧ್ಯವಿಲ್ಲ.." ಎನ್ನುತ್ತಾ ಆಪರೇಷನ್ ಸಿಂಧೂರ ಯಶಸ್ಸಿನ ಬಳಿಕ ಮೊದಲ ಬಾರಿಗೆ ಮಾತನಾಡಿದ ಪ್ರಧಾನಿ ಮೋದಿ: ಭಾಷಣದ ಮುಖ್ಯಾಂಶಗಳು ಇಲ್ಲಿವೆ

ಬ್ರಹ್ಮೋಸ್ ಬೆಲೆ ಎಷ್ಟು? : ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕ್ವಾ ನದಿಯ ಹೆಸರನ್ನು ಇಡಲಾಗಿದೆ. ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲು 250 ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಲಾಗಿದೆ. ಇಂದಿನ ಮೌಲ್ಯದಲ್ಲಿ, ಇದು ರೂ. 2,135 ಕೋಟಿ. ಈ ಯೋಜನೆಯಲ್ಲಿ ಭಾರತ 50.5% ಮತ್ತು ರಷ್ಯಾ 49.5% ಕೊಡುಗೆ ನೀಡಿವೆ. ಬ್ರಹ್ಮೋಸ್ ಕ್ಷಿಪಣಿಯ ಅಧಿಕೃತ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲವಾದರೂ, ಮಾಧ್ಯಮ ವರದಿಗಳು ಬ್ರಹ್ಮೋಸ್ ಉತ್ಪಾದನೆಯ ಘಟಕ ವೆಚ್ಚ ಸುಮಾರು ರೂ. 300 ಕೋಟಿ ಎಂದು ತಿಳಿಸಿವೆ. ಅಲ್ಲದೆ, ಒಂದು ಕ್ಷಿಪಣಿಯ ಬೆಲೆ ಸರಿಸುಮಾರು ರೂ. 34 ಕೋಟಿ.

ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿ: ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿ 290 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಇದರ ಮುಂದುವರಿದ ಆವೃತ್ತಿಯು 500 ರಿಂದ 800 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಈ ಕ್ಷಿಪಣಿ 200 ರಿಂದ 300 ಕೆಜಿ ಭಾರದ ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲದು. ಇದು ಶತ್ರುವನ್ನು ನಾಶಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News