ಮದ್ಯಪಾನ ಆರೋಗ್ಯಕ್ಕೆ ಕೆಟ್ಟದ್ದು ಅಂತ ಕುಡಿಯದೇ ಸುಮ್ಮನಿರುವ ಜನರು ಕಡಿಮೆ. ವೈದ್ಯರು ಮದ್ಯಪಾನ ಮಾಡುವುದು ಕೆಟ್ಟದೆಂದು ಹೇಳಿದರೂ ಕೆಲವರು ಕಿಗೆ ಹಾಕಿಕೊಳ್ಳಲ್ಲ. ಜನರು ವಿವಿಧ ಕಾರಣಗಳನ್ನು ನೀಡಿ ದಿನನಿತ್ಯವೂ ಎಣ್ಣೆ ಹೊಡಿತಾರೆ.. ಅದರಂತೆ ಈ ರಾಜ್ಯದಲ್ಲಿ ಅತಿ ಹೆಚ್ಚು ಮಹಿಳೆಯರು ಎಣ್ಣೆ ಕುಡಿಯೋದು..

Alcohol consumption in India : ಮದ್ಯ ಮಾರಾಟವು ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ. ಕುಡಿಯುವವರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ.. ಸರ್ಕಾರಗಳು ಮದ್ಯದ ಬೆಲೆಗಳನ್ನು ಹೆಚ್ಚಿಸುತ್ತಿದ್ದರೂ, ಮದ್ಯ ಸೇವನೆ ನಿಲ್ಲುತ್ತಿಲ್ಲ. ಈಗ ಇಡೀ ದೇಶವೇ ಮದ್ಯದಿಂದ ತುಂಬಿ ಹೋಗಿದೆ. ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ. ಮದ್ಯ ಮಾರಾಟವು ಸರ್ಕಾರಗಳಿಗೆ ಆದಾಯದ ಮೂಲವಾಗಿದೆ.
ರಾಜ್ಯದ ಖಜಾನೆಗೆ ಬೃಹತ್ ಪ್ರಮಾಣದ ಹಣವನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಇದರರ್ಥ ಸರ್ಕಾರಗಳು ಮದ್ಯವನ್ನು ನಿಷೇಧಿಸುವ ಧೈರ್ಯವನ್ನು ಮಾಡಲ್ಲ. ಇದರ ಮಧ್ಯ ಬದಲಾಗುತ್ತಿರುವ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಪ್ರವೃತ್ತಿಗಳೊಂದಿಗೆ, ಮಹಿಳೆಯರು ಸಹ ಈಗ ಮದ್ಯದ ವ್ಯಸನಿಯಾಗುತ್ತಿದ್ದಾರೆ.
ವಿಶೇಷವಾಗಿ ಯುವಜನರು ಒತ್ತಡ ನಿವಾರಿಸಿಕೊಳ್ಳಲು ಮದ್ಯದ ಮೊರೆ ಹೋಗುತ್ತಿದ್ದಾರೆ. ಇದು ಹೆಚ್ಚಾಗಿ ಐಟಿ ಉದ್ಯೋಗಿಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಅತಿ ಹೆಚ್ಚು ಮಹಿಳೆಯರು ಮದ್ಯಪಾನ ಮಾಡುವ ರಾಜ್ಯ ಅಸ್ಸಾಂ. ಈ ವಿಚಾರ ಸಮೀಕ್ಷೆಯಿಂದ ಬಯಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ದೇಶಾದ್ಯಂತ 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸರಾಸರಿ ಶೇ. 1.2 ರಷ್ಟು ಜನರು ಮದ್ಯ ಸೇವಿಸುತ್ತಾರೆ. ಅಸ್ಸಾಂನಲ್ಲಿ, ಈ ಶೇಕಡಾವಾರು 16.5 ರ ಹತ್ತಿರದಲ್ಲಿದೆ. ಅಸ್ಸಾಂ ನಂತರ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಂತಹ ಈಶಾನ್ಯ ರಾಜ್ಯಗಳಲ್ಲಿಯೂ ಮಹಿಳೆಯರು ಮದ್ಯಪಾನ ಮಾಡುವ ಸಂಖ್ಯೆ ಗಮನಾರ್ಹವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.