Fixed Deposit ಮೇಲೆ ಹೆಚ್ಚಿನ ಬಡ್ಡಿ ದರ ಬೇಕೇ..? ಇಲ್ಲಿದೆ ಉಪಾಯ

ಹೆಚ್ಚಿನ ಜನರು ಸುರಕ್ಷಿತ ಹಣ ಹೂಡಿಕೆಗಾಗಿ ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುತ್ತಾರೆ, FD ಯಲ್ಲಿ ಮಾಡಿದ ಹೂಡಿಕೆಯ ಮೇಲೆ ಶೇ. 6 ರಿಂದ ಶೇ. 7.5 ರಷು ಬಡ್ಡಿ ಪಾವತಿಸಲಾಗುತ್ತದೆ.

Last Updated : Jun 8, 2020, 12:59 PM IST
Fixed Deposit ಮೇಲೆ ಹೆಚ್ಚಿನ ಬಡ್ಡಿ ದರ ಬೇಕೇ..? ಇಲ್ಲಿದೆ ಉಪಾಯ  title=

ನವದೆಹಲಿ: ಹೆಚ್ಚಿನ ಜನರು ಸುರಕ್ಷಿತ ಹಣ ಹೂಡಿಕೆಗಾಗಿ ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುತ್ತಾರೆ, FD ಯಲ್ಲಿ ಮಾಡಿದ ಹೂಡಿಕೆಯ ಮೇಲೆ ಶೇ. 6 ರಿಂದ 7.5 ರಷು ಬಡ್ಡಿ ಸಿಗುತ್ತದೆ. ಬ್ಯಾಂಕ್ ಎಫ್‌ಡಿ ಹೊರತುಪಡಿಸಿ, ನೀವು ಕಾರ್ಪೊರೇಟ್ ಎಫ್‌ಡಿ ಯಲ್ಲಿಯೂ ಹೂಡಿಕೆ ಮಾಡಬಹುದು. ಕಾರ್ಪೊರೇಟ್ ಎಫ್‌ಡಿ ನಿಮಗೆ ಬ್ಯಾಂಕ್ ಎಫ್‌ಡಿಗಿಂತ ಹೆಚ್ಚಿನ ಬಡ್ಡಿ ನೀಡುತ್ತದೆ. ಆದರೆ, ಕಾರ್ಪೊರೇಟ್ ಎಫ್‌ಡಿ ಎಂದರೇನು? ಬ್ಯಾಂಕ್ ಎಫ್‌ಡಿಗೆ ಹೋಲಿಸಿದರೆ ಕಾರ್ಪೊರೇಟ್ ಎಫ್‌ಡಿಯಲ್ಲಿ ಏನು ಭಿನ್ನವಾಗಿದೆ? ಕಾರ್ಪೊರೇಟ್ ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಹೇಗೆ ಮತ್ತು ಅದರಲ್ಲಿ ಯಾವ ರೀತಿಯ ರಿಸ್ಕ್ ಇರುತ್ತದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

FD ಹೂಡಿಕೆಯ ವಿವಿಧ ವಿಕಲ್ಪಗಳು
- ಯಾವುದೇ ಒಂದು ಬ್ಯಾಂಕ್ ನಲ್ಲಿ ನೀವು ಸ್ಥಿರ ಠೇವಣಿ (ಎಫ್‌ಡಿ) ಖಾತೆ ತೆರೆಯಬಹುದು.
- ಈ ಎಫ್‌ಡಿ ಖಾತೆಗಳನ್ನು ನೀವು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಗಳಲ್ಲಿ ತೆರೆಯಬಹುದು.
- ಎನ್‌ಬಿಎಫ್‌ಸಿ, ಅಂಚೆ ಇಲಾಖೆ FD, ಕಾರ್ಪೊರೇಟ್ ಸ್ಥಿರ ಠೇವಣಿ - ಆಯ್ಕೆಗಳು ಕೂಡ ನಿಮಗೆ ಲಭ್ಯ ಇರಲಿವೆ.
- ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿ ಕೂಡ ಇದೆ.
- ತೆರಿಗೆ ಉಳಿತಾಯ, ಮರುಕಳಿಸುವ ಠೇವಣಿ, ಅನಿವಾಸಿ - ಭಾರತೀಯರಿಗಾಗಿಯೂ ಕೂಡ FD ಇವೆ.

ಕಾರ್ಪೋರೆಟ್ FD ಅಂದರೇನು?
- ಹೂಡಿಕೆದಾರರು ಯಾವುದೇ ಒಂದು ಕಂಪನಿಯೊಂದಿಗೆ ಎಫ್‌ಡಿ ತೆರೆಯುತ್ತಾರೆ.
- ಅವಧಿ ಮತ್ತು ಬಡ್ಡಿದರ ಸುನಿಶ್ಚಿತವಾಗಿರುತ್ತದೆ.
- ಇದನ್ನು ಕಾರ್ಪೊರೇಟ್ ಎಫ್‌ಡಿ ಅಥವಾ ಕಂಪನಿ ಎಫ್‌ಡಿ ಎಂದು ಕರೆಯಲಾಗುತ್ತದೆ.
- ಹಣಕಾಸು ಸಂಸ್ಥೆಗಳು ಎನ್‌ಬಿಎಫ್‌ಸಿಗಳೊಂದಿಗೆ ಠೇವಣಿಗಳನ್ನು ಇಡುತ್ತವೆ.
- ಈ ಎಫ್‌ಡಿಗಳನ್ನು ಕಂಪನಿಗಳ ಕಾಯ್ದೆಯಡಿ ನಿಯಂತ್ರಿಸಲಾಗುತ್ತದೆ.

ಸುರಕ್ಷತೆ ಕಡಿಮೆ ಇರುವ FD
- ಕಾರ್ಪೊರೇಟ್ ಎಫ್‌ಡಿ ಸುರಕ್ಷತೆ ಕಡಿಮೆ ಇರುವ ಹೂಡಿಕೆ.
- ಇದರರ್ಥ ಒಂದು ವೇಳೆ ಕಂಪನಿ ದಿವಾಳಿಯಾದರೆ, ಬಂಡವಾಳವನ್ನು - ಮರಳಿ ಪಡೆಯಲು ಪ್ರಮಾಣಪತ್ರ ಮಾರಾಟ ಸಾಧ್ಯವಾಗುವುದಿಲ್ಲ.
- ಆದ್ದರಿಂದ ಇದು ರಿಸ್ಕ್ ನಿಂದ ಕೂಡಿದ FD ಹೂಡಿಕೆಯಾಗಿದೆ.

FD ಹೂಡಿಕೆಯಲ್ಲಿ ಎಷ್ಟು ಪ್ರಕಾರಗಳಿವೆ
- ಕಾರ್ಪೊರೇಟ್ ಎಫ್‌ಡಿ ಅನ್ನು ಯಾವುದೇ ಕಂಪನಿಯು ಜಾರಿಗೊಳಿಸಬಹುದು..
- ಕಂಪನಿಗಳು ಹಣವನ್ನು ಸಂಗ್ರಹಿಸಲು ಎಫ್‌ಡಿಗಳನ್ನು ಜಾರಿಗೊಳಿಸುತ್ತವೆ.
- ಹೌಸಿಂಗ್ ಫೈನಾನ್ಸ್,  ಸಾರಿಗೆ ಮತ್ತು ಇತರ ಕಂಪನಿಗಳಿಗೆ ಇಂತಹ FD ಗಳನ್ನು ಜಾರಿಗೊಳಿಸುತ್ತವೆ.
- ಕಾರ್ಪೊರೇಟ್ ಎಫ್‌ಡಿಗಳಲ್ಲಿ ಹೂಡಿಕೆ ಮಧ್ಯವರ್ತಿಗಳ ಮೂಲಕ ನಡೆಯುತ್ತದೆ.
- ಅಪ್ಲಿಕೇಶನ್ ಗಳಿಗಾಗಿ ಕಂಪನಿ ಬ್ರೋಕರ್ ಗಳನ್ನು ನೆಮಿಸಿರುತ್ತದೆ.
- ಹೂಡಿಕೆಗಾಗಿ ಭೌತಿಕ ಅರ್ಜಿಯನ್ನು ಭರ್ತಿ ಮಾಡಬೇಕು.
- ಮೊತ್ತದ ಚೆಕ್ ಜೊತೆಗೆ ಕೆವೈಸಿ ದಾಖಲೆ ನೀಡಬೇಕಾಗುತ್ತದೆ

ಯಾವ ದಾಖಲೆಗಳು ಬೇಕಾಗುತ್ತವೆ?
- ಕಾರ್ಪೊರೇಟ್ ಎಫ್‌ಡಿಗೆ 3 ರಿಂದ 4 ದಾಖಲೆಗಳನ್ನು ನೀಡಬೇಕು.
- ಅರ್ಜಿಯ ಜೊತೆಗೆ ಪ್ಯಾನ್ ಕಾರ್ಡ್, ವಿಳಾಸ ಪುರಾವೆ ನೀಡಬೇಕು.
- ಪ್ಯಾನ್ ಅನ್ನು ವಿಳಾಸ ಪುರಾವೆಗಳ ಜೊತೆಗೆ ಆಧಾರ್ ಕಾರ್ಡ್ ದಾಖಲೆ ಕೂಡ ನೀಡಬಹುದು.

ತೆರಿಗೆ ವಿನಾಯ್ತಿ ಸಿಗುತ್ತದೆಯೇ?
-
ಕಾರ್ಪೊರೇಟ್ ಎಫ್‌ಡಿಗಳ ಮೇಲೆ ತೆರಿಗೆ ವಿನಾಯ್ತಿ ಸಿಗುವುದಿಲ್ಲ.
- ಇವು ಹೆಚ್ಚಿನ ರಿಸ್ಕ್ ಹೊಂದಿದ ಎಫ್‌ಡಿಗಳಾಗಿವೆ.
- ಇವುಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸಲಾಗುತದೆ.
- ಹೀಗಾಗಿ ಹೆಚ್ಚಿನ ಜಾಗ್ರತೆ ವಹಿಸಿ ಇಂತಹ ಹೂಡಿಕೆಯಲ್ಲಿ ಇಳಿಯಬೇಕು.

ತೆರಿಗೆ ಲೆಕ್ಕಾಚಾರ ಹೇಗಿರುತ್ತದೆ?
- 15 ಹೆಚ್ ಮತ್ತು 15 ಜಿ ಫಾರ್ಮ್ ಅನ್ನು ಭರ್ತಿ ಮಾಡದೆ ಹೋದಲ್ಲಿ, ಕಾರ್ಪೊರೇಟ್ - ಎಫ್‌ಡಿಯಲ್ಲಿ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
- ಎಫ್‌ಡಿ ಮೇಲಿನ ಬಡ್ಡಿಯನ್ನು'ಇತರ ಮೂಲಗಳಿಂದ ಬರುವ ಆದಾಯ'ದಲ್ಲಿ ಶಾಮೀಲಾಗಿರುತ್ತದೆ.
- ತೆರಿಗೆ ಸ್ಲ್ಯಾಬ್ ಪ್ರಕಾರ ಇದಕ್ಕೆ ತೆರಿಗೆ ವಿಧಿಸಲಾಗುತ್ತದೆ.

ಬ್ಯಾಂಕ್ FD ಗಿಂತ ಇದು ಹೇಗೆ ಭಿನ್ನವಾಗಿದೆ
- ಕಂಪನಿಯ ಠೇವಣಿ ಮೇಲೆ ವಿಮೆ ಇರುವುದಿಲ್ಲ.
- ಬ್ಯಾಂಕ್ ಸ್ಥಿರ ಠೇವಣಿಗಳಲ್ಲಿ ವಿಮಾ ರಕ್ಷಣೆ ಇರುತ್ತದೆ. ಅಂದರೆ `1 ಲಕ್ಷ ರೂ.ವರೆಗೆ - ವಿಮಾ ಸುರಕ್ಷತೆ ಇರುತ್ತದೆ. ಈ  ಮಿತಿ ನಿಮ್ಮ ಎಲ್ಲಾ ಠೇವಣಿಗೆ ಅನ್ವಯಿಸುತ್ತದೆ.
- `1 ಲಕ್ಷಕ್ಕಿಂತ ಹೆಚ್ಚಿನ ಠೇವಣಿ ಇದ್ದರೂ ಕೂಡ ಇಷ್ಟೇ ಮೊತ್ತದ ವಿಮಾ ಕವರ್ ಇರುತ್ತದೆ.
- ಡಿಐಸಿಜಿಸಿ ಈ ವಿಮೆಯನ್ನು ಒದಗಿಸುತ್ತದೆ.
- ಡಿಐಸಿಜಿಸಿ - ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವಾಗಿದೆ.

ಕಾರ್ಪೋರೆಟ್ FDಗಳು ಎಷ್ಟು ಸುರಕ್ಷಿತವಾಗಿವೆ?
- ಕಾರ್ಪೊರೇಟ್ ಎಫ್‌ಡಿಗಳು ಹೆಚ್ಚಿನ ಪ್ರಮಾಣದಲ್ಲಿ ರಿಸ್ಕ್ ಹೊಂದಿರುತ್ತವೆ.
- ಆದರೆ, ಹೆಚ್ಚಿನ ಅಪಾಯದೊಂದಿಗೆ ಆದಾಯವನ್ನು ಕೂಡ ನೀಡುತ್ತವೆ.
- ಹೂಡಿಕೆ ಮಾಡುವ ಮೊದಲು ಕಂಪನಿಯ ಬಗ್ಗೆ ತಿಳಿದುಕೊಳ್ಳಿ.
- ಹೂಡಿಕೆ ಮಾಡಲು ಎಂದಿಗೂ ಆತುರಪಡಬೇಡಿ.
- ನಿಮ್ಮ ಮಟ್ಟದಲ್ಲಿ ಉತ್ತಮ ಸಂಶೋಧನೆ ಮಾಡಿ.
- ಹಿಂದಿನ ಕಂಪನಿಯ ಕಾರ್ಯಕ್ಷಮತೆ, ಗ್ರಾಹಕ ಸೇವೆ, ಕಂಪನಿಯ ಆರ್ಥಿಕ ಸಾಧನೆ ಹೇಗೆ? ನಿರ್ದೇಶಕ, ಪ್ರವರ್ತಕನ ಬಗ್ಗೆಯೂ ತಿಳಿದುಕೊಳ್ಳಿ.

ಕಾರ್ಪೋರೆಟ್ FDಯಲ್ಲಿ ಹೂಡಿದೆ ಹೇಗೆ ಮಾಡಬೇಕು?
- ಕಂಪನಿಯು ಅಪ್ಲಿಕೇಶನ್ಗಾಗಿ ಬ್ರೋಕರ್ ಅನ್ನು ನೇಮಿಸುತ್ತದೆ.
- ಹೂಡಿಕೆಗಾಗಿ ಭೌತಿಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
- ಚೆಕ್ನೊಂದಿಗೆ, ಕೆವೈಸಿ ದಾಖಲೆಗಳನ್ನು ನೀಡಬೇಕಾಗಿದೆ.
- ಫಾರ್ಮ್ ಜೊತೆಗೆ ಪ್ಯಾನ್ ಕಾರ್ಡ್, ವಿಳಾಸ ಪುರಾವೆ ನೀಡಬೇಕು.

ಈ ರೀತಿಯ ಹೂಡಿಕೆ ಎಷ್ಟು ಸುರಕ್ಷಿತ ಹೇಗೆ ತಿಳಿದುಕೊಳ್ಳಬೇಕು?
- ರೇಟಿಂಗ್ ಆಧಾರದ ಮೇಲೆ ಎಫ್‌ಡಿ ಆಯ್ಕೆ ಮಾಡಬಹುದು.
- ಹೂಡಿಕೆ ಮಾಡುವ ಮೊದಲು ಕಂಪನಿಯ ರೇಟಿಂಗ್ ಅನ್ನು ಪರೀಕ್ಷಿಸಲು ಮರೆಯದಿರಿ.
- CRISIL, CARE, ICRA ನಂತಹ ಏಜೆನ್ಸಿಗಳು ರೇಟಿಂಗ್ ನೀಡುತ್ತವೆ.
- ಕಂಪನಿ ಎಫ್‌ಡಿ ರೇಟಿಂಗ್ AAA ಇದ್ದರೆ ಮಾತ್ರ ಹೂಡಿಕೆ ಮಾಡುವುದು ಸುರಕ್ಷಿತವಾಗಿದೆ.
- ರೇಟಿಂಗ್ ಕಡಿಮೆಯಾಗಿದ್ದರೆ ರಿಸ್ಕ್ ಹೆಚ್ಚಾಗುತ್ತದೆ.
- ಹೂಡಿಕೆ ಮಾಡುವಾಗ ಜಾಗರೂಕರಾಗಿರುವುದು ಬಹಳ ಮುಖ್ಯ.

ಎಷ್ಟು ಅವಧಿಗೆ ಹೂಡಿಕೆ ಮಾಡಬೇಕು?
- ಕಾರ್ಪೊರೇಟ್ ಎಫ್‌ಡಿಗಳು 1 ವರ್ಷದಿಂದ 7 ವರ್ಷಗಳವರೆಗೆ ಇರುತ್ತವೆ.
- ಬಡ್ಡಿದರ, ಲಾಕ್-ಇನ್ ಅವಧಿ, ಬಂಡವಾಳದ ಸುರಕ್ಷತೆ ಸಹ ಗಮನಿಸಿ.
- ಇವುಗಳ ಆಧಾರದ ಮೇಲೆ, ಎಫ್‌ಡಿ ಅವಧಿಯನ್ನು ಆಯ್ಕೆ ಮಾಡಿ.

ಆನ್ಲೈನ್ ನಲ್ಲಿ ಈ ಖಾತೆ ತೆರೆಯಬಹುದೆ?
- ಆನ್‌ಲೈನ್ ಎಫ್‌ಡಿಗಳನ್ನು ತೆರೆಯಬಹುದು.
- ಇದು ಸಂಪೂರ್ಣವಾಗಿ ಮಧ್ಯವರ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
- ಸೌಲಭ್ಯವಿದ್ದರೆ ನೀವೂ ಆನ್ಲೈನ್ ನಲ್ಲಿ FD ಖಾತೆ ತೆರೆಯಬಹುದು.

ಕಾರ್ಪೋರೆಟ್ FD ಹೂಡಿಕೆಯ ಮೇಲೆ ಎಷ್ಟು ಆದಾಯ ನಿರೀಕ್ಷಿಸಬಹುದು
- ಕಾರ್ಪೊರೇಟ್ ಎಫ್‌ಡಿಯಲ್ಲಿ ಬಡ್ಡಿದರವನ್ನು ನಿಗದಿಪಡಿಸಲಾಗಿದೆ.
- ಎಫ್‌ಡಿ ಹೂಡಿಕೆ ಸಮಯದಲ್ಲಿ ನಿಗದಿ ಪಡಿಸಲಾಗಿರುವ ಬಡ್ಡಿ ದರವನ್ನೇ ನಿಮಗೆ ನೀಡಲಾಗುತ್ತದೆ.
- ಅವಧಿ ಮುಕ್ತಾಯವಾಗುವವರೆಗೆ ಬಡ್ಡಿದರಗಳು ಬದಲಾಗುವುದಿಲ್ಲ.
- ಅದಕ್ಕಾಗಿಯೇ ಅವರನ್ನು 'ಸ್ಥಿರ ಆದಾಯ ಸ್ವತ್ತುಗಳು (Fixed Income Assets)' ಎಂದು ಕರೆಯಲಾಗುತ್ತದೆ.

ಯಾವ ರೀತಿಯ ಹೂಡಿಕೆದಾರರಿಗೆ ಇದು ಉತ್ತಮ 
- ನಿಯಮಿತ ಆದಾಯವನ್ನು ಬಯಸುವವರು ಹಾಗೂ ಬ್ಯಾಂಕುಗಳ ಎಫ್‌ಡಿಗಳಿಗಿಂತ - ಹೆಚ್ಚಿನ ಬಡ್ಡಿದರಗಳನ್ನು ಬಯಸುವವರು ಇರರಲ್ಲಿ ಹೂಡಿಕೆ ಮಾಡಬಹುದು.

ಯಾವ ರೀತಿಯ ಎಚ್ಚರಿಕೆ ಅಗತ್ಯ?
- ಕಂಪನಿಯ ರೇಟಿಂಗ್ ಅನ್ನು ಪರಿಶೀಲಿಸಿ.
- ಹೂಡಿಕೆ ಮಾಡುವ ಮೊದಲು ಸಂಶೋಧನೆ ಮಾಡಿ.
- ಕಂಪನಿಯ ಕಳೆದ 3 ವರ್ಷಗಳ ಆರ್ಥಿಕ ಸ್ಥಿತಿಯನ್ನು ನೋಡಿ.
- ಕಂಪನಿಯ ಲಾಭಾಂಶ ಇತಿಹಾಸವನ್ನು ಕಂಡುಕೊಳ್ಳಿ.
- ಕಂಪನಿ ಇರುವ ಕ್ಷೇತ್ರದ ಕಾರ್ಯಕ್ಷಮತೆಯನ್ನು ನೋಡಿ.

ನೆನಪಿನಲ್ಲಿಡಬೇಕಾದ ಅಂಶಗಳು
- ನಿಮ್ಮ ಹೂಡಿಕೆಯನ್ನು ವಿವಿಧತೆ ಕಾಪಾಡಲು ಒಂದಕ್ಕಿಂತ ಹೆಚ್ಚು ಕಂಪನಿಗಳನ್ನು ಆರಿಸಿ.
- ವಿವಿಧ ವಲಯಗಳು ಮತ್ತು ಕೈಗಾರಿಕೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ.
- ಒಂದೇ ಕಂಪನಿಯಲ್ಲಿ 10% ಕ್ಕಿಂತ ಹೆಚ್ಚಿನ ಹೂಡಿಕೆಯನ್ನು ಮಾಡಬೇಡಿ.
- ಹೆಚ್ಚಿನ ಬಡ್ಡಿದರವನ್ನು ಮಾತ್ರ ನೋಡುವುದು ಸರಿಯಲ್ಲ
- ನಿಗದಿತ ಬಡ್ಡಿ ನೀವು ಎಷ್ಟು ಸಮಯ ಪಡೆಯುತ್ತೀರಿ? ಎಂಬುದನ್ನು ಕಂಡುಕೊಳ್ಳಿ.
- ಅರ್ಜಿ ನಮೂನೆಯಲ್ಲಿ ನೀಡಿರುವ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ.
- ಎಫ್‌ಡಿಗೆ ನಾಮಿನಿಯನ್ನು ನೇಮಿಸಲು ಮರೆಯಬೇಡಿ.

Trending News