ದೇಶಿಯ ಷೇರು ಮಾರುಕಟ್ಟೆಗೂ ಕೊರೋನಾವೈರಸ್....!

ದೇಶೀಯ ಷೇರು ಮಾರುಕಟ್ಟೆಗಳು ಗುರುವಾರ ತೀವ್ರ ನಷ್ಟವನ್ನು ಅನುಭವಿಸಿದ್ದು, ನಿಫ್ಟಿ 50 ಬೆಂಚ್‌ಮಾರ್ಕ್ ಸೂಚ್ಯಂಕವು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ 10,000 ಕ್ಕಿಂತಲೂ ಕಡಿಮೆಯಾಗಿದೆ. ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ 1,929.87 ಪಾಯಿಂಟ್ಗಳಷ್ಟು ಕುಸಿದು ಬೆಳಿಗ್ಗೆ ವ್ಯವಹಾರಗಳಲ್ಲಿ 33,767.53 ಕ್ಕೆ ತಲುಪಿದೆ. ಆ ಮೂಲಕ ಅಕ್ಟೋಬರ್ 6, 2017 ರಿಂದ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ.

Last Updated : Mar 12, 2020, 11:28 AM IST
ದೇಶಿಯ ಷೇರು ಮಾರುಕಟ್ಟೆಗೂ ಕೊರೋನಾವೈರಸ್....!  title=
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶೀಯ ಷೇರು ಮಾರುಕಟ್ಟೆಗಳು ಗುರುವಾರ ತೀವ್ರ ನಷ್ಟವನ್ನು ಅನುಭವಿಸಿದ್ದು, ನಿಫ್ಟಿ 50 ಬೆಂಚ್‌ಮಾರ್ಕ್ ಸೂಚ್ಯಂಕವು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ 10,000 ಕ್ಕಿಂತಲೂ ಕಡಿಮೆಯಾಗಿದೆ. ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ 1,929.87 ಪಾಯಿಂಟ್ಗಳಷ್ಟು ಕುಸಿದು ಬೆಳಿಗ್ಗೆ ವ್ಯವಹಾರಗಳಲ್ಲಿ 33,767.53 ಕ್ಕೆ ತಲುಪಿದೆ. ಆ ಮೂಲಕ ಅಕ್ಟೋಬರ್ 6, 2017 ರಿಂದ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ.

ಈ ಕುಸಿತವು ಪ್ರಮುಖವಾಗಿ ಕೊರೋನವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯ ವಿರುದ್ಧ ಹೋರಾಡಲು ಯುಎಸ್ ಯುರೋಪಿನಿಂದ ತಾತ್ಕಾಲಿಕ ಪ್ರಯಾಣ ನಿಷೇಧವನ್ನು ಘೋಷಿಸಿದ ನಂತರ ಬಂದಿದೆ. ಇಂದು ಬೆಳಿಗ್ಗೆ 10: 30 ಕ್ಕೆ ಸೆನ್ಸೆಕ್ಸ್ 1,859.37 ಪಾಯಿಂಟ್ ಅಥವಾ 5.21 ರಷ್ಟು ಕಡಿಮೆ ವಹಿವಾಟು ನಡೆಸಿ 33,838.03 ಕ್ಕೆ ತಲುಪಿದೆ. ಎಲ್ಲಾ 11 ವಲಯ ಸೂಚ್ಯಂಕಗಳು ಆ ಸಮಯದಲ್ಲಿ ತೀವ್ರ ನಷ್ಟವನ್ನು ಅನುಭವಿಸಿದವು, ದೇಶದ 12 ಪ್ರಮುಖ ಸಾಲಗಾರರ ಮಾಪಕವಾದ ನಿಫ್ಟಿ ಬ್ಯಾಂಕ್ - ಶೇಕಡಾ 5.90 ರಷ್ಟು ಕುಸಿದಿದೆ.

ನಿಫ್ಟಿ ಬುಟ್ಟಿಯಲ್ಲಿರುವ 50 ಷೇರುಗಳೆಲ್ಲವೂ ಕುಸಿದಿವೆ, ಇದರಲ್ಲಿ ಪ್ರಮುಖವಾಗಿ ಯೆಸ್ ಬ್ಯಾಂಕ್, ಟಾಟಾ ಮೋಟಾರ್ಸ್, ವೇದಾಂತ, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್, ಒಎನ್‌ಜಿಸಿ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಶೇಕಡಾ 8.70 ರಿಂದ 11.98 ರವರೆಗಿನ ನಷ್ಟವನ್ನು ಅನುಭವಿಸಿವೆ ಎನ್ನಲಾಗಿದೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಮತ್ತು ಆಕ್ಸಿಸ್ ಬ್ಯಾಂಕ್ ಸೆನ್ಸೆಕ್ಸ್‌ನ ಕುಸಿತದಿಂದ ಹೆಚ್ಚು ನಷ್ಟ ಅನುಭವಿಸಿವೆ, ಒಟ್ಟಾರೆಯಾಗಿ ಸೂಚ್ಯಂಕದಲ್ಲಿ ಸುಮಾರು 800 ಪಾಯಿಂಟ್‌ಗಳ ಕುಸಿತವಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ 9 ರಷ್ಟು ಕುಸಿದು 1,049.50 ರೂ.ಗೆ ತಲುಪಿದೆ, ಕಚ್ಚಾ ತೈಲ ಬೆಲೆಗಳು ಸುಮಾರು ಶೇ 4 ರಷ್ಟು ಕುಸಿದ ನಂತರ. ಸೋಮವಾರ, ಕೊಲ್ಲಿ ಯುದ್ಧದ ನಂತರದ ಏಕದಿನದಲ್ಲಿ ಅತಿದೊಡ್ಡ ಏಕದಿನ ಕುಸಿತವು ಜಗತ್ತಿನಾದ್ಯಂತ ಹೂಡಿಕೆದಾರರ ವಿಶ್ವಾಸವನ್ನು ಘಾಸಿಗೊಳಿಸಿದೆ, ಇದು ಕನಿಷ್ಠ 10 ವರ್ಷಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ತೀವ್ರ ಕುಸಿತಕ್ಕೆ ಕಾರಣವಾಯಿತು.

 

Trending News