ಜೀನ್ಸ್ ಮೇಲೆ ಜೀನ್ಸ್; ಸದ್ಯದಲ್ಲೇ ಬರಲಿದೆ 'Double denim' ಕ್ರೇಜಿ ಪ್ಯಾಂಟ್ಸ್!

ಜೀನ್ಸ್ ಪ್ಯಾಂಟ್ ಕ್ರೇಜ್ ನಿಮಗಿದೆಯೇ? ಹಾಗಿದ್ದರೆ ನಿಮಗಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಕ್ರೇಜಿ ಡೆನಿಮ್ ಪ್ಯಾಂಟ್ಸ್!  

Updated: Aug 10, 2018 , 09:10 PM IST
ಜೀನ್ಸ್ ಮೇಲೆ ಜೀನ್ಸ್; ಸದ್ಯದಲ್ಲೇ ಬರಲಿದೆ 'Double denim' ಕ್ರೇಜಿ ಪ್ಯಾಂಟ್ಸ್!

ಬೆಂಗಳೂರು: ಯಾವಾಗಲೂ ಒಂದೇ ರೀತಿಯ ಬಟ್ಟೆ ಧರಿಸಿ ಬೇಜಾರಾಗಿದೆಯೇ? ನೂತನ ಡಿಸೈನ್ ಗಳ ಉಡುಪುಗಳ ಧರಿಸಲು ಮನ ಕಾತರಿಸುತ್ತಿದೆಯೇ? ಅದರಲ್ಲೂ ಜೀನ್ಸ್ ಪ್ಯಾಂಟ್ ಕ್ರೇಜ್ ನಿಮಗಿದೆಯೇ? ಹಾಗಿದ್ದರೆ ನಿಮಗಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಕ್ರೇಜಿ ಡೆನಿಮ್ ಪ್ಯಾಂಟ್ಸ್!

ಹೌದು, ಯಾವಾಗಲೂ ಒಂದೇ ರೀತಿಯ ಜೀನ್ಸ್ ಧರಿಸಿದರೆ ಹೇಗೆ? ಸ್ವಲ್ಪವಾದರೂ ಬದಲಾವಣೆ ಬೇಕಲ್ಲವೇ? ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಟ್ರೆಂಡ್ ಬದಲಾಗುತ್ತಿದೆ. ಯುವಕ ಯುವತಿಯರಂತೂ ಟ್ರೆಂಡಿ, ಕ್ರೇಜಿ ಉಡುಪುಗಳನ್ನು ಧರಿಸಲು ಇಚ್ಚಿಸುತ್ತಾರೆ. ಅಂತಹವರಿಗಾಗಿಯೇ ರಾಕ್-ಎನ್-ರೋಲ್ ಬ್ರಾಂಡ್ ವಿನೂತನ ರೀತಿಯಲ್ಲಿ ಜೀನ್ಸ್ ಪ್ಯಾಂಟ್ಗಳು ಮತ್ತು ಶಾರ್ಟ್ಸ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅದೇ 'Double back' ಜೀನ್ಸ್; Double denim ಕ್ರೇಜಿ ಪ್ಯಾಂಟ್ಸ್!

ಈ ಮಾದರಿಯ ಜೀನ್ಸ್ ಪ್ಯಾಂಟ್ಗಳು ಮತ್ತು ಶಾರ್ಟ್ಸ್ ಗಳು ಜ್ಯಾಸ್ಪರ್ ಮತ್ತು ತಿಲ್ಲಿ ಡೆನಿಮ್ ಶೈಲಿಗಳ ಮಿಶ್ರಣವಾಗಿದ್ದು, ಈ Double denim ಜೀನ್ಸ್, ಎರಡು ಪ್ಯಾಂಟ್ ಅಥವಾ ಶಾರ್ಟ್ಸ್ ಗಳನ್ನು ಧರಿಸಿದಂತೆ ಕಾಣುತ್ತದೆ. ಒಂದು ಜೀನ್ಸ್ ಪ್ಯಾಂಟ್ ಮೇಲೆ ಮತ್ತೊಂದು ಜೀನ್ಸ್ ಧರಿಸಿದಂತೆ ಇದು ಕಾಣುತ್ತದೆ. 

ಈ ಮಾದರಿಯ ಜೀನ್ಸ್ ಪ್ಯಾಂಟ್ಗಳು ವಿಚಿತ್ರ ಎನಿಸಿದರೂ, Double denim ಕ್ರೇಜಿ ಪ್ಯಾಂಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಯುವಜನರಲ್ಲಿನ ಜೀನ್ಸ್ ಕ್ರೇಜ್ ಮತ್ತಷ್ಟು ಹೆಚ್ಚುವಂತೆ ಮಾಡುತ್ತಿದೆ.