Madhya Pradesh Viarl Video
: ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ರೆ, ಮಾಲೀಕ ಮಾತ್ರ ಮೊಬೈಲ್ ಫೋನ್‌ನಲ್ಲಿ ಮಗ್ನನಾಗಿದ್ದ ಘಟನೆ ನಡೆದಿದೆ. ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಅಗರ್ ಮಾಲ್ವಾ ಜಿಲ್ಲೆಯ ಸುನ್ನೀರ್‌ನಲ್ಲಿರುವ ತಿರುಪತಿ ಟ್ರೇಡರ್ಸ್‌ನಲ್ಲಿ ಈ ಘಟನೆ ನಡೆದಿದೆ. ಸೋಮವಾರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ರಫೀಕ್‌ಗೆ ಇದ್ದಕ್ಕಿದ್ದಂತೆಯೇ ಎದೆ ನೋವು ಕಾಣಿಸಿಕೊಂಡಿದೆ. ಆತ ಕುರ್ಚಿಯ ಮೇಲೆಯೇ ಕುಸಿದುಬಿದ್ದಿದ್ದಾನೆ. ರಫೀಕ್ ಸುಮಾರು ಆರು ನಿಮಿಷಗಳ ಕಾಲ ಎದೆ ನೋವಿನಿಂದ ಒದ್ದಾಡಿದ್ದು, ಅದನ್ನ ನೋಡಿದರೂ ಸಹ ಅಂಗಡಿಯ ಮಾಲೀಕ ಮತ್ತು ಅಲ್ಲಿದ್ದ ಯಾರೂ ಸಹ ಆತನನ್ನ ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿಲ್ಲ.
ಇದನ್ನೂ ಓದಿ: ದೇಶದಲ್ಲಿ ಮತ್ತೊಂದು ವಿಮಾನ ಅವಘಡ! ಚೆನ್ನೈನಲ್ಲಿ ಇಂಡಿಗೋ ವಿಮಾನದ ವಿಂಡ್ ಶೀಲ್ಡ್ ಬಿರುಕು! ಎಲ್ಲಾ 76 ಪ್ರಯಾಣಿಕರು ಸುರಕ್ಷಿತ
ರಫೀಕ್ ಒದ್ದಾಡುತ್ತಿರುವ ವಿಡಿಯೋ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಘಟನೆ ಸಂಬಂಧ ಅಂಗಡಿ ಮಾಲೀಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸಿಸಿಟಿವಿ ದೃಶ್ಯದಲ್ಲಿ ಅಂಗಡಿ ಮಾಲೀಕ ಕುರ್ಚಿಯಲ್ಲಿ ಕುಳಿತಿರುವುದು ಕಾಣಿಸಿಕೊಂಡಿದೆ. ಆಗ ಅಲ್ಲಿಗೆ ಬಂದ ರಫೀಕ್ ಎದೆ ನೋವಿನಿಂದ ಪಕ್ಕಲ್ಲಿದ್ದ ಕುರ್ಚಿಯಲ್ಲಿ ಕುಳಿತಿರುವುದನ್ನ ಕಾಣಬಹುದು. ಆದರೆ ಮಾಲೀಕ ರಫೀಕ್‌ನನ್ನ ನೋಡಿದರೂ ಸಹ ನಿರ್ಲಕ್ಷ್ಯವಹಿಸಿದ್ದು, ತನ್ನ ಮೊಬೈಲ್ ಫೋನ್ ನೋಡುತ್ತಾ ಕುಳಿತಿರುವುದನ್ನ ಕಾಣಬಹುದು.
ಸುಮಾರು ಆರು ನಿಮಿಷಗಳ ಕಾಲ ರಫೀಕ್ ಒಡ್ಡಾಡಿದ್ದಾನೆ. ಅಷ್ಟೊತ್ತು ಮಾಲೀಕ ಒಮ್ಮೆಯೂ ಎದ್ದು ರಫೀಕ್‌ನ ಆರೋಗ್ಯ ವಿಚಾರಿಸುವ ಪ್ರಯತ್ನ ಮಾಡಿಲ್ಲ. ಕೊನೆಗೆ ರಫೀಕ್ ಒದ್ದಾಡಿ ಪ್ರಜ್ಞಾಹೀನ ಸ್ಥಿತಿಗೆ ಬಂದಾಗ ಅಂಗಡಿ ಮಾಲೀಕ ಹಾಗೂ ಅಲ್ಲಿದ್ದ ಇತರ ಕೆಲಸಗಾರರು ಆತನನ್ನ ಆಸ್ಪತ್ರೆಗೆ ಕೆರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ತುಂಬಾ ತಡವಾಗಿದ್ದು, ರಫೀಕ್ ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಈ ಘಟನೆ ಅಂಗಡಿ ಮಾಲೀಕನ ಮಾನವೀಯತೆಯ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟು ಹಾಕಿದೆ. ಈ ವಿಡಿಯೋವನ್ನ ಲಕ್ಷಾಂತರ ಜನರು ವೀಕ್ಷಿಸಿದ್ದು, ಅಂಗಡಿ ಮಾಲೀಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಾಮಾನ್ಯ ಜ್ಞಾನ: ಭಾರತ ಸರ್ಕಾರ ತನ್ನ ಭೂಮಿಯನ್ನು ಬೇರೆ ದೇಶಕ್ಕೆ ಮಾರಾಟ ಮಾಡಬಹುದೇ?









