ನವದೆಹಲಿ: ಬಹುತೇಕ ಪಕ್ಷಗಳು ಎನ್.ಡಿ.ಎ ಸರ್ಕಾರಕ್ಕೆ ಬಹುಮತ ನೀಡಿರುವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣೋತ್ತರ ಸಮೀಕ್ಷೆಗಳ ಕುರಿತಾಗಿ ರಾಹುಲ್ ಗಾಂಧಿ ಮೌನ ಮುರಿದು ಅವುಗಳನ್ನು ನಕಲಿ ಸಮೀಕ್ಷೆಗಳು ಎಂದು ಕರೆದಿದ್ದಾರೆ.
कांग्रेस पार्टी के प्रिय कार्यकर्ताओं ,
अगले 24 घंटे महत्वपूर्ण हैं। सतर्क और चौकन्ना रहें। डरे नहीं। आप सत्य के लिए लड़ रहे हैं । फर्जी एग्जिट पोल के दुष्प्रचार से निराश न हो। खुद पर और कांग्रेस पार्टी पर विश्वास रखें, आपकी मेहनत बेकार नहीं जाएगी।
जय हिन्द।
राहुल गांधी
— Rahul Gandhi (@RahulGandhi) May 22, 2019
ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ " ನನ್ನ ಪ್ರಿಯ ಕಾಂಗ್ರೆಸ್ ಕಾರ್ಯಕರ್ತರೆ. ಮುಂದಿನ 24 ಗಂಟೆಗಳು ಮುಖ್ಯವಾದವು. ಆದ್ದರಿಂದ ನೀವು ಎಚ್ಚರದಿಂದಿರಿ ಮತ್ತು ಜಾಗರೂಕತೆಯಿಂದಿರಿ, ಹೆದರಬೇಡಿ. ನೀವು ಸತ್ಯಕ್ಕಾಗಿ ಹೋರಾಡುತ್ತಿದ್ದಿರಿ. ನಕಲಿ ಚುನಾವಣಾ ಸಮೀಕ್ಷೆಗಳಿಂದ ನೀವು ಪ್ರಚೋದನೆಗೆ ಒಳಗಾಗದಿರಿ. ನಿಮ್ಮ ಬಗ್ಗೆ ಕಾಂಗ್ರೆಸ್ ಪಕ್ಷದ ಬಗ್ಗೆ ನಂಬಿಕೆ ಇರಲಿ. ನಿಮ್ಮ ಶ್ರಮವೆಂದು ವ್ಯರ್ಥವಾಗುವುದಿಲ್ಲ" ಎಂದು ರಾಹುಲ್ ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಧೈರ್ಯ ತುಂಬಿದ್ದಾರೆ.
ಏಳು ಹಂತದ ಚುನಾವಣೆ ಮುಗಿದ ನಂತರ ಬಹುತೇಕ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ಡಿಎ ಪಕ್ಷಕ್ಕೆ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದ್ದವು. ಈ ಹಿನ್ನಲೆಯಲ್ಲಿ ಈಗ ರಾಹುಲ್ ಗಾಂಧಿ ಇಂತಹ ಸಮೀಕ್ಷೆಗಳಿಂದ ಧೃತಿಗೆಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ರೀತಿಯಾಗಿ ಪ್ರಿಯಾಂಕಾ ಗಾಂಧಿ ಕೂಡ ಇಂತಹ ಊಹಾಪೋಹಗಳಿಗೆ ಕಿವಿ ಕೊಡಬೇಡಿ.ಸ್ಟ್ರಾಂಗ್ ರೂಂ ಮತ್ತು ಮತ ಎಣಿಕೆ ಕೇಂದ್ರದ ಹತ್ತಿರ ನಿಮ್ಮ ಹದ್ದಿನ ಕಣ್ಣು ಎಂದಿನಂತೆ ಮುಂದುವರೆಯಲಿ ನಿಮ್ಮ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ ಎಂದು ಆಡಿಯೋ ಸಂದೇಶದಲ್ಲಿ ಮನವಿ ಮಾಡಿಕೊಂಡಿದ್ದರು.