ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಮಾತೃವಿಯೋಗ

ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ತಾಯಿ ಸುಲೋಚನಾ ಸುಬ್ರಹ್ಮಣ್ಯಂ(80) ನಿಧನರಾಗಿದ್ದಾರೆ. ಈ ಸಂಗತಿಯನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

Last Updated : Sep 19, 2020, 11:22 PM IST
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಮಾತೃವಿಯೋಗ

ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ತಾಯಿ ಸುಲೋಚನಾ ಸುಬ್ರಹ್ಮಣ್ಯಂ(80) ನಿಧನರಾಗಿದ್ದಾರೆ. ಈ ಸಂಗತಿಯನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

'ನನ್ನ ತಾಯಿ ಸುಲೋಚನಾ ಸುಬ್ರಹ್ಮಣ್ಯಂ ಅವರ ನಿಧನವನ್ನು ತಿಳಿಸಲು ದುಃಖತಪ್ತನಾಗಿದ್ದೇನೆ. ಅವರ ಸ್ನೇಹಿತರು ಮತ್ತು ಹಿತೈಷಿಗಳನ್ನು ಅವರ ನೆನಪುಗಳಲ್ಲಿ ಇರಿಸಿಕೊಳ್ಳಲು ನಾವು ವಿನಂತಿಸಿಕೋಳ್ಳುತ್ತೇನೆ. ಅವಳ ಅನಾರೋಗ್ಯದ ಸಮಯದಲ್ಲಿ ನೆರವಾದ ಎಲ್ಲರಿಗೂ ನಮ್ಮ ಕುಟುಂಬವು ಕೃತಜ್ಞವಾಗಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸಚಿವ ಕಿರೆನ್ ರಿಜಿಜು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇತರರು ಸಂತಾಪ ಸೂಚಿಸಿದ್ದಾರೆ. 

More Stories

Trending News